ಕೆರೆ ನೀರಿನಲ್ಲಿಮುಳುಗಿ ವ್ಯಕ್ತಿ ಸಾವು

Contributed byrravishankara07@gmail.com|Vijaya Karnataka

ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆಯಲ್ಲಿ ದುರಂತವೊಂದು ಸಂಭವಿಸಿದೆ. ಬೆಂಗಳೂರಿನ ನಿವಾಸಿಯೊಬ್ಬರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಬಂಧಿಕರೊಂದಿಗೆ ಜಮೀನು ನೋಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳೀಯರ ನೆರವಿನಿಂದ ಹೊರಗೆ ತೆಗೆಯುವಷ್ಟರಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

tragic incident in gundamagere man drowns while swimming

ಕೆರೆ ನೀರಿನಲ್ಲಿಮುಳುಗಿ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಈಜಾಡಲು ತೆರಳಿದ್ದ ವ್ಯಕ್ತಿ ಕೆರೆ ನೀರಲ್ಲಿಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಗುಂಡಮಗೆರೆಯಲ್ಲಿನಡೆದಿದೆ.

ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಶ್ರೀನಿವಾಸಾಚಾರ್ (50) ಮೃತರು.

ಶ್ರೀನಿವಾಸಾಚಾರ್ ಅವರು ಗುಂಡಮಗೆರೆ ಬಳಿ ಜಮೀನು ನೋಡಲೆಂದು ಬಾಮೈದನೊಂದಿಗೆ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗಿದ್ದರು. ಈ ವೇಳೆ ಗುಂಡಮಗೆರೆ ಕೆರೆ ವೀಕ್ಷಿಸಲು ತೆರಳಿದ್ದಾಗ ಈಜಲು ಅವರು ಕೆರೆಗೆ ಇಳಿದಿದ್ದು, ಆ ವೇಳೆ ನೀರಲ್ಲಿಮುಳುಗಿ, ಮೃತಪಟ್ಟಿದ್ದಾರೆ. ಬಾಮೈದ ಗಮನಿಸಿ ಸಮೀಪದಲ್ಲೇ ಇದ್ದ ಯುವಕರನ್ನು ಸಹಾಯಕ್ಕೆ ಕರೆದಿದ್ದಾರೆ. ನೆರವಿಗೆ ಬಂದವರು ಶ್ರೀನಿವಾಸಾಚಾರ್ ಅವರನ್ನು ನೀರಿಂದ ಹೊರಗೆ ತಂದಿದ್ದರು. ಆದರೆ ಆ ವೇಳೆಗಾಗಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.