ನಿಗದಿತ ಸ್ಥಳದಲ್ಲಿವಾರದ ಸಂತೆ((ವಿಕ ಇಂಪ್ಯಾಕ್ಟ್...))

Contributed bymeghashree0610@gmail.com|Vijaya Karnataka

ದಾಬಸಪೇಟೆಯಲ್ಲಿ ವಾರದ ಸಂತೆಯನ್ನು ನಿಗದಿತ ಸ್ಥಳದಲ್ಲೇ ನಡೆಸಲು ಗ್ರಾಪಂ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಹಿಂದೆ ರಸ್ತೆಗಳಲ್ಲಿ ಸಂತೆ ಸೇರುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ, ಮುಂದಿನ ವಾರದಿಂದ ನಿಗದಿತ ಸ್ಥಳದಲ್ಲೇ ವ್ಯಾಪಾರ ನಡೆಸಲು ಸೂಚನೆ ನೀಡಲಾಗಿದೆ. ಅನಾನುಕೂಲತೆಗಳನ್ನು ಸರಿಪಡಿಸಿ, ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು. ವ್ಯಾಪಾರಿಗಳು ನಿಗದಿತ ಸ್ಥಳದಲ್ಲೇ ವ್ಯಾಪಾರ ಮಾಡಬೇಕು ಎಂದು ತಿಳಿಸಲಾಗಿದೆ.

investment bringing local benefits to dabaspet weekly market

((ವಿಕ ಇಂಪ್ಯಾಕ್ಟ್))

ನಿಗದಿತ ಸ್ಥಳದಲ್ಲಿವಾರದ ಸಂತೆ

ವಿಕ ಸುದ್ದಿಲೋಕ ದಾಬಸಪೇಟೆ

ದಾಬಸಪೇಟೆಯಲ್ಲಿನಿಗದಿತ ಸ್ಥಳದಲ್ಲೇ ವಾರದ ಸಂತೆ ನಡೆಸುವಂತೆ ಕ್ರಮ ಕೈಗೊಳ್ಳುವುದಾಗಿ ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ.

‘ವಾರದ ಸಂತೆಯಿಂದ ಅನಾನುಕೂಲವೇ ಹೆಚ್ಚು’ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ವಿಕ ವಿಶೇಷ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಪಿಡಿಒ ರವಿಶಂಕರ್ ಮತ್ತು ಪಂಚಾಯಿತಿ ಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಮುಂದಿನ ವಾರದ ಸಂತೆಯನ್ನು ನಿಗದಿ ಮಾಡಿರುವ ಸ್ಥಳದಲ್ಲಿಯೇ ನಡೆಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು

ಈ ವರ್ಷ 26 ಲಕ್ಷದ 37 ಸಾವಿರ ರೂ.ಗೆ ಸಂತೆಯ ಬಹಿರಂಗ ಹರಾಜು ನಿಂತಿದೆ. ವ್ಯಾಪಾರಸ್ಥರಿಗೂ ನಾವು ಅನುಕೂಲ ಕಲ್ಪಿಸುವ ಸಲುವಾಗಿ ಸಿಮೆಂಟ್ ಅಡಿಪಾಯಹಾಕಿದ್ದೇವೆ. ಶೀಟ್ ಗಳನ್ನು ಹಾಕಿದ್ದೇವೆ. ಆದರೂ ವ್ಯಾಪಾರಿಗಳು ಬೇಕಾದ ಸ್ಥಳದಲ್ಲಿವ್ಯಾಪಾರ ಮಾಡುವುದು ಸರಿಯಲ್ಲ. ಮುಂದಿನ ವಾರದಿಂದ ನಿಗದಿತ ಸ್ಥಳದಲ್ಲೇ ವ್ಯಾಪಾರ ಮಾಡಬೇಕು ಎಂದು ಸೂಚಿಸಿದರು.

