ವಿಕ ಸುದ್ದಿಲೋಕ ಉಡುಪಿ
‘‘ಹೆಣ್ಣು ಎಂದರೆ ಮಮತೆಯ ರೂಪ, ಕರುಣೆಯ ಪ್ರತೀಕ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಅಭಿಪ್ರಾಯಪಟ್ಟಿದ್ದಾರೆ.
ಚರ್ಚ್ನ ಸ್ತ್ರೀ ಸಂಘಟನೆಯ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು.
‘‘ಮಹಿಳೆ ಸಹಜವಾಗಿಯೇ ಪ್ರೀತಿ, ದಯೆ, ಸಹಾನುಭೂತಿ ಮತ್ತು ತ್ಯಾಗದ ಗುಣಗಳನ್ನು ಹೊಂದಿರುವವಳು. ಸಮಾಜದಲ್ಲಿತಾಯಿ, ಸಹೋದರಿ, ಪತ್ನಿ ಮುಂತಾದ ವಿವಿಧ ಪಾತ್ರಗಳಲ್ಲಿತನ್ನ ಕರುಣೆ, ಸಹನೆ ಮತ್ತು ಮಮತೆಯ ಮೂಲಕ ಕುಟುಂಬ ಹಾಗೂ ಸಮಾಜವನ್ನು ಬೆಳೆಸುವ ಪ್ರಮುಖ ಶಕ್ತಿಯಾಗಿರುತ್ತಾಳೆ,’’ ಎಂದರು.
‘‘ಪ್ರತಿಯೊಂದು ಸಂಘಟನೆಗೆ 25 ವರ್ಷ ಮೈಲುಗಲ್ಲು. ಈ ಸಂದರ್ಭ ಹಿಂದಿನ ಕೆಲಸಗಳನ್ನು ಮೆಲುಕು ಹಾಕುವುದರೊಂದಿಗೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಸಿಗುವ ಅವಕಾಶ. 25 ವರ್ಷಗಳಲ್ಲಿಚರ್ಚ್ನ ಸ್ತ್ರೀ ಸಂಘಟನೆ ತನ್ನ ಸದಸ್ಯರು ಸಬಲೀಕರಣಗೊಳಿಸುವತ್ತ ವಿಶೇಷ ಕಾಳಜಿ ವಹಿಸಿರುವುದು ಶ್ಲಾಘನೀಯ,’’ ಎಂದರು.
ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ ಮಾತನಾಡಿ, ‘‘ಮಹಿಳೆಯರಲ್ಲಿಜವಾಬ್ದಾರಿಯುತ ನಾಯಕತ್ವ ಬೆಳೆಸುವತ್ತ ಸಂಘಟನೆ ಕಾರ್ಯಪ್ರವೃತ್ತವಾಗಿದ್ದು, ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ,’’ ಎಂದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೆಸ್ಲಿಆರೋಝಾ, ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್ , ಕಲ್ಯಾಣಪುರ ವಲಯಾಧ್ಯಕ್ಷೆ ಪ್ರಿಯಾ ಫುರ್ಟಾಡೊ ಶುಭ ಹಾರೈಸಿದರು.
ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆ ಸ್ಥಾಪಕಾಧ್ಯಕ್ಷೆ ಲೀನಾ ರೋಚ್ ಕಲ್ಯಾಣಪುರ ವಲಯ ಸಚೇತಕಿ ಪ್ರೇಮಾ ಬಾರೆಟ್ಟೊ, ಕಳೆದ 25 ವರ್ಷಗಳಲ್ಲಿಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ರಜತ ಮಹೋತ್ಸವ ವರ್ಷದ ಅಧ್ಯಕ್ಷೆ, ಚರ್ಚ್ನ ಆಧ್ಯಾತ್ಮಿಕ ನಿರ್ದೇಶಕ ವಂ.ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಲಯ ಆಧ್ಯಾತ್ಮಿಕ ನಿರ್ದೇಶಕ ವಂ.ಜೋಕಿಂ ಡಿಸೋಜ, ಧರ್ಮಗುರುಗಳಾದ ವಂ.ಆಲ್ವಿನ್ , ವಂ.ಫ್ರೆಡ್ರಿಕ್ ಡಿಸೋಜ, ವಂ.ಸ್ಟೀಫನ್ ರೋಡ್ರಿಗಸ್ , ಸ್ಥಳೀಯ ಕಾನ್ವೆಂಟ್ ನ ಮುಖ್ಯಸ್ಥೆ ಸಿಸ್ಟರ್ ಸುಶ್ಮಾ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಲವೀನಾ ಫರ್ನಾಂಡಿಸ್ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷೆ ಪ್ರಿಯಾ ಫುರ್ಟಾಡೊ ಸ್ವಾಗತಿಸಿದರು. ಶಾಂತಿ ಫರ್ನಾಂಡಿಸ್ ವಂದಿಸಿದರು. ಜೆನಿತಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಮಹಿಳೆಯರು ಹಾಗೂ ಪುರುಷರಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಿತು. ರಜತ ಮಹೋತ್ಸವದ ಸಭಾ ಕಾರ್ಯಕ್ರಮಕ್ಕೂ ಮುನ್ನ ಪವಿತ್ರ ಬಲಿಪೂಜೆ ಸಲ್ಲಿಸಲಾಯಿತು.
ಫೋಟೊ: 13ಎಎ ಉಡುಪಿ

