ಟಿಬಿ ಡ್ಯಾಂ ಸಂಗ್ರಹ ಸಾಮರ್ಥ್ಯ ಕುಸಿತ?

Vijaya Karnataka

ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ ಎಂದು ತಜ್ಞರು ಶಂಕಿಸಿದ್ದಾರೆ. 2016ರ ಸಮೀಕ್ಷೆಯಲ್ಲಿ 105.788 ಟಿಎಂಸಿ ಸಾಮರ್ಥ್ಯ ಇತ್ತು. ಐದು ವರ್ಷಕ್ಕೊಮ್ಮೆ ನಡೆಯಬೇಕಾದ ಸಮೀಕ್ಷೆ ಹತ್ತು ವರ್ಷಗಳಿಂದ ನಡೆದಿಲ್ಲ. ಈಗ 100 ರಿಂದ 102 ಟಿಎಂಸಿ ನೀರು ಮಾತ್ರ ಸಂಗ್ರಹವಾಗಬಹುದು ಎನ್ನಲಾಗುತ್ತಿದೆ. ಹೂಳಿನಿಂದಾಗಿ ಸಾಮರ್ಥ್ಯ ಕಡಿಮೆಯಾಗಿದೆ. ಹೊಸ ಸಮೀಕ್ಷೆ ಶೀಘ್ರದಲ್ಲೇ ನಡೆಯಲಿದೆ.

tungabhadra dam capacity decline experts warning

2016ರ ಸಮೀಕ್ಷೆಯಲ್ಲಿ105.788 ಟಿಎಂಸಿ ಸಂಗ್ರಹ ಸಾಮರ್ಥ್ಯ | 5 ವರ್ಷಕ್ಕೊಮ್ಮೆ ನಡೆಯಬೇಕಾದ ಸಮೀಕ್ಷೆ 10 ವರ್ಷದಿಂದ ನನೆಗುದಿ

ಜಯಪ್ಪ ರಾಥೋಡ್ ಹೊಸಪೇಟೆ (ವಿಜಯನಗರ)

್ಟaಠಿhಟd್ಜayak್ಠಞa್ಟ92ಃಜಞaಜ್ಝಿ.್ಚಟಞ

ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ನೆರೆಯ ಆಂಧ್ರದ ಕೆಲವು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಕಳೆದ ಹತ್ತು ವರ್ಷಗಳಲ್ಲಿ3ರಿಂದ 5 ಟಿಎಂಸಿ ಕುಸಿತ ಕಂಡಿರುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜಲಾಶಯದ ಸಂಗ್ರಹ ಸಾಮರ್ಥ್ಯ ತಿಳಿಯಲು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಸಮೀಕ್ಷೆ ಹತ್ತು ವಷÜರ್ ಗಳಿಂದ ನಡೆದಿಲ್ಲ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಜಲಾಶಯದಲ್ಲಿಈಗ ಗರಿಷ್ಠ 100ರಿಂದ 102 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲು ಸಾಧ್ಯ ಎನ್ನಲಾಗುತ್ತಿದೆ. ಉಳಿದ ಭಾಗ ಹೂಳಿನಿಂದ ಆವೃತವಾಗಿದ್ದು, ಸಂಗ್ರಹ ಸಾಮರ್ಥ್ಯವನ್ನೇ ಕಸಿಯುವ ಆತಂಕ ಮೂಡಿಸಿದೆ.

ಕಾಲಕಾಲಕ್ಕೆ ಬದಲಾದ ಸಂಗ್ರಹ ಸಾಮರ್ಥ್ಯ:

