ಕ್ಷೇತ್ರ ಮರುವಿಂಗಡಣೆ ವಿಧೇಯಕದಲ್ಲಿಪಿಒಕೆ ಕ್ಷೇತ್ರಗಳ ಮರುಹಂಚಿಕೆಗೆ ಕ್ರಮ!
ಕೇಂದ್ರ ಸರಕಾರ ಈ ವಾರ ಸಂಸತ್ತಿನಲ್ಲಿ‘ಕ್ಷೇತ್ರ ಮರುವಿಂಗಡಣೆ -2026’ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿದೆ. ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ವನ್ನು ಭಾರತ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡರೆ ಅಲ್ಲಿಕ್ಷೇತ್ರ ಮರುಹಂಚಿಕೆ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲು ಬೇಕಾದ ಕಾನೂನು ಚೌಕಟ್ಟನ್ನು ವಿಧೇಯಕದಲ್ಲಿಅಡಕಗೊಳಿಸಲಾಗಿದೆ.
ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿಪಿಒಕೆಗಾಗಿ 24 ಸ್ಥಾನಗಳನ್ನು ಮೀಸಲಿಡಲಾಗಿದೆ. ಆದರೆ, ಇವುಗಳಲ್ಲಿಇದುವರೆಗೆ ಯಾವುದೇ ಚುನಾವಣೆ ನಡೆದಿಲ್ಲ.
-----------

