ಶ್ರೀ ಶಿವಸಿದ್ಧ ಬೀರೇಶ್ವರ ಜಾತ್ರೆ 28ರಿಂದ

Contributed bysubedarcb@gmail.com|Vijaya Karnataka
28

14 ಎನ್ ಆರ್ ಡಿ-2

ಶ್ರೀ ಶಿವಸಿದ್ಧ ಬೀರೇಶ್ವರ ಜಾತ್ರೆ 28ರಿಂದ

ವಿಕ ಸುದ್ದಿಲೋಕ ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮದ ಶ್ರೀ ಶಿವಸಿದ್ಧ ಬೀರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ಏ.28 ರಿಂದ ಏ.30ರ ವರೆಗೆ ನಡೆಯಲಿವೆ.

ಏ.28 ರಂದು ಸಂಜೆ 6 ಗಂಟೆಗೆ ಡೊಳ್ಳು ಹಾಗೂ ದೇವರುಗಳ ಬರಮಾಡಿಕೊಳ್ಳುವುದು. ರಾತ್ರಿ ಗಂಟೆಯಿಂದ ಜಾಗರಣೆ ನಡೆಯಲಿದೆ. ಏ.29 ರಂದು ಬೆಳಗಿನಜಾವ 5 ಗಂಟೆಗೆ ಶ್ರೀ ಬೀರೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಜರುಗುವುದು. ಬೆಳಗ್ಗೆ 10 ಗಂಟೆಗೆ ಡೊಳ್ಳಿನ ವಾಲಗ ಮತ್ತು ಸಕಲವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಶ್ರೀ ಬೀರೇಶ್ವರರ ಪಲ್ಲಕ್ಕಿ ಉತ್ಸವ ಮೆರವಣಿಗೆ, ಬಳಿಕ ಹೊಳೆಗೆ ಹೋಗಿ ಪುನಃ ದೇವಸ್ಥಾನಕ್ಕೆ ಮರಳುವುದು. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪನೆ ಕಾರ್ಯಕ್ರಮ ನಡೆಯಲಿದೆ.

ಏ.29 ರಂದು ರಾತ್ರಿ 9.30ಕ್ಕೆ ಜಿದ್ದಾಜಿದ್ದಿನ ಡೊಳ್ಳಿನ ಪದಗಳ ಸಂಗೀತ ಕಾರ್ಯಕ್ರಮ. ಏ.30 ರಂದು ಬೆಳಗ್ಗೆ 10 ಗಂಟೆಗೆ ಭಂಡಾರ ಒಡೆಯುವುದು, ಜಾತ್ರೆಯ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿತಿಳಿಸಿದೆ.