ಸೆಲೆಬ್ರಿಟಿಗಳ ವಿಲಕ್ಷಣ ಅಭ್ಯಾಸಗಳು
----
ಇಂಟ್ರೋ
ಭಾರತದಲ್ಲಿಮನರಂಜನೆ ಕ್ಷೇತ್ರದಲ್ಲಿಕಿರುತೆರೆಯದ್ದು ದೊಡ್ಡ ಪಾಲಿದೆ. ದಶಕಗಳಿಂದ ಅದ್ಭುತ ಧಾರಾವಾಹಿಗಳು, ಟಿವಿ ಶೋಗಳು ಹಾಗೂ ಮರೆಯಲಾಗದ ಪಾತ್ರಗಳ ಮೂಲಕ ಕಿರುತೆರೆಯು ಜನರನ್ನು ರಂಜಿಸುತ್ತಾ ಬಂದಿದೆ. ಆದರೆ, ಚಿತ್ರೀಕರಣದ ವೇಳೆ ನಡೆಯುವನ ಕೆಲವೊಂದು ಸಂಗತಿಗಳು ಪರದೆಯ ಮೇಲಿನ ಕಥೆಗಿಂತಲೂ ಹೆಚ್ಚು ರೋಚಕವಾಗಿರುತ್ತವೆ ಮತ್ತು ತಮಾಷೆಯದ್ದಾಗಿರುತ್ತದೆ. ಸೆಟ್ ನಲ್ಲಿಪಾಲಿಸುವ ವಿಚಿತ್ರ ನಿಯಮಗಳಿಂದ, ವಿಲಕ್ಷಣ ಹವ್ಯಾಸಗಳವರೆಗೆ ನಟ-ನಟಿಯರ ಕೆಲವೊಂದು ಸಂಗತಿಗಳು ಇಲ್ಲಿವೆ.
---
ಮರೆಗುಳಿ ಹೀರಾಖಾನ್
‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯ ಅಕ್ಷರಾ ಪಾತ್ರ ಮತ್ತು ‘ಬಿಗ್ ಬಾಸ್ 11’ರ ಮೂಲಕ ಮನೆಮಾತಾದವರು ಹೀನಾ ಖಾನ್ . ಪರದೆಯ ಮೇಲೆ ಫುಲ್ ಕಂಟ್ರೋಲ್ ನಲ್ಲಿರುವ ಈ ನಟಿ, ವೈಯಕ್ತಿಕ ಜೀವನದಲ್ಲಿಮಾತ್ರ ಮರೆಗುಳಿ! 2025ರ ‘ಲಾಫ್ಟರ್ ಚೆಫ್ ್ಸ 2’ ಸೆಟ್ ನಲ್ಲಿಅವರ ಪತಿ ರಾಕಿ ಜೈಸ್ವಾಲ… ಈ ರಹಸ್ಯ ಬಿಚ್ಚಿಟ್ಟಿದ್ದಾರೆ. ಕೀಲಿ ಕೈಯಿಂದ, ಮೊಬೈಲ್ ವರೆಗೆ ಯಾವುದನ್ನೂ ಎಲ್ಲಿಇಟ್ಟಿದ್ದೇನೆ ಅನ್ನುವುದೇ ಹೀರಾಖಾನ್ ಗೆ ನೆನಪಿರುವುದಿಲ್ಲವಂತೆ.
