ಸಹಕಾರ ಸಂಘಕ್ಕೆ 3 ಕೋಟಿ ನಿವ್ವಳ ಲಾಭ

Contributed bysulibeleprashanth@gmail.com|Vijaya Karnataka

ಹೊಸಕೋಟೆ ಟೌನ್‌ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಭಾಜನವಾಗಿದೆ. 2025-26ನೇ ಸಾಲಿನಲ್ಲಿ ಸಂಘವು 3 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರವು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದೆ. 5 ಸಾವಿರ ಸದಸ್ಯರನ್ನು ಹೊಂದಿರುವ ಸಂಘವು 204 ಕೋಟಿ ರೂ. ಠೇವಣಿ ಹೊಂದಿದೆ. 182 ಕೋಟಿ ರೂ. ಸಾಲ ವಿತರಿಸಲಾಗಿದ್ದು, 99.6% ಸಾಲ ವಸೂಲಾತಿ ಸಾಧನೆ ಮಾಡಿದೆ.

hosakote agricultural cooperative society achieves a net profit of 3 crores

ವಿಕ ಸುದ್ದಿಲೋಕ ಹೊಸಕೋಟೆ

ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಎನ್ ಸಿಡಿಸಿ ಹಾಗೂ ನಬಾರ್ಡ್ ನಿಂದ ರಾಜ್ಯದಲ್ಲಿಯೇ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ. ಸಂಘ 2025-26ನೇ ಸಾಲಿನಲ್ಲಿಒಟ್ಟು 3 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಸತೀಶ್ ಮಾಹಿತಿ ನೀಡಿದರು.

ನಗರದ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೇಂದ್ರ ಸರಕಾರ ಸಹ ನಮ್ಮ ಸಹಕಾರ ಸಂಘದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘದ ಕಾರ್ಯಚಟುವಟಿಕೆಯನ್ನು ವೆಬ್ ಸೈಟ್ ನಲ್ಲಿಪ್ರದರ್ಶಿಸುವ ಮೂಲಕ ರಾಷ್ಟ್ರವ್ಯಾಪ್ತಿ ನಮ್ಮ ಸಹಕಾರ ಸಂಘದ ಆಡಳಿತ ವ್ಯವಹಾರ ನೋಡುವಂತೆ ಮಾಡಿದೆ. ಇದು ನಮ್ಮ ಸಹಕಾರ ಸಂಘದ ನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಸಲ್ಲಬೇಕಾದ ಗೌರವವಾಗಿದೆ ಎಂದರು.

ಪ್ರಸುತ್ತ ಸಹಕಾರ ಸಂಘದಲ್ಲಿ5 ಸಾವಿರ ಸದಸ್ಯರಿದ್ದು, 204 ಕೋಟಿ ರೂ. ಠೇವಣಿ ಹೊಂದಿದೆ. ಕಳೆದ ಸಾಲಿಗಿಂತ 40 ಕೋಟಿ ಠೇವಣಿ ಹೆಚ್ಚಾಗಿದ್ದು, ಶೇ.25ರಷ್ಟು ಠೇವಣಿ ಪ್ರಮಾಣ ಹೆಚ್ಚಾಗಿದೆ. ಒಟ್ಟಾರೆಯಾಗಿ ಪ್ರಸಕ್ತ ಸಾಲಿನಲ್ಲಿ182 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿಯಲ್ಲಿಶೇ.99.6ರಷ್ಟು ಸಾಧನೆ ಮಾಡಿದೆ ಎಂದರು

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ. ಕೃಷ್ಣಮೂರ್ತಿ ಮಾತನಾಡಿ, 1976ರಲ್ಲಿಬಚ್ಚೇಗೌಡರ ಸಹಕಾರದಿಂದ ಈ ಸಂಘ ಸ್ಥಾಪನೆಗೊಂಡಿದ್ದು, ಪ್ರತಿ ಹಂತದಲ್ಲೂಮಾಜಿ ಸಂಸದ ಬಿ.ಎನ್ . ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡರ ಮಾರ್ಗದರ್ಶನದಲ್ಲಿಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಮುನ್ನಡೆಸಿಕೊಂಡು ಬರುತ್ತಿದ್ದು, ಇಂದು ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು

ಈ ಸಂದರ್ಭದಲ್ಲಿಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಅಪ್ಪಯ್ಯ, ನಿರ್ದೇಶಕರಾದ ಕೆ. ಕೃಷ್ಣ ಮೂರ್ತಿ, ರಾಜಗೋಪಾಲ್ , ರಾಜಪ್ಪ, ರಾಮಚಂದ್ರ, ವೆಂಕಟೇಶ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣಶರ್ಮ, ವ್ಯವಸ್ಥಾಪಕ ನಂಜುಂಡೇಗೌಡ, ಸಿಬ್ಬಂದಿ ಚೇತನ್ , ಮಂಜುನಾಥ್ ಸೇರಿ ಹಲವರು ಹಾಜರಿದ್ದರು.

ಚಿತ್ರ-16 ಸೂಲಿಬೆಲೆ 1: ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ಲೆಕ್ಕ ಪತ್ರದ ಮಾಹಿತಿಯನ್ನು ಅಧಕ್ಷ ಸತೀಶ್ ನೀಡಿದರು.