ಮಲಬಾರ್ ಗೋಲ್ಡ್ ನಲ್ಲಿಬುರ್ಖಾ ಧರಿಸಿ ಬಂದು ಕಳ್ಳತನ
ವಿಕ ಸುದ್ದಿಲೋಕ ಕಲಬುರಗಿ
ಇಲ್ಲಿನ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ ಶೋರೂಮ್ ಬುರ್ಖಾ ಧರಿಸಿದ ಮಹಿಳೆಯಿಂದ ಬಂಗಾರದ ಆಭರಣ ಕಳ್ಳತನವಾದ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಏ.6ರಂದು ಸಂಜೆ 6.15ರಿಂದ 6.35ರ ಸಮಯದಲ್ಲಿಬುರ್ಖಾ ಧರಿಸಿದ ಮಹಿಳೆ ಶೋರೂಮ್ ಆಗಮಿಸಿ, ಬಂಗಾರದ ಆಭರಣಗಳನ್ನು ನೋಡಿದ್ದಾರೆ. ಈ ವೇಳೆ ಉದ್ಯೋಗಿಗೆ ಗೊತ್ತಾಗದಂತೆ ಸುಮಾರು ಅಂದಾಜು ಮೌಲ್ಯ 4.28 ಲಕ್ಷ ರೂ.ಯ 30.397 ಗ್ರಾಂ. ಬಂಗಾರ ಬಳೆಗಳನ್ನು ಕಳ್ಳತನ ಮಾಡಿದ್ದಾಳೆ. ನಂತರ ಸಿಸಿ ಕ್ಯಾಮೆರಾದಲ್ಲಿನೋಡಿದಾಗ ಕಳ್ಳತನ ಮಾಡಿರುವುದು ದೃಢಪಟ್ಟಿದೆ ಎಂದು ಶೋರೂಮ್ ಮ್ಯಾನೇಜರ್ ಮೆಹಬೂಬ್ ನಬಿಸಾಬ್ ಸದಾಫ್ ನೀಡಿರುವ ದೂರಿನಲ್ಲಿತಿಳಿಸಿದ್ದಾರೆ.

