ಹೆಣ್ಮಕ್ಕಳ ಹೊಸ ಸೆಳೆತ ಹೈ ನೆಕ್ ಫ್ಯಾಷನ್
ಇಂಟ್ರೊ : ಬೆನ್ನು ಮುಚ್ಚುವ ರವಿಕೆಗಳು ವಿಭಿನ್ನ ವಿನ್ಯಾಸಗಳೊಂದಿಗೆ ಮೋಡಿ ಮಾಡುತ್ತಿವೆ.
ಪಂಚಮಿ ಬಾಕಿಲಪದವು
ಒಂದು ಕಾಲದಲ್ಲಿಡೀಪ್ ಬ್ಯಾಕ್ ನೆಕ್ ಬ್ಲೌಸ್ ಗಳನ್ನು ಹೆಣ್ಣುಮಕ್ಕಳು ಇಷ್ಟಪಟ್ಟು ಧರಿಸುತ್ತಿದ್ದರು. ಆದರೆ ಇಂದು ಫ್ಯಾಷನ್ ಬದಲಾಗಿ ಹೈ ನೆಕ್ ಬ್ಲೌಸ್ ಗಳು ಹೆಣ್ಣು ಮಕ್ಕಳ ಮನ ಮೀಟಿವೆ. ಸಾಂಪ್ರದಾಯಿಕ ಮತ್ತು ಆಧುನಿಕ ಎರಡಕ್ಕೂ ಹೊಂದಿಕೆಯಾಗುವ ಈ ಸ್ಟೈಲ್ ಫ್ಯಾಷನ್ ಲೋಕದಲ್ಲಿಹೊಸ ಹೊಳಪು ಮೂಡಿಸಿದೆ.
ಹೊಸ ಟ್ರೆಂಡ್
ರವಿಕೆಯ ಹಿಂಭಾಗದಲ್ಲಿಹೆಚ್ಚು ಓಪನ್ ಕಟ್ ಇರುವ ಬ್ಲೌಸ್ ಗಳು ಹಿಂದೆ ಫ್ಯಾಷನ್ ನ ಸಂಕೇತವಾಗಿತ್ತು. ಆದರೆ ಈಗ ಹೆಣ್ಣುಮಕ್ಕಳು ಹಿಂದಿನ ಫ್ಯಾಷನ್ ಗೆ ವಿರುದ್ಧವಾಗಿ ನಿಂತಿದ್ದಾರೆ. ಹೆಚ್ಚು ರಿವೀಲಿಂಗ್ ಸ್ಟೈಲ್ ಗಳಿಗಿಂತ, ಹೈ ನೆಕ್ ಡಿಸೈನ್ ಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ.
ರಾಯಲ್ ಲುಕ್
ಹೈ ನೆಕ್ ಬ್ಲೌಸ್ ಗಳು ನೋಡಲು ಸಿಂಪಲ್ ಎನ್ನಿಸಿದರೂ, ಅವು ನೀಡುವ ಲುಕ್ ರಾಯಲ್ ಆಗಿರುತ್ತವೆ. ಹಿಂಭಾಗ ಸಂಪೂರ್ಣವಾಗಿ ಕವರ್ ಆಗಿರುವುದರಿಂದ ವಿಭಿನ್ನ ರೀತಿಯ ಸೌಂದರ್ಯ ನೀಡುತ್ತವೆæ. ಗಂಭೀರ ನೋಟವನ್ನು ಈ ಬ್ಲೌಸ್ ಗಳು ಸೃಷ್ಟಿಸುತ್ತವೆ.
