ಹಾಸನದಲ್ಲಿಕಾರ ್ಯಕರ್ತರ ಪ್ರತಿಭಟನೆ
ವಿಕ ಸುದ್ದಿಲೋಕ ಹಾಸನ
ಕೆಆರ್ ಎಸ್ ಪಕ್ಷದ ಉಪಾಧ್ಯಕ್ಷ ಸೋಮಸುಂದರ್ ಅವರನ್ನು ಸುಳ್ಳು ಪ್ರಕರಣದಲ್ಲಿಬಂಧಿಸಿದ್ದಾರೆ ಎಂದು ಆರೋಪಿಸಿ ಪಕ್ಷದ ಮುಖಂಡರು ನಗರದಲ್ಲಿಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕೆಆರ್ ಎಸ್ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ಮಾತನಾಡಿ,‘‘ಸರಕಾರದ ವಿರುದ್ಧ ಅಹವಾಲು ಸಲ್ಲಿಸಲು ಹೋದ ಪಕ್ಷದ ಪದಾಧಿಕಾರಿಗಳನ್ನು ಬಂಧಿಸಿರುವುದು ದೌರ್ಜನ್ಯಕ್ಕೆ ತಾರ್ಕಿಕ ಉದಾಹರಣೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರಕಾರವೇ ಕಾನೂನಿನ ದುರುಪಯೋಗ ಮಾಡುತ್ತಿದೆ,’’ಎಂದು ಆರೋಪಿಸಿದರು.
ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧು ಸ್ವಾಮಿ ಹಾಗೂ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಅವರ ಮೇಲೂ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದಾಗಿ ಆರೋಪಿಸಿದ ಅವರು, ನ್ಯಾಯಕ್ಕಾಗಿ ಹೋರಾಡುವವರನ್ನೇ ಗುರಿಯಾಗಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿವಿಡಿಯೋ ಚಿತ್ರೀಕರಣ ಮಾಡುವುದು ಕಾನೂನುಬಾಹಿರವೇ ಎಂಬ ಪ್ರಶ್ನೆಯನ್ನು ಎತ್ತಿದ ಪಕ್ಷದ ಮುಖಂಡರು, ಕೇವಲ ವಿಡಿಯೋ ಮಾಡಿದ ಕಾರಣಕ್ಕೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿಮನಬಂದಂತೆ ಪ್ರಕರಣ ದಾಖಲಿಸುವುದು ಸರಿಯೇ,’’ಎಂದು ಪ್ರಶ್ನಿಸಿದರು.
‘‘ಈ ಸಂಬಂಧಪಟ್ಟ ಅಧಿಕಾರಿಗಳು ನಿರ್ಪಕ್ಷಪಾತ ತನಿಖೆ ನಡೆಸಿ ನಿರಪರಾಧಿಗಳಿಗೆ ನ್ಯಾಯ ಒದಗಿಸಬೇಕು,’’ಎಂದು ಆಗ್ರಹಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಮಧು ಚಿಕ್ಕನಹಳ್ಳಿ, ರಮೇಶ್ ಬೂವನಹಳ್ಳಿ, ತಾಲೂಕು ಅಧ್ಯಕ್ಷ ಉಮೇಶ್ , ಶಿವಕುಮಾರ್ , ನಿರಂಜನ್ ಅಂಚೂರ್ , ಜಗದೀಶ್ ರಾಜಗಟ್ಟ, ರವಿನಂದನ್ , ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಫೋಟೋ ಶೀರ್ಷಿಕೆ
ಕೆಆರ್ ಎಸ್ ಪಕ್ಷ ಉಪಾಧ್ಯಕ್ಷ ಸೋಮಸುಂದರ್ ಅವರನ್ನು ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಆರೋಪಿಸಿ ಪಕ್ಷದ ಮುಖಂಡರು ಹಾಸನದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

