ನ್ಯೂಯಾರ್ಕ್: ವಿಶ್ವ ಫುಟ್ಬಾಲ್ ಒಕ್ಕೂಟ- ಫಿಫಾ ಈ ವರ್ಷ ನಡೆಯಲಿರುವ ವಿಶ್ವಕಪ್ ನಲ್ಲಿಹೊಸದಾಗಿ ಮತ್ತಷ್ಟು ದುಬಾರಿ ಬೆಲೆಯ ಟಿಕೆಟ್ ವಿಭಾಗಗಳನ್ನು ಸೇರ್ಪಡೆಗೊಳಿಸಿದೆ. ಜೂನ್ 12 ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಇಂಗಲ್ ವುಡ್ ನಲ್ಲಿನಡೆಯಲಿರುವ ಅಮೆರಿಕ ಮತ್ತು ಪೆರುಗ್ವೆ ನಡುವಿನ ಆರಂಭಿಕ ಪಂದ್ಯದ ‘ಫ್ರಂಟ್ ಕೆಟಗರಿ’ಯ ಒಂದು 1 ಟಿಕೆಟ್ ಬೆಲೆಯನ್ನು ಬರೋಬ್ಬರಿ 4,105 ಡಾಲರ್ (ಸುಮಾರು 3.4 ಲಕ್ಷ ರೂ.) ನಿಗದಿಪಡಿಸಿದೆ. ಕಳೆದ ವಾರವಷ್ಟೇ ಈ ಪಂದ್ಯದ ಟಿಕೆಟ್ ಬೆಲೆ ಗರಿಷ್ಠ 2,735 ಇತ್ತು. ಆದರೆ ಈಗ ಹೊಸದಾಗಿ ‘ಫ್ರಂಟ್ ಕೆಟಗರಿ’ ಬೆಲೆಯನ್ನು ಸೇರಿಸುವ ಮೂಲಕ ದರವನ್ನು ಹೆಚ್ಚಿಸಲಾಗಿದೆ. ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೆ ಫಿಫಾ ತನ್ನ ವೆಬ್ ಸೈಟಿನಲ್ಲಿ‘ಫ್ರಂಟ್ ಕೆಟಗರಿ 2’ ವಿಭಾಗವನ್ನು ಸೇರಿಸಿದೆ. ಇದರ ಬೆಲೆ 1,940- 2,330 ಡಾಲರ್ ನಷ್ಟಿದೆ.

