ಮಣ್ಣಿನ ಮಡಕೆಗಳಿಗೆ ಡಿಮ್ಯಾಂಡ್

Contributed bydevarajanayaka75@gmail.com|Vijaya Karnataka

ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಜನರು ತಂಪು ಪಾನೀಯಗಳ ಬದಲಿಗೆ ಮಣ್ಣಿನ ಮಡಕೆ ನೀರು, ತಾಳೆ ಹಣ್ಣು, ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದರಿಂದ ಮಣ್ಣಿನ ಮಡಕೆ ಮತ್ತು ತಾಳೆ ಹಣ್ಣು ವ್ಯಾಪಾರದಲ್ಲಿ ಚೇತರಿಕೆ ಕಂಡುಬಂದಿದೆ. ಆರೋಗ್ಯ ಅಧಿಕಾರಿಗಳು ಸಹಜ ಉತ್ಪನ್ನಗಳ ಬಳಕೆಗೆ ಸಲಹೆ ನೀಡಿದ್ದಾರೆ. ಇದು ಬೇಸಿಗೆಯಲ್ಲಿ ಜನರಿಗೆ ನೆಮ್ಮದಿ ನೀಡಿದೆ.

unprecedented demand for clay pots in summer

ಬೇಸಿಗೆ ಪ್ಯಾಕೇಜಿಗೆ ಪ್ಯಾಕೇಜ್

ಮಣ್ಣಿನ ಮಡಕೆಗಳಿಗೆ ಡಿಮ್ಯಾಂಡ್

ದೇವರಾಜ ಎಚ್ .ನಾಯಕ ಹೊಸಪೇಟೆ(ವಿಜಯನಗರ)

ಜಿಲ್ಲೆಯ ಆರು ತಾಲೂಕುಗಳಲ್ಲಿಬಿಸಿಲ ಬೇಗೆ ಹೆಚ್ಚಿದ್ದು,ಮಣ್ಣಿನ ಮಡಕೆ ಖರೀದಿಗೆ ಮುಂದಾಗಿದ್ದಾರೆ.ಇನ್ನು ಕೆಲವರು ಫ್ರೀಜ್ , ಎಸಿ, ಏರ್ ಕೂಲರ್ , ಫ್ಯಾನ್ ಗಳ ಮೊರೆ ಹೋಗಿರುವುದು ಕಂಡು ಬಂದಿದೆ. ನಗರದ ನಿವಾಸಿಗಳು ಬಿಸಿಲ ಬೇಗೆ ತಣಿಸಿಕೊಳ್ಳಲು ಮಣ್ಣಿನ ಮಡಕೆಯ ನೀರು ಸೇವಿಸಿ ತಂಪು ಅನುಭವಿಸುತ್ತಿದ್ದಾರೆ.ನಗರದಲ್ಲಿಮಡಕೆಗಳು ರಿಯಾಯಿತಿಯಲ್ಲಿಸಿಗುವುದರಿಂದ ಎಲ್ಲವರ್ಗಗಳ ಜನರು ಮುಗಿ ಬಿದ್ದು ಖರೀದಿಸುತ್ತಿದ್ದಾರೆ.ಮಡಕೆಯ ನೀರು ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಗೆ ನೆರವಾಗಲಿದೆ ಎಂಬ ಕಾರಣಕ್ಕೆ ಜನರು ಹೆಚ್ಚು ಮಡಕೆಯ ನೀರು ಉಪಯೋಗಿಸುತ್ತಿದ್ದಾರೆ.

ನಗರದಲ್ಲಿಕಲ್ಲಂಗಡಿ, ಕಿತ್ತಾಳೆ, ಸೌತೆಕಾಯಿ, ದ್ರಾಕ್ಷಿ, ಲಿಂಬೆ ಹಣ್ಣು, ಪಪ್ಪಾಯ, ತಾಳೆ ಹಣ್ಣು ಸೇವನೆಗೆ ಮುಂಂದಾಗಿದ್ದಾರೆ. ಕಲ್ಲಂಗಡಿಯಲ್ಲಿಶೇ.92 ರಷ್ಟು ನೀರಿನ ಅಂಶವಿರುತ್ತದೆ.ಬೇಸಿಗೆಯಲ್ಲಿದೇಹದ ನೀರಿನ ಸಮತೋಲನ ಕಾಪಾಡುತ್ತದೆ. ವಿಟಮಿನ್ ಎ, ಬಿ6 ಮತ್ತು ಸಿ ಹೊಂದಿದ್ದು ಫೈಬರ್ ಮತ್ತು ನೀರಿನ ಅಂಶ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಲಿದೆ.

ಕೋಟ್

ನಗರದಲ್ಲಿತಾಪಮಾನ ಹೆಚ್ಚುತ್ತಿರುವುದರಿಂದ ತಾಳೆ ಹಣ್ಣಿನ ವ್ಯಾಪಾರ ಚೆನ್ನಾಗಿದೆ.ಈ ಬಾರಿ ಸ್ವಲ್ಪ ಹಣ ಕೈಸೇರಿದೆ.ಬೇಸಿಗೆ ಮುಗಿಯುವವರೆಗೂ ವ್ಯಾಪಾರಿಗಳ ಬದುಕು ಸುಧಾರಿಸಲಿದೆ

- ಸಣ್ಣ ಮಾಯಪ್ಪ, ತಾಳೆ ಹಣ್ಣು ವ್ಯಾಪಾರಿ, ಹೊಸಪೇಟೆ

ಕೋಟ್

ನಗರದ ಜನರು ತಂಪು ಪಾನೀಯಗಳ ಮೊರೆ ಹೋಗದೆ ನೈಸರ್ಗಿಕವಾಗಿ ದೊರೆಯುವ ಎಳನೀರು, ತಾಳೆ ಹಣ್ಣು, ನಿರ್ಜಲೀಕರಣ ತಡೆಯುವ ಹಣ್ಣುಗಳನ್ನು ಹೆಚ್ಚು ಬಳಕೆ ಮಾಡಬೇಕು.

- ಡಾ.ಜಂಬಯ್ಯ, ಜಿಲ್ಲಾಆರ್ ಸಿಎಚ್ ಆರೋಗ್ಯಾಧಿಕಾರಿ, ವಿಜಯನಗರ

ಎಚ್ ಪಿಟಿ27ದೇವರಾಜ04 : ಹೊಸಪೇಟೆಯ ಮಾರುಕಟ್ಟೆ ಬಳಿ ತಾಳೆ ಹಣ್ಣು ಮಾರಾಟ ಮಾಡುತ್ತಿರುವುದು.

ಎಚ್ ಪಿಟಿ27ದೇವರಾಜ05 : ಹೊಸಪೇಟೆಯ ಮೇನ್ ಮಾರ್ಕೆಟ್ ಹತ್ತಿರ ಮಣ್ಣಿನ ಮಡಕೆ ಖರೀದಿಸುತ್ತಿರುವುದು.

ಎಚ್ ಪಿಟಿ27ದೇವರಾಜ06 : ಸಣ್ಣ ಮಾಯಪ್ಪ

ಎಚ್ ಪಿಟಿ27ದೇವರಾಜ07 : ಡಾ.ಜಂಬಯ್ಯ.