ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿರುವ ನಸೀರ್ ಅಹಮದ್ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹಮದ್ ಖಾನ್ ಮಾತುಕತೆ ನಡೆಸಿದರು. ಸದ್ಯದಲ್ಲೆಅವರ ಪರಿಷತ್ ಸದಸ್ಯತ್ವದ ಅವಧಿಯೂ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿನಸೀರ್ ಭೇಟಿ ಮಾಡಿದ ಜಮೀರ್ ಸಮಾಧಾನ ಹೇಳಿದರು. ಬಳಿಕ ಮಾತನಾಡಿದ ಜಮೀರ್ ‘‘ನಸೀರ್ ಅಹಮದ್ ಪಕ್ಷದಲ್ಲಿತುಂಬಾ ಹಿರಿಯರು. ಅವರನ್ನು ವಜಾಗೊಳಿಸಿದ್ದರಿಂದ ನನಗೂ ಬಹಳ ಬೇಸರ, ನೋವಾಗಿದೆ,’’ ಎಂದರು.

