ಚಿತ್ರ:ಸಿದ್ಧರಾಮ ಶರಣರು ಬೆಲ್ದಾಳ
ವಚನ ಸಾಹಿತ್ಯ, ವೈಚಾರಿಕತೆ ಸಾರಿದ ಶರಣರು| ಸರಳ ಜೀವನದ ಸಾಕಾರ ಮೂರ್ತಿ
ಬೆಲ್ದಾಳ ಶರಣರಿಗೆ ಒಲಿದ ಬಸವ ರಾಷ್ಟ್ರೀಯ ಪ್ರಶಸ್ತಿ
ವಿಜಯಕುಮಾರ ಬೆಲ್ದೆ ಬೀದರ್
vಜ್ಜಿayk್ಠಞa್ಟ.ಚಿಛ್ಝಿdಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಹನ್ನೆರಡನೇ ಶತಮಾನದ ಬಸವಾದಿ ಶರಣರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ತಮ್ಮ ಜೀವನದ ಉದ್ದಕ್ಕೂ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದಿರುವ ಕೌಠಾ(ಬಿ)ಯ ಬಸವ ಯೋಗಾಶ್ರಮದ ಡಾ.ಸಿದ್ಧರಾಮ ಬೆಲ್ದಾಳ ಶರಣರು ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಒಲಿದು ಬಂದಿದೆ.
ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ1948ರ ಫೆ.11ರಂದು ಜನಿಸಿದ್ದಾರೆ. ತಂದೆ ಲಾಲಪ್ಪ, ತಾಯಿ ಲಕ್ಷ್ಮೇ ನದೇವಿ. ಬೆಲ್ದಾಳ ಶರಣರು ಎಂದೇ ಖ್ಯಾತರಾಗಿರುವ ಡಾ.ಸಿದ್ಧರಾಮ ಬೆಲ್ದಾಳ ಶರಣರು ಕಲ್ಯಾಣ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿತ್ವ. ಸಿದ್ಧರಾಮ ಬೆಲ್ದಾಳರು ಕಳೆದ ಹಲವು ದಶಕಗಳಿಂದ ಗಡಿ ಜಿಲ್ಲೆಬೀದರ್ ಸೇರಿ ಹೊರ ರಾಜ್ಯಗಳಲ್ಲೂಬಸವಣ್ಣನವರ ವಚನ ಸಾಹಿತ್ಯ ಮತ್ತು ವೈಚಾರಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿಪ್ರಮುಖ ಪಾತ್ರ ವಹಿಸಿದ್ದಾರೆ. ನುಡಿದಂತೆ ನಡೆ ಎಂಬ ಶರಣರ ವಾಣಿಯಂತೆ ಸರಳ ಜೀವನ ನಡೆಸುತ್ತ, ಜನರಲ್ಲಿಸನ್ಮಾರ್ಗ ಬಿತ್ತುತ್ತ ಬಂದಿದ್ದಾರೆ. ಜಾತಿ-ಮತ ಬೇಧವಿಲ್ಲದೆ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಸಿದ್ಧರಾಮ ಬೆಲ್ದಾಳ ಅವರಿಗೆ ಈ ರಾಷ್ಟ್ರೀಯ ಮಟ್ಟದ ಗೌರವ ಲಭಿಸಿರುವುದಕ್ಕೆ ಜಿಲ್ಲೆಯ ನಾನಾ ಮಠಾಧೀಶರು, ಸಾಹಿತಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಇದು ಕೇವಲ ವ್ಯಕ್ತಿಯೊಬ್ಬರಿಗೆ ಸಂದ ಪ್ರಶಸ್ತಿಯಲ್ಲ, ಬದಲಾಗಿ ಬಸವ ತತ್ವಕ್ಕೆ ಸಂದ ಜಯ ಎಂದು ವ್ಯಾಖ್ಯಾನಿಸಿದ್ದಾರೆ. ನುಡಿದಂತೆ ನಡೆ, ನಡೆದಂತೆ ನುಡಿ ಎಂಬ ತತ್ವಕ್ಕೆ ಬದ್ಧರಾಗಿರುವ ಸಿದ್ಧರಾಮ ಬೆಲ್ದಾಳರು, ಕಾಯಕವೇ ಕೈಲಾಸ ಎಂಬ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇವರ ನೇತೃತ್ವದಲ್ಲಿಬೆಲ್ದಾಳ ಗ್ರಾಮವು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪ್ರಶಸ್ತಿಗಳು ಸಾಧನೆ ಹುಡುಕಿಕೊಂಡು ಬರಬೇಕು ಎಂಬುದಕ್ಕೆ ಸಿದ್ಧರಾಮ ಬೆಲ್ದಾಳರು ಸಾಕ್ಷಿಯಾಗಿದ್ದಾರೆ. ಅವರ ಈ ಸಾಧನೆಯು ಮುಂಬರುವ ಯುವ ಪೀಳಿಗೆಗೆ ಶರಣ ಮಾರ್ಗದಲ್ಲಿನಡೆಯಲು ಸ್ಫೂರ್ತಿಯಾಗಲಿದೆ.
