ದಿನಭವಿಷ್ಯ 14 ಏಪ್ರಿಲ್ 2026
ಶ್ರೀಪತಿ ಭಟ್ | ಬೆಂಗಳೂರು
ಧಿಧಿಧಿ-------
(ಮೇಷ, ಕಟಕ, ತುಲಾ, ಮಕರ-ಈ ನಾಲ್ಕು ರಾಶಿಯವರಿಗೆ ವಾಹನ ಯೋಗ, ಗಣ್ಯವ್ಯಕ್ತಿಗಳಿಂದ ಧನಾಗಮನ)
----
ಮೇಷ :ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತ ಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು.
(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಗುಲಾಬಿ)
--------
ವೃಷಭ : ತಂದೆಯವರ ಮಾತಿನಂತೆ ನಡೆಯುವುದರಿಂದ ಶ್ರೇಯಸ್ಸು ಲಭಿಸಲಿದೆ. ಉದಯೋನ್ಮುಖ ತಾರೆಯರಿಗೆ ಲಾಭ ಬರಲಿದೆ. ಯಾವುದೇ ಕೆಲಸವನ್ನು ಮಾಡಿದರೂ ಆಲೋಚಿಸಿ ಮಾಡುವುದು ಒಳ್ಳೆಯದು.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಹಸಿರು)
-----------
ಮಿಥುನ: ಸಮಾರಂಭದಲ್ಲಿಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿಅನುಕೂಲವಾಗುವುದು. ವೈಯಕ್ತಿಕ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ. ಹಣದ ಮೇಲಿನ ದುರಾಸೆಗೆ ಕೆಲಸ ಮಾಡಬೇಡಿ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ನೀಲಿ)
---------------
ಕಟಕ: ಮಕ್ಕಳೊಂದಿಗೆ ವ್ಯವಹಾರದ ವಿಚಾರಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸುವುದರಿಂದ ನೆಮ್ಮದಿ ಪ್ರಾಪ್ತಿ. ಕೌಟುಂಬಿಕವಾಗಿ ಹೊಸ ಜವಾಬ್ದಾರಿಯೊಂದನ್ನು ನಿಭಾಯಿಸಬೇಕಾಗುವುದು.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಕೇಸರಿ)
---------------
ಸಿಂಹ : ಸ್ನೇಹಿತರೊಂದಿಗೆ ಭೂಮಿ ಖರೀದಿಯ ಪ್ರಯತ್ನ ನಡೆಸುವುದು ನಷ್ಟ ತಪ್ಪಿಸುತ್ತದೆ. ಕೆಲಸ ಬದಲಿಸುವ ಯೋಜನೆಯಿಂದ ಹೊರ ಬರುವುದು ಉತ್ತಮ. ಶಿರೋವೇದನೆ ಎದುರಾಗಬಹುದು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಳದಿ)
-------------------
ಕನ್ಯಾ : ಸ್ವತ್ತು ಖರೀದಿ ಮಾಡುವ ವಿಚಾರದಲ್ಲಿಯಾವುದಾದರು ಗೃಹ ಸಮಾರಂಭದಲ್ಲಿನಾಲ್ಕಾರು ಜನರ ಮಧ್ಯ ಮಾತುಗಳು ಬರಲಿವೆ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರಕಾರದಿಂದ ಪ್ರಶಸ್ತಿ ದೊರೆಯಬಹುದು.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೇರಳೆ)
-------------
ತುಲಾ : ಅಧಿಕ ಕೌಟುಂಬಿಕ ಒತ್ತಡಗಳ ಮಧ್ಯೆ ವ್ಯಾಪಾರ, ವ್ಯವಹಾರಗಳ ಬಗ್ಗೆ ಗಮನ ನೀಡಬೇಕಾದ ಬಿಗಿ ಪರಿಸ್ಥಿತಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುವ ಮನಸ್ಥಿತಿ ಉಂಟಾಗುತ್ತದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬಿಳಿ)
----------
ವೃಶ್ಚಿಕ: ಅನಿವಾರ್ಯ ಸಂದರ್ಭ ಉಂಟಾದ ಕಾರಣದಿಂದ ಭಾಗವಹಿಸಿದ ಕಾರ್ಯಕ್ರಮಗಳಲ್ಲಿಮಾತುಗಳನ್ನು ಕೇಳಿದ ಜನರಲ್ಲಿನಿಮಗೆ ಅನುಯಾಯಿಗಳು ದೊರೆಯುವರು. ದಲ್ಲಾಳಿಗಳಿಗೆ ಲಾಭ ಆಗುವುದು.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಕೆಂಪು)
----------
ಧನು : ಸಂಬಂಧಿಗಳು ಹಳೆಯ ವ್ಯಾಜ್ಯಗಳನ್ನು ಮರೆತು ಸಂಬಂಧ ಉಳಿಸಿಕೊಳ್ಳುವ ದೃಷ್ಟಿಯಿಂದ ಬಂದಾರು. ಛಾಯಾಗ್ರಾಹಕರಿಗೆ ಅಥವಾ ಚಿತ್ರೀಕರಣದವರಿಗೆ ವೃತ್ತಿಯಲ್ಲಿಅನುಭವದ ಕೊರತೆ ಕಾಣುವುದು.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಕಪ್ಪು)
----------
ಮಕರ :ದೂರ ಪ್ರಯಾಣ ಮಾಡುವ ಅನಿವಾರ್ಯತೆ ಬಂದಲ್ಲಿರಾಹುಕಾಲದ ನಂತರ ಪ್ರಯಾಣ ಬೆಳೆಸಿ. ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಕೌಟುಂಬಿಕ ಸಮಯ ದೊರೆಯಲಿದೆ.
(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಬೂದು)
-------------
ಕುಂಭ :ಕೆಲಸದ ಒತ್ತಡದಿಂದ ಉಂಟಾಗುತ್ತಿರುವ ಶರೀರ ಬಾಧೆಗಳನ್ನು ನಿವಾರಿಸಿಕೊಳ್ಳಲೆಂದು ತೆಗೆದುಕೊಳ್ಳುವ ಔಷಧಗಳು ವಿಷವಾಗಲಿದೆ. ಬರವಣಿಗೆ ಮತ್ತು ಮುದ್ರಣ ಕೆಲಸಗಳನ್ನು ಮಾಡುವವರಿಗೆ ವರಮಾನ ತರಲಿದೆ.
(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಕಿತ್ತಳೆ)
-----------
ಮೀನ: ಬೇರೆಯವರ ಸಹಾಯ ಪಡೆಯದೇ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಹಿರಿಯರ ಅನುಗ್ರಹದಿಂದ ಇಷ್ಟಾರ್ಥಸಿದ್ಧಿಯಾಗಿ ಕ್ರಯ-ವಿಕ್ರಯದಲ್ಲಿಲಾಭ ತರಲಿದೆ. ಸಂತೋಷದ ಘಟನೆಗಳು ನಡೆಯಲಿವೆ.
(ಶುಭ ಸಂಖ್ಯೆ 5, ಅದೃಷ್ಟ ಬಣ್ಣ : ಖಾಕಿ)

