ಟ್ರಂಪ್ ಪವಾಡ ಅವತಾರ

Contributed byBeeralinge gowda|Vijaya Karnataka
Vijay Karnataka

‘‘ಪೋಪ್ 14 ಎಡಪಂಥೀಯರ ಪರವಾಗಿ ವರ್ತಿಸುತ್ತಿದ್ದಾರೆ. ರಾಜಕಾರಣಿಯಂತೆ ವರ್ತಿಸುವುದನ್ನು ಬಿಟ್ಟು ಧರ್ಮಗುರುವಿನ ಕೆಲಸ ಮಾಡಲಿ. ನಾನು ಪೋಪ್ ಲಿಯೋ ಅಭಿಮಾನಿ ಅಲ್ಲ. ಇರಾನ್ ಪರಮಾಣು ಶಸ್ತಾ್ರಸ್ತ್ರ ಹೊಂದುವುದನ್ನು ಒಪ್ಪುವ ಪೋಪ್ ನನಗೆ ಬೇಡ,’’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಕೃತಕ ತಂತ್ರಜ್ಞಾನ ಬಳಸಿ ತಾವೇ ಯೇಸು ಕ್ರಿಸ್ತ ಎಂಬಂತೆ ಬಿಂಬಿಸಿಕೊಂಡ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ರುಥ್ ನಲ್ಲಿಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.