ಅಂತರ್ ರಾಜ್ಯಮಟ್ಟದ ಕ್ರೀಡಾ ವೈಭವ, ನಿವೃತ್ತ ಸೈನಿಕನಿಗೆ ಸನ್ಮಾನ

Contributed byvkkarkala@gmail.com|Vijaya Karnataka

ಹೊಸ್ಮಾರಿನಲ್ಲಿ ಮಲೆಕುಡಿಯ ಸಮಾಜದ ವತಿಯಿಂದ ಅಂತರ್‌ ರಾಜ್ಯಮಟ್ಟದ ಕ್ರೀಡಾ ವೈಭವ-2026 ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಆನಂದ ಕಬ್ಬಿನಾಲೆ ಮತ್ತು ನಾಟಿ ವೈದ್ಯೆ ಗುಲಾಬಿ ಗೌಡ್ತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮತ್ತು ಕ್ರೀಡೆ ಮುಖ್ಯ ಎಂದು ಗಣ್ಯರು ಅಭಿಪ್ರಾಯಪಟ್ಟರು.

a momentous honor for retired soldier at sports extravaganza

ವಿಕ ಸುದ್ದಿಲೋಕ ಕಾರ್ಕಳ

ಉಡುಪಿ ಜಿಲ್ಲಾಮಲೆಕುಡಿಯ ಸಂಘದ ಆಶ್ರಯದಲ್ಲಿಹಾಗೂ ಕ್ರೀಡಾಕೂಟ ಸಮಿತಿ ಉಡುಪಿ ಜಿಲ್ಲೆವತಿಯಿಂದ ಮಲೆಕುಡಿಯ ಸಮಾಜ ಬಾಂಧವರ ಅಂತರ್ ರಾಜ್ಯಮಟ್ಟದ ಕ್ರೀಡಾ ವೈಭವ-2026 ಹಾಗೂ ಎಲ್ಲಸಮುದಾಯ ಬಾಂಧವರ ಮುಕ್ತ ಹಗ್ಗ ಜಗ್ಗಾಟ ಮತ್ತು ಸಭಾ ಕಾರ್ಯಕ್ರಮ ಹೊಸ್ಮಾರಿನ ಗುರುಕೃಪಾ ಸೆಂಟ್ರಲ್ ಸ್ಕೂಲ್ ನಲ್ಲಿಶನಿವಾರ ನಡೆಯಿತು.

ಬೆಂಗಳೂರಿನ ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಹಿಂದುಳಿದ ಸಮುದಾಯಗಳು ಇತ್ತೀಚಿನ ದಿನಗಳಲ್ಲಿಪ್ರತಿ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ವೃದ್ಧಿಸಿಕೊಂಡಿರುವುದು ಆಶಾದಾಯಕ ಸಂಗತಿ. ಇದಕ್ಕೆ ಮೂಲ ಕಾರಣ ಶಿಕ್ಷಣವಾಗಿದ್ದು, ಮಲೆಕುಡಿಯರು ಸೇರಿದಂತೆ ಎಲ್ಲತಳ ಸಮುದಾಯಗಳು ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದರು.

ಕ್ರೀಡಾಕೂಟ ಸಮಿತಿ ಅಧ್ಯಕ್ಷ ಕರ್ಣ ನೂರಾಳ್ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ತಳ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಕ್ರೀಡೆಗಳ ಮೂಲಕ ಸಂಘಟಿತರಾಗುವುದು ಅಗತ್ಯ. ಮಲೆಕುಡಿಯ ಸಮುದಾಯದ ಜತೆ ಸದಾ ನಿಲ್ಲುವುದಾಗಿ ಭರವಸೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮತ್ತು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎನ್ .ಎಂ. ಮಾತನಾಡಿದರು.

ಸೇನೆಯಲ್ಲಿ24 ವರ್ಷ 19 ದಿನಗಳ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಆನಂದ ಕಬ್ಬಿನಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ವತಿಯಿಂದ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ನಾಟಿ ವೈದ್ಯೆ ಗುಲಾಬಿ ಗೌಡ್ತಿ (ಕಬ್ಬಿನಾಲೆ) ಅವರನ್ನು ಸನ್ಮಾನಿಸಲಾಯಿತು.

