ವಿದ್ಯಾ ನವೀನ್

Contributed byshubha.hegde@timesgroup.com|Vijaya Karnataka

ಬೇಸಿಗೆಯಲ್ಲಿ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್‌ ಅತ್ಯಗತ್ಯ. ಎಸ್‌.ಪಿ.ಎಫ್‌ 30 ಅಥವಾ ಅದಕ್ಕಿಂತ ಹೆಚ್ಚು ಇರುವ ಸನ್‌ಸ್ಕ್ರೀನ್‌ ಅನ್ನು 2ರಿಂದ 3 ಗಂಟೆಗೊಮ್ಮೆ ಹಚ್ಚಬೇಕು. ಕುತ್ತಿಗೆ, ಕಿವಿ, ಕೈಗಳಿಗೂ ಹಚ್ಚುವುದನ್ನು ಮರೆಯಬಾರದು. ದಿನನಿತ್ಯ ಸನ್‌ಸ್ಕ್ರೀನ್‌ ಬಳಕೆಯಿಂದ ಚರ್ಮ ಹೊಳೆಯುತ್ತದೆ, ಟ್ಯಾನ್‌ ಮತ್ತು ಕಪ್ಪು ಮಚ್ಚೆಗಳು ದೂರವಾಗುತ್ತವೆ. ಚರ್ಮದ ಬಣ್ಣ ಸಮನಾಗಿರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.

summer alert my take on sunscreen usage

ಬೇಸಿಗೆಯಲ್ಲಿಸನ್ ಸ್ಕ್ರೀನ್ ಎಷ್ಟು ಮುಖ್ಯ?

ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ಪಡೆಯಲು ಸನ್ ಸ್ಕ್ರೀನ್ ಪ್ರಮುಖ ಪಾತ್ರವಹಿಸುತ್ತದೆ. ವರ್ಷದ ಎಲ್ಲಾಕಾಲಕ್ಕೂ ಮನೆಯಿಂದ ಹೊರ ಹೋಗುವ ಮುನ್ನ ಸನ್ ಸ್ಕ್ರೀನ್ ಹಚ್ಚಿಕೊಂಡು ಹೋಗುವುದು ಅತ್ಯಗತ್ಯ. ಆದರೆ ಇದರ ಅಗತ್ಯ ಬೇಸಿಗೆಯಲ್ಲಿಹೆಚ್ಚು.

ಸೂರ್ಯನ ಹಾನಿಕರ ಕಿರಣಗಳಿಂದ ರಕ್ಷಣೆ ನೀಡುವ ಎಸ್ ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚು ಇರುವುದನ್ನು ಬಳಸಿ. 2ರಿಂದ 3ಗಂಟೆಗೆ ಒಮ್ಮೆ ಮರು ಹಚ್ಚಿ. ಕುತ್ತಿಗೆ, ಕೈಗಳು, ಕಿವಿಗಳ ಸುತ್ತ ಹಚ್ಚುವುದನ್ನು ಮರೆಯಬೇಡಿ. ಹೊರಗೆ ಹೋಗುವ 15 ನಿಮಿಷ ಮೊದಲು ಹಚ್ಚಿ.

ಪ್ರಯೋಜನ

ಸನ್ ಸ್ಕ್ರೀನ್ ಅನ್ನು ದಿನವೂ ಬಳಸಿದರೆ ಚರ್ಮ ಹೊಳೆಯುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ. ಟ್ಯಾನ್ ಮತ್ತು ಕಪ್ಪು ಮಚ್ಚೆ ತಪ್ಪಿಸುತ್ತದೆ. ಚರ್ಮದ ಬಣ್ಣ ಸಮವಾಗಿರಲು ಸಹಾಯ ಮಾಡುತ್ತದೆ. ಚರ್ಮ ಕೆಂಪಾಗುವುದು, ಉರಿ, ನೋವು ಕಡಿಮೆ ಆಗಲು ಸಹಕಾರಿ. ವೃದ್ಧಾಪ್ಯದ ಗುರುತನ್ನು ತಪ್ಪಿಸುತ್ತದೆ.

ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ದೀರ್ಘಕಾಲದ ಹಾನಿಯಿಂದ ರಕ್ಷಣೆ ನೀಡುತ್ತದೆ.