ಬೆಂಗಳೂರಿನಲ್ಲೀಗ

Contributed byKiran Mr. Kumar|Vijaya Karnataka

ಬೆಂಗಳೂರಿನಲ್ಲಿ 'ಲವ್‌ ಸೀಸನ್ಸ್‌' ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಕೃತ್ವಿಕ್‌ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ ಮತ್ತು ಚಂದನಾ ಗೌಡ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಾಜೇಶ್‌ ನಟರಂಗ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೀರ್‌ಸಮಥ್‌ರ್‍ ಸಂಗೀತ ನೀಡಿದ್ದಾರೆ. ಚಿತ್ರವು ಪ್ರೀತಿಯ ವಿಷಯವನ್ನು ಆಧರಿಸಿದೆ.

a new experience in the bangalore film industry love seasons movie is taking shape

ಬೆಂಗಳೂರಿನಲ್ಲೀಗ ಲವ್ ಸೀಸನ್ಸ್

ಲವ್ ಸೀಸನ್ಸ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

‘ಕ್ಷತ್ರಿಯ’, ‘ಬುದ್ಧಿವಂತ 2’, ‘ಗುರುದೇವ ಹೊಯ್ಸಳ’ ಮುಂತಾದ ಚಿತ್ರಗಳಲ್ಲಿಕೆಲಸ ಮಾಡಿದ ಅನುಭವ ಹೊಂದಿರುವ ಕೃತ್ವಿಕ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ಮುಕುಂದ ರಾಮಸ್ವಾಮಿ ನಾಯಕ. ದಿಯಾ ಕೀರ್ತಿ ಮತ್ತು ಚಂದನಾ ಗೌಡ ಇಬ್ಬರು ನಾಯಕಿಯರು.

ರಾಜೇಶ್ ನಟರಂಗ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಬಗ್ಗೆ ಮಾತಾಡಿರುವ ರಾಜೇಶ್ , ‘ಈ ಚಿತ್ರದಲ್ಲಿಜವಾಬ್ದಾರಿಯುತ ತಂದೆಯ ಪಾತ್ರದಲ್ಲಿನಟಿಸಿದ್ದೇನೆ. ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳತಾಗದ ವಿಚಾರ. ಈ ಭೂಮಿಕೆಯಲ್ಲಿಯೇ ರೂಪುಗೊಂಡಿರುವ ಚಿತ್ರವೇ ಲವ್ ಸೀಸನ್ಸ್ ’ ಎಂದಿದ್ದಾರೆ.

‘ಲವ್ ಸೀಸನ್ಸ್ ’ ಸಿನಿಮಾಕ್ಕೆ ವೀರ್ ಸಮಥ್ ರ್ ಸಂಗೀತ ನಿರ್ದೇಶನ, ಕೆ.ಕಲ್ಯಾಣ್ , ಪ್ರಮೋದ್ ಮರವಂತೆ ಸಾಹಿತ್ಯ, ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಇದೆ. ತಾರಾಬಳಗದಲ್ಲಿಶ್ವೇತಾ ಕೊಗ್ಲೂರು, ಮಂಡ್ಯ ರಮೇಶ್ , ರಾಜೇಶ್ ನಟರಂಗ, ಸಂಗೀತಾ ಅನಿಲ್ , ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್ , ಬೇಬಿ ರಿತು ಸಿಂಗ್ ಮುಂತಾದವರಿದ್ದಾರೆ.