ಯಥಾ ಪ್ರಕಾರ ಅಂಕಗಳನ್ನು ಪರಿಗಣಿಸುವಂತೆ ನಿರ್ದೇಶನ

Contributed bychandruhiremath06@gmail.com|Vijaya Karnataka

ರಾಜ್ಯ ಸರಕಾರದ ತೃತೀಯ ಭಾಷೆಗಳ ಗ್ರೇಡಿಂಗ್‌ ನಿರ್ಧಾರಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಹಿಂದಿನಂತೆ ಅಂಕಗಳನ್ನೇ ಪರಿಗಣಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಲಾಗಿದೆ. ಈ ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾವಿರಾರು ಶಿಕ್ಷಕರು ಗೊಂದಲಕ್ಕೊಳಗಾಗಿದ್ದರು. ಹೈಕೋರ್ಟ್‌ ಆದೇಶವು ತೃತೀಯ ಭಾಷಾ ಶಿಕ್ಷಕರಿಗೆ ಸಂದ ಜಯವಾಗಿದೆ.

high court order reinstates grading system for third language marks

*ಶಶೀಲ ನಮೋಶಿ ಚಿತ್ರ ಬಳಸಿ*

ರಾಜ್ಯದ ಸಮಸ್ತ ತೃತೀಯ ಭಾಷಾ ಶಿಕ್ಷಕರಿಗೆ ಸಂದ ಜಯ: ಶಶೀಲ್ ನಮೋಶಿ(ಕಿಕ್ಕರ್ )

ಯಥಾ ಪ್ರಕಾರ ಅಂಕಗಳ ಪರಿಗಣಿಸುವಂತೆ ನಿರ್ದೇಶನ

ವಿಕ ಸುದ್ದಿಲೋಕ ಕಲಬುರಗಿ

ರಾಜ್ಯ ಸರಕಾರ ಹಿಂದಿ ಭಾಷೆಯನ್ನೊಳಗೊಂಡಂತೆ ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡುವುದನ್ನು ಕೈಬಿಟ್ಟು ಗ್ರೇಡಿಂಗ್ ನೀಡುವ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವುದಕ್ಕೆ ಎಂಎಲ್ಸಿ ಶಶೀಲ್ ನಮೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನಂತೆ ಯಥಾ ಪ್ರಕಾರ ಅಂಕಗಳನ್ನು ಪರಿಗಣಿಸಿ ಗ್ರೇಡಿಂಗ್ ನೀಡುವ ಪದ್ಧತಿಯನ್ನು ಕೈ ಬಿಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ರಾಜ್ಯ ಸರಕಾರವು ತರಾತುರಿಯಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಕೇವಲ ರಾಜಕೀಯ ದುರುದ್ದೇಶವನ್ನು ಇಟ್ಟುಕೊಂಡು ಹಿಂದಿ ಭಾಷೆಯನ್ನು ಗುರಿಯಾಗಿಸಿ ಏಕಾಏಕಿ ತೃತೀಯ ಭಾಷೆಗೆ ಅಂಕಗಳನ್ನು ನೀಡುವ ಪದ್ಧತಿಯನ್ನು ಕೈಬಿಟ್ಟು ಗ್ರೇಡಿಂಗ್ ಪದ್ಧತಿ ಜಾರಿಗೆ ತರಲು ನಿರ್ಧರಿಸಿತ್ತು. ಈ ನಿರ್ಧಾರವು ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕಗಳನ್ನು 625ರ ಬದಲಾಗಿ 525ಕ್ಕೆ ಇಳಿಸಿ ಹಿಂದಿಯನ್ನು ಒಳಗೊಂಡಂತೆ ಎಲ್ಲತೃತೀಯ ಭಾಷೆಗಳ ಮಹತ್ವವನ್ನು ಕಳೆಯುವ ಹಾಗೆ ಮಾಡಿತ್ತು. ಇದರಿಂದಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಜತೆಗೆ ಸಾವಿರಾರು ಶಿಕ್ಷಕರು ಗೊಂದಲಕ್ಕೊಳಗಾಗಿದ್ದರು. ಇಂದು ಹೈಕೋರ್ಟ್ ಸರಕಾರದ ನಿರ್ಧಾರಕ್ಕೆ ತಡೆ ನೀಡಿ ಹಿಂದಿನಂತೆ ಅಂಕ ಪದ್ಧತಿಯನ್ನೇ ಮುಂದುವರಿಸುವಂತೆ ನಿರ್ದೇಶನ ನೀಡಿದ್ದು ರಾಜ್ಯದ ತೃತೀಯ ಭಾಷಾ ಶಿಕ್ಷಕರಿಗೆ ಸಂದ ಜಯವಾಗಿದೆ ಎಂದು ಅವರು ತಿಳಿಸಿದ್ದಾರೆ.