ಪಂದ್ಯಾಟದಲ್ಲಿಪುರುಷರ ವಾಲಿಬಾಲ್ ನಲ್ಲಿಚೆನ್ನಯ ಸೈಬರ್ ಸವಣಾಲು ಎ-ಪ್ರಥಮ, ಚೆನ್ನಯ ಸೈಬರ್ ಸವಣಾಲು ಬಿ.-ದ್ವಿತೀಯ, ಮಹಿಳೆಯರ ತ್ರೋಬಾಲ್ ನಲ್ಲಿದುರ್ಗಾಪರಮೇಶ್ವರಿ ಅಂಡಾರು ಪ್ರಥಮ, ಚಾಮುಂಡೇಶ್ವರಿ ಫ್ರೆಂಡ್ಸ್ ಧರ್ಮಸ್ಥಳ-ದ್ವಿತೀಯ, ಬೆಸ್ಟ್ ರಿಸಿವರ್ -ಶ್ವೇತಾ (ಧರ್ಮಸ್ಥಳ), ಆಲ್ ರೌಂಡರ್ -ಶೋಭಾ, ಬೆಸ್ಟ್ ಅಟ್ಯಾಕರ್ -ಮಲ್ಲಿಕಾ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿಚಾಮುಂಡೇಶ್ವರಿ ಫ್ರೆಂಡ್ಸ್ ಧರ್ಮಸ್ಥಳ-ಪ್ರಥಮ, ಶ್ರೀಮೂಜಿಲ್ನಯಾ ಕನ್ಯಾಲು-ದ್ವಿತೀಯ, ದುರ್ಗಾಪರಮೇಶ್ವರಿ ಅಂಡಾರು ಬಿ.-ತೃತೀಯ, ದುರ್ಗಾಪರಮೇಶ್ವರಿ ಅಂಡಾರು ಎ.-ಚತುರ್ಥ, ಮುಕ್ತ ಹಗ್ಗ ಜಗ್ಗಾಟದಲ್ಲಿಮೂಜಿಲ್ನಯಾ ಫ್ರೆಂಡ್ಸ್ -ಪ್ರಥಮ, ಕನ್ಯಾಲು ಫ್ರೆಂಡ್ಸ್ -ದ್ವಿತೀಯ, ಕನ್ಯಾಲು ಫ್ರೆಂಡ್ಸ್ -ತೃತೀಯ, ಮೂಜಿಲ್ನಯಾ ಈದು-ಚತುರ್ಥ, ಕೆಜಿ ವಿಭಾಗ ಹಗ್ಗ ಜಗ್ಗಾಟದಲ್ಲಿವೀರಾಂಜನೇಯ ಬಿ.-ಪ್ರಥಮ, ವೀರಾಂಜನೇಯ ಎ.-ದ್ವಿತೀಯ, ಸ್ವಾಮಿ ಕೊರಗಜ್ಜ ಬೆಳ್ತಂಗಡಿ-ತೃತೀಯ, ಮೂಜಿಲ್ನಯಾ ಕನ್ಯಾಲು-ಚತುರ್ಥ ಸ್ಥಾನ ಪಡೆದರು.

ವಿಜಯ್ ಗೌಡ ಅತ್ತಾಜೆ ಹಗ್ಗ ಜಗ್ಗಾಟ ಪಂದ್ಯಾಟ ನಿರೂಪಿಸಿದರು.

ಈದು ಮೂಜಿಲ್ನಾಯಾ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್ , ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು, ನಾರಾಯಣ ಪಂಡಿತ್ ಮೂಡುಕೋಡಿ, ಜಿನೇಂದ್ರ ಜೈನ್ , ಸುರೇಶ್ ಕುಮಾರ್ ಶೆಟ್ಟಿ ಹೊಸ್ಮಾರು, ನಾರಾಯಣ ಸುವರ್ಣ, ಪ್ರಶಾಂತ ಚಿತ್ತಾರ, ಸುಂದರ ಬಿ., ಪ್ರಮೋದ್ ಕುಲಾಲ್ , ರಜತ್ ಮೋಹನ್ , ಜಗನ್ನಾಥ ದೇವಾಡಿಗ ಹಾಗೂ ಗುರುಕೃಪಾ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ರೋಹಿತ್ ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ವಂದಿಸಿದರು.

ಫೊಟೋಕ್ಯಾಪ್ಶನ್ -ಸೇನೆಯಲ್ಲಿಸೇವೆ ಸಲ್ಲಿಸಿ ನಿವೃತ್ತರಾದ ಆನಂದ ಕಬ್ಬಿನಾಲೆ ಅವರನ್ನು ಸನ್ಮಾನಿಸಲಾಯಿತು.

(ಫೊಟೋ:16ಕೆವಿ-ಎಂಎಲ್ ಕೆ)