1972ರಲ್ಲಿನಡೆದ ಸಮೀಕ್ಷೆಯಲ್ಲಿಸಂಗ್ರಹ ಸಾಮರ್ಥ್ಯ 6 ಟಿಎಂಸಿ ಏರಿಕೆ ಕಂಡಿತ್ತು. ನಂತರದ ಸಮೀಕ್ಷೆಗಳಲ್ಲಿಸಾಮರ್ಥ್ಯ ಕುಸಿಯುತ್ತಲೇ ಬಂದಿತ್ತು. ಟೋಪೊಗ್ರಾಫಿಕ್ ಮತ್ತು ಹೈಡ್ರೋಗ್ರಾಫಿಕ್ ಮಾದರಿಯ ಎರಡು ಸರ್ವೆಗಳ ಪೈಕಿ ಈವರೆಗೆ 9 ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸಲಾಗಿದೆ. 1953ರಲ್ಲಿ132.473 ಟಿಎಂಸಿ ನೀರಿತ್ತು. 1963ರಲ್ಲಿನಡೆದ ಸಮೀಕ್ಷೆ ವೇಳೆಗೆ 114.660 ಟಿಎಂಸಿ ಸಾಮರ್ಥ್ಯ ದಾಖಲಾಗಿತ್ತು. 1972ರಲ್ಲಿ121.080 ಟಿಎಂಸಿಗೆ ಏರಿಕೆ ಕಂಡಿತ್ತು. 1978ರಲ್ಲಿ117.695ಟಿಎಂಸಿ, 1981ರಲ್ಲಿ115.680ಟಿಎಂಸಿ, 1985ರಲ್ಲಿ111.832ಟಿಎಂಸಿ, 1993ರಲ್ಲಿ111.50ಟಿಎಂಸಿ, 2004ರಲ್ಲಿ104.340ಟಿಎಂಸಿ, 2008ರಲ್ಲಿ100.855 ಟಿಎಂಸಿ ಸಾಮರ್ಥ್ಯ ಕಂಡುಬಂದಿತ್ತು. 14 ವರ್ಷಗಳ ಬಳಿಕ 2016ರಲ್ಲಿನಡೆದ ಸಮೀಕ್ಷೆ ವೇಳೆ 105.788 ಟಿಎಂಸಿ ದಾಖಲಾಗುವ ಮೂಲಕ 5 ಟಿಎಂಸಿ ಹೆಚ್ಚಳ ಸಾಮರ್ಥ್ಯ ಇರುವುದು ಬೆಳಕಿಗೆ ಬಂದಿತ್ತು.

ಕೇಂದ್ರ ಜಲ ಆಯೋಗದ ಎಚ್ಚರಿಕೆ:

19ನೇ ಕ್ರಸ್ಟ್ ಗೇಟ್ ದುರಂತ ಸಂಭವಿಸಿದ 2024ರ ಆ.10ರಂದು ಜಲಾಶಯದಲ್ಲಿ105 ಟಿಎಂಸಿ ನೀರಿತ್ತು. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಮತ್ತು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ (ಎನ್ ಡಿಎಸ್ ಎ) ಎಚ್ಚರಿಕೆಗಳನ್ನು ನೀಡಿದೆ. ಹಳೆಯ ಜಲಾಶಯವಾಗಿರುವುದರಿಂದ ಗರಿಷ್ಠ ಮಟ್ಟದವರೆಗೆ ನೀರು ಸಂಗ್ರಹಿಸಿ ಗೋಡೆಗಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು ಎಂದು ಸೂಚಿಸಲಾಗಿದೆ. ಇದನ್ನು ತಜ್ಞರ ತಂಡವೂ ಬೆಂಬಲಿಸಿದೆ. ಇದೇ ಕಾರಣಕ್ಕೆ ಗರಿಷ್ಠ ಮಟ್ಟದ ನೀರು ಸಂಗ್ರಹಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಮತ್ತೊಂದೆಡೆ ಜಲಾಶಯದ ಸಂಗ್ರಹ ಸಾಮರ್ಥ್ಯ ತಿಳಿಯಲು ಹೊಸ ಸಮೀಕ್ಷೆ ನಡೆಸಲು ಮುಂದಿನ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದೆ. ಈ ವೈಜ್ಞಾನಿಕ ಸಮೀಕ್ಷೆಯ ನಂತರವಷ್ಟೇ ಜಲಾಶಯದಲ್ಲಿತುಂಬಿರುವ ಹೂಳಿನ ಪ್ರಮಾಣ ಮತ್ತು ಸಂಗ್ರಹ ಸಾಮರ್ಥ್ಯದ ವಿವರ ಬಯಲಾಗಲಿದೆ.

...............

ಇತ್ತೀಚೆಗೆ ನಾವು ಅಧ್ಯಯನ ನಡೆಸಿದ ಬಳಿಕ ತಜ್ಞರು ಗರಿಷ್ಠ 102 ಟಿಎಂಸಿ ವರೆಗೆ ನೀರು ಸಂಗ್ರಹವಾಗಬಹುದು ಎನ್ನುತ್ತಿದ್ದಾರೆ. ನೂರು ಟಿಎಂಸಿ ಸಂಗ್ರಹಿಸಬಹುದು.

-ಕನ್ಹಯ್ಯ ನಾಯ್ಡು ಜಲಾಶಯ ಕ್ರಸ್ಟ್ ಗೇಟ್ ವಿನ್ಯಾಸ ತಜ್ಞ

...............

ಫೋಟೊ: ವಿಜೆಎನ್ 14ಜಯಪ್ಪ01, 02:

ತುಂಗಭದ್ರಾ ಜಲಾಶಯದಲ್ಲಿಪ್ರಸ್ತುತ ನೀರಿನ ಸಂಗ್ರಹ.