ಕ್ವಿಕ್ ನ್ಯೂಸ್

Contributed byshree vijendra|Vijaya Karnataka

ಮಹಾರಾಷ್ಟ್ರದ ಠಾಣೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾಂಕ್ರೀಟ್‌ ಮಿಕ್ಸರ್‌ ಲಾರಿ ಮತ್ತು ವ್ಯಾನ್‌ ಡಿಕ್ಕಿ ಹೊಡೆದು 11 ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣದಲ್ಲಿ ಐ-ಪ್ಯಾಕ್‌ ಸಂಸ್ಥೆಯ ನಿರ್ದೇಶಕ ವಿನೇಶ್‌ ಚಾಂಡೇಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಈ ವರ್ಷ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

kalyan murbad highway accident 11 people killed

* ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ -ಮುರ್ಬಾದ್ ಹೆದ್ದಾರಿಯಲ್ಲಿಕಾಂಕ್ರೀಟ್ ಮಿಕ್ಸರ್ ಲಾರಿ - ವ್ಯಾನ್ ಡಿಕ್ಕಿ. ಅಪಘಾತಕ್ಕೆ 11 ಮಂದಿ ಸಾವು.

* ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣ ಸಂಬಂಧ ಐ-ಪ್ಯಾಕ್ ಸಂಸ್ಥೆ ನಿರ್ದೇಶಕ ವಿನೇಶ್ ಚಾಂಡೇಲ್ ಬಂಧಿಸಿದ ಜಾರಿ ನಿರ್ದೇಶನಾಲಯ.

* ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿಸಿಬಿಐ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

* ಈ ವರ್ಷ ದೇಶದಲ್ಲಿಸರಾಸರಿಗಿಂತಲೂ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದ ಭಾರತೀಯ ಹವಾಮಾನ ಇಲಾಖೆ