ವಿಕ ಸುದ್ದಿಲೋಕ ಅರೇಹಳ್ಳಿ
ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಹಿರಿಗರ್ಜೆ-ಕೊಪ್ಪಲು ಗ್ರಾಮದಲ್ಲಿಶ್ರೀಕ್ಷೇತ್ರ ಆದಿಶಕ್ತಿ ಕೆರೆಕೋಡಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಚೈತ್ರಮಾಸ ವಸಂತ ಋುತು ಕೃಷ್ಣ ಪಕ್ಷದ ಶುಭದಿನದಂದು ಮೂರು ದಿನಗಳ ಕಾಲ ಜರುಗುವ ಪೂಜೋತ್ಸವಕ್ಕೆ ಚಾಲನೆ ನೀಡಲಾಯಿತು.
ಗೋಧೂಳಿ ಲಗ್ನದಲ್ಲಿಗ್ರಾಮದೇವತೆ ಹಾಗೂ ಪರಿವಾರ ದೇವತೆಗಳಿಗೆ ಅಭಿಷೇಕ, ಗಂಗಾ ಪೂಜೆ, ಕೆರೆಕೋಡಮ್ಮನವರಿಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಎರಡನೇ ದಿನ ಅಮ್ಮನವರನ್ನು ಬನಕ್ಕೆ ಹೊರಡಿಸಿ ಶುಭ ಲಗ್ನದಲ್ಲಿಅಮ್ಮನವರಿಗೆ ಗಂಗಾಸ್ಥಾನದಲ್ಲಿಪಂಚಾಮೃತ ಅಭಿಷೇಕ, ಮಹಾಂಗಳಾರತಿ ಮುಗಿದ ಬಳಿಕ ಹಗಲು ಉತ್ಸವ ಜರುಗಿತು. ಕೊನೆಯ ದಿನ ಹವಳಪ್ಪ ಸ್ವಾಮಿಯವರಿಗೆ ಹಾಗೂ ಚಿಕ್ಕಮ್ಮನವರಿಗೆ ಅಮ್ಮನವರ ಬನದಲ್ಲಿಕವಳ ಕಾರ ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಶ್ರೀ ಆದಿಶಕ್ತಿ ಕೆರೆಕೋಡಮ್ಮನವರ ಸೇವಾ ಸಮಿತಿ ಅಧ್ಯಕ್ಷ ಎಚ್ .ಪಿ.ಗೋಪಾಲ್ , ಕಾರ ್ಯದರ್ಶಿ ಎಚ್ .ಬಿ ದಿನೇಶ್ , ಆಟೋ ದಿನೇಶ್ ,ಚಂದ್ರಶೇಖರ್ , ಖಜಾಂಚಿ ಮಂಜುನಾಥ್ , ಅರ್ಚಕರಾದ ವೀರಭದ್ರ, ಚಂದ್ರಯ್ಯ, ಸಮಿತಿ ಕಾರ ್ಯಕರ್ತರಾದ ಪ್ರೀತಮ್ , ರುದ್ರೇಶ್ , ಕಾರ್ತಿಕ್ , ತುಂಗಭದ್ರ, ದ್ಯಾವಪ್ಪ, ಮಹೇಂದ್ರ ನಿರಂಜನ್ , ನಂದೀಶ್ , ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಚಿತ್ರ ಸುದ್ದಿ:
ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಹಿರಿಗರ್ಜೆ ಗ್ರಾಮದಲ್ಲಿಶ್ರೀ ಆದಿಶಕ್ತಿ ಕೆರೆಕೋಡಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

