ಕುಂದಾಪುರ : ಕೂಲಿಕಾರರಿಗೆ ಸರಕಾರಿ ಭೂಮಿ ಹಕ್ಕಿಗಾಗಿ, ಬಾಡಿಗೆ ಮನೆಯಲ್ಲಿರುವ ಕೂಲಿಕಾರರಿಗೆ ಸ್ವಂತ ಮನೆ ಒದಗಿಸಬೇಕೆಂದು ಸರಕಾರದ ಮೇಲೆ ಒತ್ತಡ ತರುವ ಹೋರಾಟಗಳನ್ನು ನಡೆಸಿ ಸರಕಾರಿ ಭೂಮಿ ಎಲ್ಲಿದೆ ಎಂದು ಕುಹಕ ಮಾಡಿದವರಿಗೆ ದಾಖಲೆ ಸಮೇತ ಭೂಮಿ ಗುರುತಿಸಿ ತಿರುಗೇಟು ನೀಡಿ ಅತೀವವಾಗಿ ತೊಡಗಿಸಿಕೊಂಡ ಜಿಲ್ಲೆಯ ಅಪರೂಪದ ಹೋರಾಟಗಾರ ವೆಂಕಟೇಶ್ ಕೋಣಿ ಎಂದು ಸಿಪಿಎಂ ಜಿಲ್ಲಾಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಬುಧವಾರ ಬೈಂದೂರಿನ ಸಿಐಟಿಯು ಕಚೇರಿಯಲ್ಲಿನಡೆದ ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ ಶ್ರದ್ಧಾಂಜಲಿ ಸಭೆಯಲ್ಲಿಮಾತನಾಡಿದರು.
ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ನುಡಿನಮನ ಸಲ್ಲಿಸಿ ಮಾತನಾಡಿ, ವೆಂಕಟೇಶ್ ಕೋಣಿ ಅವರು ಒಂದೇ ಕ್ಷೇತ್ರದ ಹೋರಾಟಗಾರರಲ್ಲ. ಶೋಷಿತರ ಹಲವಾರು ಹೋರಾಟಗಳಲ್ಲಿಸಕ್ರಿಯವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸ ಕೈಗೊಂಡರೂ ಹಠದಿಂದ ಪೂರ್ಣಗೊಳಿಸುತ್ತಿದ್ದವರು ಎಂದು ಸ್ಮರಿಸಿದರು.
ಅಂಗವಿಕಲ ಮತ್ತು ಪಾಲಕರ ಸಂಘದ ಮುಖಂಡ ಮಂಜುನಾಥ್ ಹೆಬ್ಬಾರ್ , ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಗಣೇಶ್ ತೊಂಡೆಮಕ್ಕಿ ನುಡಿನಮನ ಸಲ್ಲಿಸಿದರು. ನಾಗರತ್ನ ನಾಡ, ಗೋಪಾಲಕೃಷ್ಣ ದೇವಾಡಿಗ, ಶೀಲಾವತಿ, ನಾಗರತ್ನ ಪಡುವರಿ, ಶ್ರೀಧರ ಉಪ್ಪುಂದ, ಅಣ್ಣಪ್ಪ, ಅಮ್ಮಯ್ಯ, ಜ್ಯೋತಿ , ಶಾಂತಾ,ಶೋಭಾ ನಾಡ, ರಾಮ ಕಂಬದಕೋಣೆ, ಲಕ್ಷ್ಮಣ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಪೋಟೊ//16ಕೆ-ವಿಎನ್ ಕೆ//. ಸುರೇಶ ಕಲ್ಲಾಗರ ಶ್ರದ್ಧಾಂಜಲಿ ಸಭೆಯಲ್ಲಿಮಾತನಾಡಿದರು.