ಡಿಸೈನ್ ನಲ್ಲಿಕಲಾತ್ಮಕತೆ
ಈ ಬ್ಲೌಸ್ ಗಳ ವಿಶೇಷತೆ ಡಿಸೈನ್ ನಲ್ಲಿಕಾಣಿಸುತ್ತವೆ. ಜರೀ ವರ್ಕ್, ಎಂಬ್ರಾಯ್ಡರಿ ಮೊದಲಾದವುಗಳಲ್ಲಿಹಲವು ವಿನ್ಯಾಸಗಳನ್ನು ರಚಿಸಬಹುದು. ಹೂವು, ದೇವರ ಚಿತ್ರಗಳು, ಮದುವೆ, ಸೀಮಂತದ ವಿನ್ಯಾಸಗಳು ಬ್ಲೌಸ್ ಗೆ ಜೀವ ತುಂಬುವಂತೆ ಕಾಣಿಸುತ್ತವೆ.
ಎಲ್ಲಾಸೀರೆಗೂ ಸೂಕ್ತ
ಹೈ ನೆಕ್ ಬ್ಲೌಸ್ ಗಳು ವಿವಿಧ ರೀತಿಯ ಸೀರೆಗಳ ಜತೆ ಹೊಂದಿಕೊಳ್ಳುತ್ತವೆ. ಕಾಟನ್ ಸೀರೆಗಳ ಜತೆ ಧರಿಸಿದರೆ ಸಿಂಪಲ್ ಲುಕ್ ಸಿಗುತ್ತದೆ. ಸಿಲ್ಕ… ಸೀರೆಗಳ ಜತೆ ಧರಿಸಿದರೆ ಗ್ರ್ಯಾಂಡ್ ಫೀಲ್ ಕೊಡುತ್ತದೆ. ಹೀಗೆ ಎಲ್ಲಾಸೀರೆಗಳಿಗೂ ಈ ಬ್ಲೌಸ್ ಗಳು ಹೊಂದಿಕೆಯಾಗುತ್ತವೆ. ಕಾಂಟ್ರಾಸ್ವ್ ಬಣ್ಣದ ಸೀರೆಯೊಂದಿಗೆಯೂ ಧರಿಸಬಹುದು.
ಬಾಕ್ಸ್
ಸ್ಟೈಲಿಂಗ್ ಸೀಕ್ರೆಟ್
ಈ ಬ್ಲೌಸ್ ನ ಸೌಂದರ್ಯ ಹೆಚ್ಚಿಸಲು ಸರಿಯಾದ ರೀತಿಯಲ್ಲಿಕೂದಲನ್ನು ಅಲಂಕರಿಸುವುದು ಮುಖ್ಯ. ಕೂದಲನ್ನು ಬನ್ ಮಾಡಿಕೊಂಡರೆ ಬ್ಯಾಕ್ ಡಿಸೈನ್ ಹೆಚ್ಚು ಗಮನ ಸೆಳೆಯುತ್ತದೆ. ಜತೆಗೆ ಸರಳ ಆಭರಣ ಬಳಸಿದರೆ ಮತ್ತಷ್ಟು ಮೆರುಗು ಲಭಿಸುತ್ತದೆ.
ಬಾಕ್ಸ್
ಬೇಸಿಗೆಗೆ ಬೆಸ್ವ್
ಸರಿಯಾದ ಫ್ಯಾಬ್ರಿಕ್ ಆಯ್ಕೆ ಮಾಡಿದರೆ ಹೈ ನೆಕ್ ಬ್ಲೌಸ್ ಗಳು ಬೇಸಿಗೆಯಲ್ಲೂಕಂಫರ್ಟಬಲ್ . ಕಾಟನ್ ಅಥವಾ ಲೈಟ್ ಮೆಟೀರಿಯಲ್ , ಸೂರ್ಯನ ತಾಪದಿಂದ ಚರ್ಮವನ್ನು ರಕ್ಷಿಸುತ್ತದೆ. ಸ್ಲೀವ್ ಲೆಸ್ ಅಥವಾ ನೆಟ್ ಡಿಸೈನ್ ಹೈ ನೆಕ್ ಬ್ಲೌಸ್ ಗಳು ಅಂದವನ್ನು ಹೆಚ್ಚಿಸುವುದರ ಜತೆಗೆ ಸೆಕೆæಯ ಕಿರಿಕಿರಿಯಿಂದ ಮುಕ್ತಿ ನೀಡುತ್ತದೆ.

