ಜೆನ್ - ಎಐ ಆಧಾರಿತ ಯಾವುದೇ ಚಾಟ್ ಬಾಟ್ ಆಗಿರಲಿ (ಕೋ-ಪೈಲಟ್ , ಚಾಟ್ ಜಿಪಿಟಿ, ಸಾನೆಚ್ , ಗ್ರೊಕ್ ) ಅದಕ್ಕೆ ಒಮ್ಮೆ ‘‘ನೀನು ಯಾವ ಪ್ರಶ್ನೆಗೆ ಉತ್ತರಿಸಲಾರೆ,’’ ಎನ್ನುವ ಪ್ರಾಮ್ ್ಟ ಕೊಟ್ಟು ನೋಡಿ. ‘‘ನಾನು ಭವಿಷ್ಯದ ಯಾವುದೇ ಘಟನೆಗಳ ಕುರಿತು ಉತ್ತರಿಸಲಾರೆ,’’ ಎನ್ನುವ ಪ್ರತಿಕ್ರಿಯೆ ಸಿಗುತ್ತದೆ. ನಿಜ, ಅದು ಭವಿಷ್ಯವನ್ನು ಹೇಳುವುದಿಲ್ಲ. ಜ್ಯೋತಿಷಿಗಳ ಹತ್ತಿರ ಹೋಗಿ ನಾಳೆ ಏನಾಗಬಹುದು, ಯಾವ ಪಕ್ಷ ಚುನಾವಣೆ ಗೆಲ್ಲಬಹುದು, ಮದುವೆ ಯಾವಾಗ, ಮಕ್ಕಳೆಷ್ಟಾಗಬಹುದು, ನೌಕರಿ ಎಲ್ಲಿ, ಯಾವ ತಂಡ ಗೆಲ್ಲಬಹುದು, ಆಯುಷ್ಯವೆಷ್ಟು ಎಂದು ಕೇಳಿ ಉತ್ತರವನ್ನು ಅಪೇಕ್ಷಿಸುವ ರೂಢಿ ನಮ್ಮಲ್ಲಿದೆ. ಆದರೆ, ಇಂಥ ಯಾವುದೇ ಪ್ರಶ್ನೆಗಳಿಗೂ ಕೃತಕ ಬುದ್ಧಿಮತ್ತೆಯಲ್ಲಿಉತ್ತರವಿಲ್ಲ. ನಮ್ಮ ಜನ್ಮ ದಿನಾಂಕವನ್ನು ಕೊಟ್ಟರೆ ಜಾತಕವನ್ನು ಮಾಡಿ ಕೊಡಬಲ್ಲದು ಆದರೆ, ವ್ಯಾಖ್ಯಾನ ಮಾಡುವ ತಾಕತ್ತು ಅದಕ್ಕಿಲ್ಲ. ಹಲವಾರು ಆ್ಯಪ್ ಗಳು ‘‘ನಾವು ಭವಿಷ್ಯವನ್ನು ಹೇಳಬಲ್ಲೆವು,’ ಎನ್ನುತ್ತವೆ. ಆದರೆ, ಅದನ್ನು ನಂಬಬೇಡಿ. ಮನುಷ್ಯನೇ ಭವಿಷ್ಯವನ್ನು ಹೇಳಲುಅಸಮರ್ಥನಾಗಿರುವಾಗ ಈ ಎಐಗೆ ಎಲ್ಲಿಂದ ಸಾಧ್ಯ? ಹೀಗಾಗಿ ಭವಿಷ್ಯವನ್ನು ನಾವೇ ಸೃಷ್ಟಿಸಿಕೊಳ್ಳಬೇಕೇ ಹೊರತು ಕೃತಕ ಬುದ್ಧಿಮತ್ತೆಯ ಕೈಯಲ್ಲಿಕೊಡಲು ಹೋಗಬಾರದು. ್ಞ ವಿಕ್ರಂ ಜೋಶಿ
ಎಐ ವಿಶ್ಲೇಷಕರು