ಮುಂದಿನ ಬುಧವಾರದಿಂದ ಪೋಸ್ಟ್ ಆಫೀಸ್ ರಸ್ತೆಯಿಂದ ಮಕ್ಕಳ ಪಾರ್ಕ್ವರೆಗೂ ಇರುವ ಲೇಔಟ್ ರಸ್ತೆಯ ಎರಡು ಬದಿ ವ್ಯಾಪಾರ ನಿಷೇಧಿಸಿ ನಾಮ ಫಲಕ ಹಾಕುತ್ತೇವೆ. ಯಾವುದೇ ವ್ಯಾಪಾರಿಗಳು ನಿಷೇಧಿತ ಸ್ಥಳದಲ್ಲಿವ್ಯಾಪಾರಕ್ಕೆ ಮುಂದಾಗಬಾರದು. ಈ ವ್ಯಾಪಾರಿಗಳು ಸಂತೆ ಇರುವ ಜಾಗದಲ್ಲಿಸ್ವಚ್ಛ ಮಾಡಿರುವ ಸ್ಥಳದಲ್ಲಿತಾವು ಜಾಗ ಕಾಯ್ದಿರಿಸಿಕೊಳ್ಳಬಹುದು ಎಂದು ತಿಳಿಸಿದರು.

ದೂರಿಗೆ ಸ್ಪಂದನೆ:

ಸಂತೆ ಮೈದಾನವಿದ್ದರೂ ಲೇಔಟ್ ನಲ್ಲಿನ ರಸ್ತೆಗಳಲ್ಲಿಯೇ ಸಂತೆ ಸೇರುವುದು, ಕಸದ ತೊಟ್ಟಿಗಳ ನಿರ್ವಹಣೆ ಇಲ್ಲ, ಸಂತೆಗಾಗಿ ನಿರ್ಮಿಸಿರುವ ಶೆಡ್ ಇದ್ದರೂ, ಉಪಯೋಗವಿಲ್ಲ, ಸ್ವಚ್ಛತೆ, ಭದ್ರತೆ ಮತ್ತು ನಿಯಂತ್ರಣದ ಯಾವುದೇ ಮಾಹಿತಿಯಿಲ್ಲ, ವಿಶಾಲವಾದ ದಾರಿಗಳಿಲ್ಲ, ವಸ್ತುಗಳನ್ನು ಪ್ರತ್ಯೇಕ ಸ್ಥಳದಲ್ಲಿಮಾರಾಟದ ವ್ಯವಸ್ಥೆ ಇಲ್ಲ. ಮಳೆ ಬಂದರಂತೂ ಗುಂಡಿಗಳಲ್ಲಿನೀರು ತುಂಬುತ್ತದೆ. ಗ್ರಾಹಕರು ಓಡಾಡಲು ಕಷ್ಟವಾಗುತ್ತಿದೆ ಎಂಬ ದೂರು ಪಂಚಾಯಿತಿಗೆ ಬಂದಿದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕೊಟ್ 1:

ವಾರದ ಸಂತೆ ಸುಸೂತ್ರವಾಗಿ ನಡೆಸಲು ವ್ಯವಸ್ಥೆ ಮಾಡಲಾಗುವುದು. ಇರುವ ಸ್ಥಳ ಸಾಲದಾದರೆ ಕೆರೆಯ ಪಕ್ಕದಲ್ಲಿರುವ ಜಾಗವನ್ನು ಸರಿಪಡಿಸಲಾಗುತ್ತಿದೆ. ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು,

-ರವಿಶಂಕರ್ , ಪಿಡಿಒ, ಸೋಂಪುರ ಗ್ರಾಮ ಪಂಚಾಯಿತಿ

ಕೊಟ್ 2:

ದಾಬಸಪೇಟೆಯ ದೊಡ್ಡಬಳ್ಳಾಪುರ ರಸ್ತೆ ಸವೀರ್ ಸ್ ರಸ್ತೆಯಿಂದ ಸಂತೆಗೆ ಪ್ರವೇಶ ಇರುತ್ತದೆ. ಜಾಗದ ಕೊರತೆ ಇದ್ದರೆ ಸವೀರ್ ಸ್ ರಸ್ತೆಯ ಒಂದು ಬದಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ವ್ಯಾಪಾರಸ್ಥರ ಬೇಡಿಕೆಯಾಗಿದೆ.

-ಬಸವರಾಜು, ವ್ಯಾಪಾರಿ

ಪೊಟೋ : 1: ದಾಬಸಪೇಟೆಯಲ್ಲಿಸಂತೆಗಾಗಿ ಇರುವ ಶೆಡ್ ನಲ್ಲಿಸ್ಥಳೀಯರ ಅಹವಾಲು ಪಿಡಿಒ ರವಿಶಂಕರ್ ಮತ್ತು ಸಿಬ್ಬಂದಿ ಆಲಿಸಿದರು.