ಶಾಸಕರು ಅನಗತ್ಯ ಹೇಳಿಕೆ ಕೊಟ್ಟರೆ ಶಿಸ್ತು ಕ್ರಧಿಮ: ಡಿಧಿಕೆಧಿಶಿ ಎಚ್ಚರಿಕೆ

Contributed byKENCHE GOWDA|Vijaya Karnataka

ಸಚಿವ ಸಂಪುಟ ಪುನಾರಚನೆಗೆ ಇದು ಸೂಕ್ತ ಸಮಯವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅನಗತ್ಯ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೆಲ ಶಾಸಕರು ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಲಾಬಿ ನಡೆಸುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಯೋಚಿಸೋಣ ಎಂದು ತಿಳಿಸಿದ್ದಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಮಾತುಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.

discipline mandatory for legislators warning from deputy cm dk shivakumar

ವಿಕ ಸುದ್ದಿಲೋಕ ಬೆಂಗಳೂರು ಸಚಿವ ಸಂಪುಟ ಪುನಾರಚನೆಗೆ ಇದು ಸೂಕ್ತ ಸಮಯವಲ್ಲ. ಈ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸಚಿವ ಸ್ಥಾನದ ಬೇಡಿಕೆಯೊಂದಿಗೆ ಶಾಸಕರು ದಿಲ್ಲಿಯಲ್ಲಿ ಲಾಬಿ ನಡೆಸುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದಲ್ಲಿಸೋಮವಾರ ಭೇಟಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘‘ಹೈಕಮಾಂಡ್ ಬಳಿ ಸಚಿವ ಸ್ಥಾನ ಕೇಳುವುದರಲ್ಲಿತಪ್ಪೇನಿಲ್ಲ. ಆದರೆ, ಅದಕ್ಕೆ ಇದು ಸಮಯವಲ್ಲ. ನಾನಾ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುತ್ತಿವೆ. ಬಹಳಷ್ಟು ಮಂದಿ ತಮಿಳುನಾಡಿನಲ್ಲಿಚುನಾವಣಾ ಕೆಲಸದಲ್ಲಿದ್ದಾರೆ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಯೋಚಿಸೋಣ,’’ ಎಂದು ಹೇಳಿದರು. ‘‘ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮಗಳ ಮುಂದೆ ಅಲ್ಲ. ಅನವಶ್ಯಕವಾಗಿ ಏನೇನೋ ಮಾತನಾಡಿರುವುದನ್ನು ಮೀಡಿಯಾದಲ್ಲಿಗಮನಿಸಿದ್ದೇನೆ. ಇದು ಸರಿಯಲ್ಲ. ಎಲ್ಲಶಾಸಕರು ಶಿಸ್ತು ಕಾಯ್ದುಕೊಂಡು, ಪಕ್ಷಕ್ಕೆ ಗೌರವ ನೀಡಬೇಕು. ಮಾಧ್ಯಮಗಳ ಮುಂದೆ ಪಕ್ಷದ ವರ್ಚಸ್ಸಿಗೆ ಭಂಗ ತರುವಂತಹ ಮಾತು ಬಂದರೆ ಸಹಿಸುವುದಿಲ್ಲ,’’ ಎಂದು ಎಚ್ಚರಿಕೆ ನೀಡಿದರು. ‘‘ದಿಲ್ಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುವ ಬಗ್ಗೆ ಕೆಲವರು ನನ್ನ ಬಳಿಯೂ ಮಾತನಾಡಿದ್ದಾರೆ. ಭೇಟಿಗೆ, ಮಂತ್ರಿ ಸ್ಥಾನ ಕೇಳುವುದರಲ್ಲಿತಪ್ಪೇನಿಲ್ಲ. ,’’ ಎಂದರು.