ವಿಕ ಸುದ್ದಿಲೋಕ ಕಡಬ
ಇಂದು ಪ್ರಕೃತಿಯನ್ನು ನಾವು ನಮ್ಮಿಂದ ದೂರ ಮಾಡುತ್ತಿದ್ದೇವೆ. ಆದರೆ ಪ್ರಕೃತಿಯ ಹೊರತು ಮನಷ್ಯನ ಬದುಕು ಅಸಾಧ್ಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಮಂಗಳೂರು ವಿಭಾಗ ಸಂಚಾಲಕ ಸುಂದರ ಶೆಟ್ಟಿ ಹೇಳಿದರು.
ಐತಿಹಾಸಿಕ ಯಕ್ಷ ಪಾಂಡವರ (ಕೆದ್ದೊಟ್ಟೆ ಕೆರೆ) ಕೆರೆಯ ತಟದಲ್ಲಿಮಂಗಳವಾರ ನಡೆದ ಯುಗಾದಿ ಸಂಭ್ರಮ ವಂದೇ ಪ್ರಕೃತಿ ಮಾತರಂ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ ಪ್ರಕೃತಿಯನ್ನು ನಾಶ ಮಾಡಿ ಮುಂದಿನ ಪೀಳಿಗೆಗೆ ಅನ್ಯಾಯ ಮಾಡುತ್ತಿದ್ದಾನೆ. ಈ ನಿಟ್ಟಿನಲ್ಲಿನಾವು ಸಮಾಜದಲ್ಲಿಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ನಾವು ಮಾಡುವ ಕಾರ್ಯಕ್ರಮ ಶೇ.100ರಷ್ಟು ಪರಿಣಾಮಕಾರಿಯಾಗದಿದ್ದರೂ ಒಂದಷ್ಟು ಜನ ಬದಲಾವಣೆಯಾದರೆ ಅದು ಸಾರ್ಥಕವಾಗುತ್ತದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಕಡಬ ತಾಲೂಕು ಘಟಕದ ಅಧ್ಯಕ್ಷ ಕರುಣಾಕರ ಗೋಗಟೆ ಮಾತನಾಡಿ, ಪಾಂಡವರು ಈ ಕೆರೆಯ ನೀರು ಕುಡಿಯಲು ಬಂದಾಗ ಸಂಕಷ್ಟ ಎದುರಾಗಿತ್ತು, ಆಗ ಧರ್ಮರಾಯ ಯಕ್ಷನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ತನ್ನ ತಮ್ಮಂದಿರನ್ನು ಬದುಕಿಸಿದ ಪ್ರತೀತಿ ಇರುವ ಈ ಕೆರೆಯ ತಟದಲ್ಲಿಕಾರ್ಯಕ್ರಮ ಆಯೋಜಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪಕ್ಕದ ಕುಮಾರಧಾರ ನದಿಯ ಉರುಂಬಿಗೆ ಕೂಡ ಪಾಂಡವರು ಬಂದಿದ್ದರು ಎನ್ನುವುದಕ್ಕೆ ಕುರುಹುಗಳ ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿಅಲ್ಲಿಕೂಡ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್ .ಬಾಲಕೃಷ್ಣ ಕೊೖಲ ಮಾತನಾಡಿದರು. ಕವಯತ್ರಿ ಸುನೀತ ಶ್ರೀರಾಮ ಕೆಮ್ಮಾರ ಸ್ವರಚಿತ ಕವನ ವಾಚನ ಮಾಡಿದರು.
ಸಾಹಿತ್ಯಾಭಿಮಾನಿಗಳಾದ ಬಾಲಕೃಷ್ಣ ಇಡಾಳ, ಯಾದವ ಬೀರಂತಡ್ಕ, ವಸುಧಾ ಗೋಗಟೆ, ಸುಂದರ ಗೌಡ ಉಳಿಪ್ಪು ಮತ್ತಿತರರು ಉಪಸ್ಥಿತರಿದ್ದರು. ಅಖಿಲ ಭಾರತೀಯ ಸಹಿತ್ಯ ಪರಿಷದ್ ನ ಕಡಬ ತಾಲೂಕು ಘಟಕದ ಕಾರ್ಯದರ್ಶಿ ನಾಗರಾಜ್ ಎನ್ .ಕೆ. ವಂದಿಸಿದರು.
: ಫೊಟೋ ಫೈಲ್ ನೇಮ್ 14ಕೆಡಿಬಿ ವಿಎಮ್ )
ಯಕ್ಷಪಾಂಡವರ ಕೆರೆಯ ತಟದಲ್ಲಿಯುಗಾದಿ ಸಂಭ್ರಮ, ವಂದೇ ಪ್ರಕೃತಿ ಮಾತರಂ ಕಾರ್ಯಕ್ರಮ ನಡೆಯಿತು