ಕ್ರೈಂ ಪೆಟ್ರೋಲ್ ದಿವ್ಯಾಂಕಾ ತ್ರಿಪಾಠಿ
‘ಯೇ ಹೈ ಮೊಹಬ್ಬತೇನ್ ’ ಖ್ಯಾತಿಯ ದಿವ್ಯಾಂಕಾ ತ್ರಿಪಾಠಿ ತಮ್ಮ ವೃತ್ತಿಜೀವನದಲ್ಲಿಎಷ್ಟು ಶ್ರದ್ಧೆ ಹೊಂದಿದ್ದಾರೆಂದರೆ, ಅದು ಕೆಲವೊಮ್ಮೆ ಅವರ ನಿದ್ದೆಯನ್ನೇ ಕೆಡಿಸಿತ್ತು. ‘ಕ್ರೈಂ ಪೆಟ್ರೋಲ…’ ನಿರೂಪಣೆ ಮಾಡುವಾಗ, ಅವರು ಪ್ರತಿಯೊಂದು ಅಪರಾಧ ಪ್ರಕರಣದ ಎಲ್ಲಾವಿವರಗಳನ್ನು ಕೇಳಿ ಪಡೆಯುತ್ತಿದ್ದರಂತೆ. ಆ ವಿವರಗಳನ್ನು ಓದಿ ಅವರಿಗೆ ಭಯಾನಕ ಕನಸುಗಳು ಬೀಳುತ್ತಿದ್ದರೂ ಸಹ, ವಿವರಗಳನ್ನು ತಿಳಿದುಕೊಳ್ಳುವ ಹಠವನ್ನು ಮಾತ್ರ ಅವರು ಬಿಡುತ್ತಿರಲಿಲ್ಲಎಂದು ಭಾರತಿ ಸಿಂಗ್ ಅವರ ಪಾಡ್ ಕಾಸ್ಟ್ ನಲ್ಲಿಬಹಿರಂಗಪಡಿಸಿದ್ದಾರೆ.
ಹನುಮನ ಮರೆಯದ ದಾರಾ ಸಿಂಗ್
1987ರ ‘ರಾಮಾಯಣ’ ಧಾರಾವಾಹಿಯಲ್ಲಿಹನುಮಂತನ ಪಾತ್ರಕ್ಕೆ ಜೀವ ತುಂಬಿದವರು ದಾರಾ ಸಿಂಗ್ . ಆ ಪಾತ್ರ ಅವರ ಮೇಲೆ ಎಂತಹ ಪ್ರಭಾವ ಬೀರಿತ್ತೆಂದರೆ, ಶೋ ಮುಗಿದು 10 ವರ್ಷಗಳ ನಂತರವೂ ಅವರು ನಿದ್ದೆಯಲ್ಲಿಹನುಮಂತನ ಸಂಭಾಷಣೆಗಳನ್ನು ಬಡಬಡಿಸುತ್ತಿದ್ದರಂತೆ! ಇದನ್ನು ನೋಡಿ ಅವರ ಪತ್ನಿ, ‘ಶೋ ಮುಗಿದು ದಶಕವೇ ಕಳೆದಿದೆ, ಈಗಲಾದರೂ ಮಲಗಿ’ ಎಂದು ಅವರನ್ನು ಎಬ್ಬಿಸುತ್ತಿದ್ದ ಘಟನೆಯನ್ನು ಅವರ ಮಗ ವಿಂದು ದಾರಾ ಸಿಂಗ್ ನೆನಪಿಸಿಕೊಂಡಿದ್ದಾರೆ.
ನರ್ವಸ್ ಆಗುವ ಕಪಿಲ… ಶರ್ಮಾ
ಭಾರತೀಯ ಕಾಮಿಡಿ ಲೋಕದ ಸುಲ್ತಾನ ಎನಿಸಿಕೊಂಡಿರುವ ಕಪಿಲ… ಶರ್ಮಾ, ವೇದಿಕೆಯ ಮೇಲೆ ಭಾರಿ ಆತ್ಮವಿಶ್ವಾಸ ಪ್ರದರ್ಶಿಸುತ್ತಾರೆ. ಆದರೆ, ಪ್ರತಿ ಸಂಚಿಕೆಯ ಚಿತ್ರೀಕರಣಕ್ಕೆ ಮುನ್ನ ಅವರು ಇಂದಿಗೂ ವಿಪರೀತವಾಗಿ ಗಾಬರಿಗೊಳ್ಳುತ್ತಾರೆ. ಭಾರತಿ ಸಿಂಗ್ ತಿಳಿಸಿರುವಂತೆ, ನೂರಾರು ಯಶಸ್ವಿ ಶೋಗಳನ್ನು ನೀಡಿದ್ದರೂ, ವೇದಿಕೆ ಏರುವ ಮೊದಲು ಕಪಿಲ… ಬೆವರುತ್ತಿರುತ್ತಾರೆ. ಪ್ರತಿಯೊಂದು ಎಪಿಸೋಡ್ ಅನ್ನು ತಮ್ಮ ವೃತ್ತಿಜೀವನದ ಮೊದಲ ಶೋ ಎಂಬಂತೆ ಆತಂಕದಿಂದಲೇ ಎದುರಿಸುವುದು ಅವರ ವಿಶೇಷತೆ.

