ಕಡಹಿನಬೈಲು ಏತ ನೀರಾವರಿಗೆ ಸಿಎಂ ಸಿದ್ದರಾಮಯ್ಯ ಅವರು 15 ಕೋಟಿ ರೂ. ಬಿಡುಗಡೆ ಮಾಡಿದ ಪರಿಣಾಮ 69 ಕೆರೆಗಳಿಗೆ ನೀರು ತುಂಬುತ್ತಿದ್ದು, ಸಾವಿರಾರು ಎಕರೆಯಲ್ಲಿಸಮೃದ್ಧ ಫಸಲು ಕಂಡಿದೆ. ಹೊನ್ನೇಕೊಡಿಗೆ ಸೇತುವೆ ಹೃದಯಗಳ ಸಂಬಂಧ. ನರಸಿಂಹರಾಜಪುರ ಪಟ್ಟಣದಿಂದ ಹೊನ್ನೇಕೊಡಿಗೆ ಸಂಪರ್ಕ ರಸ್ತೆ ವಿಸ್ತರಣೆಯಲ್ಲಿಮನೆ ಕಳೆದುಕೊಳ್ಳುವವರಿಗೆ 40 ಕೋಟಿ ರೂ. ಪರಿಹಾರ ಸೇರಿದಂತೆ ಒಟ್ಟು 65 ಕೋಟಿ ಬಿಡುಗಡೆಗೊಂಡಿದೆ. 11 ಜನ ಪರಿಹಾರ ಸಾಲದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂದಲ್ಲಾನಾಳೆ ರಸ್ತೆ ಕಾಮಗಾರಿ ನಡೆದೇ ತೀರುತ್ತದೆ. ಇದು ಊರಿನ ಕೆಲಸ. ವಿರೋಧಿಸುವವರಿಗೆ ಒಳ್ಳೆಯ ಬುದ್ಧಿ ಬರಲಿ.
- ಎಂ.ಶ್ರೀನಿವಾಸ್ , ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ

