ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ
ವಿಕ ಸುದ್ದಿಲೋಕ ಇಟಗಿ
ಸ್ಥಳೀಯ ಅರಿವು ಕೇಂದ್ರ, ಗ್ರಾಪಂ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯೋಪಾದ್ಯಾಯ ಜಿ.ಕೆ.ಹಚ್ಚಂಬಲಿ ಮಾತನಾಡಿ,‘‘ ಅಂಬೇಡ್ಕರ್ ಅವರು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ವಿದ್ಯಾರ್ಥಿಗಳು ಅವರಂತೆ ಕಷ್ಟಪಟ್ಟು ಓದಿ ದೊಡ್ಡ ವ್ಯಕ್ತಿಗಳಾಗಬೇಕು,’’ಎಂದರು.
ಸಹಶಿಕ್ಷಕ ಸಂಗಮೇಶ ಚಿಕ್ಕಮಠ, ದೈಹಿಕ ಶಿಕ್ಷಣ ಶಿಕ್ಷಕ ವಿ.ಎಸ್ .ಚರಂತಿಮಠ, ಎಸ್ ಡಿಎಂಸಿ ಅಧ್ಯಕ್ಷ ಮೋಹನ ಬಡಿಗೇರ, ಅರಿವು ಕೇಂದ್ರದ ಮೇಲ್ವಿಚಾರಕ ರುದ್ರೇಶ ಸಂಪಗಾವಿ ಉಪಸ್ಥಿತರಿದ್ದರು.
ಫೋಟೋ 14ಇಟಗಿ5: ಇಟಗಿ ಗ್ರಾಮದ ಅರಿವು ಕೇಂದ್ರದಲ್ಲಿಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

