ತುಮಕೂರು: ದೊರೆ ಮಾಡಿದರೆ ಮಾಡಿದ ತಪ್ಪಿಗೆ ದಂಡವಿಲ್ಲಎಂಬ ಗಾದೆಯಿದೆ ಎಂದು ಶಾಸಕ ಕೆ.ಎನ್ .ರಾಜಣ್ಣ ಪರೋಕ್ಷವಾಗಿ
ಡಿಧಿಸಿಧಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು. ಸಿದ್ದರಾಮಯ್ಯ ಬಣದ ನಾಯಕರನ್ನು ಟಾರ್ಗೆಟ್ ಮಾಡಲಾಗು ತ್ತಿದೆ ಎಂಬ ವಿಚಾರಕ್ಕೆ ಮಧುಗಿರಿಯಲ್ಲಿಬುಧವಾರ ಪ್ರತಿಕ್ರಿಯಿಸಿ,‘‘ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಸದ್ಗುರು ಹೇಳಿದ್ದರು ; ರಾಹುಲ್ ಗಾಂಧಿ ಐ ಡೋಂಟ್ ನೋ. ಹು ಈಸ್ ರಾಹುಲ್ ಗಾಂಧಿ ಎಂದಿದ್ದರು. ಅವರ ಜತೆ ಹೋಗಿ ಕುಳಿತುಕೊಂಡಾಗ ಶಿಸ್ತು ಮೀರುವುದಿಲ್ಲವಾ? ದೊರೆ ಮಾಡಿದ ತಪ್ಪಿಗೆ ದಂಡವಿಲ್ಲ’’ ಎಂದು ಟೀಕಿಸಿದರು.

