ಮನೋಜ್ ಕುಮಾರ್ ವಿಶ್ವ ಬಾಕ್ಸಿಂಗ್ ತಾಂತ್ರಿಕ ಪ್ರತಿನಿಧಿ

Contributed bymanjunath.gowda@timesgroup.com|Vijaya Karnataka

ಲೆಫ್ಟಿನೆಂಟ್‌ ಕರ್ನಲ್‌ ಮನೋಜ್‌ಕುಮಾರ್‌ ಅವರು ವಿಶ್ವ ಬಾಕ್ಸಿಂಗ್‌ನ ತಾಂತ್ರಿಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದಾರೆ. ರಾಜೇಂದ್ರನ್‌ ರವೀಂದ್ರನ್‌ ಅವರು ಸಹ ಕಾಂಟಿನೆಂಟಲ್‌ ಐಟಿಒ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ಈ ಸಾಧನೆಗಳನ್ನು ಶ್ಲಾಘಿಸಿದೆ. ಇತ್ತೀಚೆಗೆ ಮಂಗೋಲಿಯಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು 16 ಪದಕ ಗೆದ್ದಿದ್ದಾರೆ.

manoj kumar selected as technical representative for boxing

ಹೊಸದಿಲ್ಲಿ: ಲೆಫ್ಟಿನೆಂಟ್ ಕರ್ನಲ್ ಮನೋಜ್ ಕುಮಾರ್ ಅವರು

ವಿಶ್ವ ಬಾಕ್ಸಿಂಗ್ ನ ‘ ತಾಂತ್ರಿಕ ಪ್ರತಿನಿಧಿ ’ (ಕಾಂಟಿನೆಂಟಲ್ ಟೆಕ್ನಿಕಲ್ ಡೆಲಿಗೇಟ್ ) ಯಾಗಿ ಆಯ್ಕೆ ಯಾಗಿ ದ್ದಾರೆ. ಬಾಕ್ಸರ್ ಆಗಿರುವ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ದ್ದಾರೆ. ಅಲ್ಲದೆ ಮತ್ತೊಬ್ಬ ಭಾರತೀಯ ರಾಜೇಂದ್ರನ್ ರವೀಂದ್ರನ್ ಅವರು ಸಹ ಕಾಂಟಿನೆಂಟಲ್ ಐಟಿಒ ಪರೀಕ್ಷೆಯಲ್ಲಿಉತ್ತೀರ್ಣರಾಗಿ ದ್ದಾರೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ (ಬಿಎಫ್ ಐ)

ತಿಳಿಸಿದೆ. ಬಾಕ್ಸಿಂಗ್ ರಿಂಗ್ ನ ಒಳಗೆ ಮತ್ತು ಹೊರಗೆ ಭಾರತೀಯರು ಸಾಧನೆ ತೋರುತ್ತಿರುವುದಕ್ಕೆ ಬಿಎಫ್ ಐ ಮೆಚ್ಚುಗೆ ವ್ಯಕ್ತಪಡಿಸಿದೆ.

ಇತ್ತೀಚೆಗೆ ಮಂಗೋಲಿಯಾದಲ್ಲಿನಡೆದ ಏಷ್ಯನ್ ಚಾಂಪಿಯನ್

ಷಿಪ್ ನಲ್ಲಿಭಾರತದ ಬಾಕ್ಸರ್ ಗಳು 5 ಚಿನ್ನ ಸೇರಿದಂತೆ ಒಟ್ಟು 16 ಪದಕ

ಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದು ಗಮನಾರ್ಹ.