ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ
*ಮಾತಾ ಮಂಜಮ್ಮ ಜೋಗತಿ ಹೇಧಿಳಿಧಿಕೆ
ವಿಕ ಸುದ್ದಿಲೋಕ ಗಂಗಾವತಿ
‘‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ,’’ ಎಂದು ಮಾತಾ ಮಂಜಮ್ಮ ಜೋಗತಿ ಹೇಳಿದರು.
ನಗರದ ಕೊಟ್ಟೂರು ಬಸವೇಶ್ವರ ವೇದಿಕೆ ಆವರಣದಲ್ಲಿಬಸವ ಜಯಂತಿ ನಿಮಿತ್ತ
ಇತ್ತೀಚೆಗೆ ನಡೆದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ಬಸವರಾಜ ಕೋಟಿ ಅವರು ಗಂಗಾವತಿಯಲ್ಲಿಸಾಹಿತ್ಯ ಸಮ್ಮೇಳನ ನಡೆದಾಗ ನನಗೆ ವೇದಿಕೆ ನಿರ್ಮಿಸಿ ಕೊಟ್ಟಿದ್ದರು. ಅಲ್ಲದೇ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗೆ ನನ್ನ ಬೆಳೆಸಿತು,’’ ಎಂದು ಭಾವುಕರಾದರು.
ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ‘‘ಮನುಕುಲಕ್ಕೆ ಬೇಕಾದವರು ಬಸವಣ್ಣನವರು,’’ ಎಂದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಸಮಿತಿಯ ಗೌರವಾಧ್ಯಕ್ಷ ಷಣ್ಮಖಪ್ಪ, ಕಾರ್ಯಾಧ್ಯಕ್ಷ ಅರಳಿ ಶೇಖರಪ್ಪ, ಕಂಪ್ಲಿಯ ಕೆ.ಎಂ.ಹೇಮಯ್ಯಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ
ಎಚ್ .ಗಿರೇಗೌಡ, ಜೆ.ನಾಗರಾಜ, ದಿಲೀಪ್ ಕುಮಾರ್ ವಂದಾಲ, ಸಿ.ಮಹಾಲಕ್ಷ್ಮಿ, ಚನ್ನಬಸಮ್ಮ ಕಂಪ್ಲಿ, ಅರೇಗಾರ ರತ್ನಮ್ಮ, ಬಿಜೆಪಿ ಮುಖಂಡ ಮನೋಹರಗೌಡ ಇದ್ದರು.
---
ಡಧಿಬ್ಲ್ಯುಎ 0114
ಗಂಗಾವತಿಯ ಕೊಟ್ಟೂರು ಬಸವೇಶ್ವರ ವೇದಿಕೆ ಆವರಣದಲ್ಲಿಬಸವ ಜಯಂತಿ ನಿಮಿತ್ತ ನಡೆದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಮಾತಾ ಮಂಜಮ್ಮ ಜೋಗತಿ ಉದ್ಘಾಟಿಸಿ ಮಾತನಾಡಿದರು.

