ಕಾವ್ಯದಿಂದ ಸಮಾಜ ಪ್ರಗತಿ ಸಾಧ್ಯ
ವಿಜಯಪುರ: ‘‘ ಯುವ ಕವಿಗಳು ಹೆಚ್ಚು ಓದಿನತ್ತ ಒಲವು ತೋರಿಸಬೇಕು. ಶ್ರೇಷ್ಠ ಸಾಹಿತಿಗಳ ಕಥೆ, ಕಾದಂಬರಿ, ಸಾಹಿತ್ಯ ಕೃತಿಗಳನ್ನು ಓದಿದಾಗ ಜ್ಞಾನ ವೃದ್ಧಿಗೊಂಡು ಗಟ್ಟಿ ಸಾಹಿತ್ಯ ರಚಿಸಲು ಸಾಧ್ಯ. ಕಾವ್ಯಕ್ಕೆ ಅದ್ಭುತವಾದ ಶಕ್ತಿಯಿದೆ. ಉತ್ತಮ ಕಾವ್ಯದಿಂದ ಸಮಾಜದ ಪ್ರಗತಿ ಸಾಧ್ಯ,’’ ಎಂದು ಸಾಹಿತಿ ಎ.ಎಚ್ .ಕೊಳಮಲಿ ಹೇಳಿದರು.
ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿಮೇ ಸಾಹಿತ್ಯ ಮೇಳ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿಹಮ್ಮಿಕೊಂಡಿರುವ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ ಕಾರ್ಯಕ್ರಮದಲ್ಲಿಭಾನುವಾರ ಸಂಜೆ ನಡೆದ ಯುವ ಕವಿಗೋಷ್ಠಿಯಲ್ಲಿಅವರು ಮಾತನಾಡಿದರು.
‘‘ಬುದ್ಧ, ಬಸವ, ಅಂಬೇಡ್ಕರ್ ದೇಶದ ಅಮೂಲ್ಯ ರತ್ನಗಳು. ಅವರ ಕೊಡುಗೆ ಅಪಾರ. ಅವರ ವಿಚಾರಧಾರೆಗಳು ಮನುಕುಲವನ್ನು ಉದ್ಧಾರ ಮಾಡಿವೆ. ಯುವ ಪೀಳಿಗೆ ಹೆಚ್ಚೆಹೆಚ್ಚು ದೇಶದ ಮಹಾನ್ ಚೇತನರ ಚರಿತ್ರೆಯನ್ನು ತಿಳಿದುಕೊಳ್ಳಬೇಕು,’’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಶುರಾಮ ಶಿವಶರಣ ಮಾತನಾಡಿ, ‘‘ಸಾಹಿತ್ಯ ಎಂದೆಂದಿಗೂ ಕರಗದೇ ಇರುವ ಸಂಪತ್ತು. ಜಗತ್ತಿನ ಭವಿಷ್ಯ ಯುವಕರ ಮೇಲೆ ನಿಂತಿದೆ. ಯುವಕರು ಸೃಜನಶೀಲ ಸಾಹಿತ್ಯವನ್ನು ರಚಿಸಬೇಕು,’’ ಎಂದರು.
15ಕ್ಕೂ ಹೆಚ್ಚು ಕವಿಗಳು ಕವನವನ್ನು ವಾಚಿಸಿದರು. ಬಸವರಾಜ ಸೂಳಿಭಾವಿ, ಅನಿಲ್ ಹೊಸಮನಿ, ಚನ್ನು ಕಟ್ಟಿಮನಿ, ವೈ.ಎಸ್ .ಗುಣಕಿ, ಸಂಘರ್ಷ ಹೊಸಮನಿ, ಸುರೇಶ ಬಿಜಾಪುರ, ಶಿವು ಕಟ್ಟಿಮನಿ, ಕಾಶಿನಾಥ ಕೆ., ಭೋಗೇಶ ಸೋಲಾಪುರ ಇತರರಿದ್ದರು.
ಕವಿ-ಬಿಜೆಪಿ13
ವಿಜಯಪುರದಲ್ಲಿನಡೆದಿರುವ ಪುಸ್ತಕ ಮೇಳದ ಯುವ ಕವಿಗೋಷ್ಠಿಯಲ್ಲಿಸಾಹಿತಿ ಎ.ಎಚ್ .ಕೊಳಮಲಿ ಮಾತನಾಡಿದರು.