*** ಬಾಕ್ಸ್ --
ಕಾಯಕ ಯೋಗಿ ಬೆಲ್ದಾಳ ಶ್ರೀ
ಡಾ.ಸಿದ್ಧರಾಮ ಶರಣರು ಬೆಲ್ದಾಳ ಅವರು ಕೇವಲ ಆಧ್ಯಾತ್ಮಿಕ ಚಿಂತಕರಷ್ಟೇ ಅಲ್ಲದೆ, ಶರಣ ತತ್ವವನ್ನು ಮೈಗೂಡಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಕಾಯಕಯೋಗಿ. ಅತ್ಯಂತ ಸರಳ ಜೀವನ ನಡೆಸುವ ಇವರು ಜಾತಿ-ಮತದ ಭೇದವಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುವ ಶರಣ ಸಂಸ್ಕೃತಿ ಪಾಲಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಯುವಕರಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿಇವರ ಪಾತ್ರ ದೊಡ್ಡದು. ಇವರ ಸುದೀರ್ಘ ಸಾಮಾಜಿಕ ಮತ್ತು ಧಾರ್ಮಿಕ ಸೇವೆ ಪರಿಗಣಿಸಿ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
**ಬಾಕ್ಸ್ **
ದಲಿತ ಮಕ್ಕಳ ದತ್ತು
ಗೌತಮ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ರ ಚಿಂತನೆಗಳ ಮೂಲಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮತ್ತು ಧಾರ್ಮಿಕ ವಿಚಾರಗಳನ್ನು ನಾಡಿನುದ್ದಕ್ಕೂ ಸಾರುತ್ತಿದ್ದಾರೆ. ದಾಸೋಹ ಮನೋಭಾವ ಹೊಂದಿರುವ ಡಾ.ಬೆಲ್ದಾಳ ಅವರು ಅನೇಕ ದಲಿತ ಬಡಮಕ್ಕಳನ್ನು ದತ್ತು ಪಡೆದು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಮಾದಾರ ಚೆನ್ನಯ್ಯನವರ ಪ್ರಸಾದ ನಿಲಯ, ಹರಳಯ್ಯ ಪ್ರೌಢಶಾಲೆ, ಹರಳಯ್ಯ ಸಂಯುಕ್ತ ಪದವಿ ಪೂರ್ವ, ಪದವಿ ಕಾಲೇಜು ಗಳನ್ನು ಸಹ ನಡೆಸುತ್ತಿದ್ದಾರೆ. ಸಾಹಿತ್ಯಿಕವಾಗಿ ಶೂನ್ಯ ಸಂಪಾದನೆಯ ರಹಸ್ಯ, ವಚನ ತತ್ವಸಾರ, ಭಗವಾನ ಬುದ್ಧ, ಷಟಸ್ಥಲ ಸಂಪತ್ತು, ವಚನ ತತ್ವಾನುಭವ ವಚನಗಳಲ್ಲಿಶಿವಯೋಗ ಸುಖ, ಶರಣರ ಬೆಳಗಿನ ಬೆಳಕು ಹೀಗೆ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಬಸವಶ್ರೀ ಪ್ರಶಸ್ತಿಯೂ ಬಂದಿದೆ.

