ದಿನಭವಿಷ್ಯ 17 ಏಪ್ರಿಲ್ 2026
ಶ್ರೀಪತಿ ಭಟ್ | ಬೆಂಗಳೂರು
(ಕಟಕ, ಧನು, ಮಕರ -ಈ ಮೂರು ರಾಶಿಯವರಿಗೆ ಗುಪ್ತ ಧನ ಯೋಗ)
ಧಿಧಿಧಿಧಿಧಿಧಿಧಿಧಿಧಿಧಿಧಿ---------------
ಮೇಷ : ವಿಷಯವನ್ನು ಗೌಪ್ಯವಾಗಿ ಇರಿಸಿದಲ್ಲಿಭವಿಷ್ಯದಲ್ಲಿತೊಂದರೆಯನ್ನು ಅನುಭವಿಸುವಂತೆ ಆಗುವುದು. ಉತ್ತಮ ಸಂಧಾನಕಾರರಾಗಿರುವ ನಿಮಗೆ ಇಂದಿನ ಸಮಸ್ಯೆ ಕಬ್ಬಿಣದ ಕಡಲೆ ಆಗಬಹುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಪ್ಪು)
-----------
ವೃಷಭ: ಪರಿಸ್ಥಿತಿಗಳನ್ನು ಸುಧಾರಣೆಗೆ ತರುವ ಪ್ರಯತ್ನದಿಂದ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗದಂತಾಗಲಿದೆ. ಆರೋಗ್ಯ ಸುಧಾರಿಸಿ ಮನಸ್ಸಿಗೆ ನೆಮ್ಮದಿ ಸಿಗುವುದು. ರೆಡಿಯೋದಲ್ಲಿಕಾರ್ಯಕ್ರಮಕ್ಕೆ ಕರೆ ಬರುವುದು.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಆಕಾಶ ನೀಲಿ)
-----------
ಮಿಥುನ : ತುಮುಲಗಳನ್ನು ಮನಸ್ಸಿಗೆ ಹತ್ತಿರವಾದವರಲ್ಲಿಹೇಳಿಕೊಳ್ಳುವುದರಿಂದ ಕಡಿಮೆಯಾಗುವುದು. ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬೂದು)
-----------
ಕಟಕ: ಶ್ರಮಕ್ಕೆ ಸರಿಸಮಾನವಾದ ಧನಾಗಮನಕ್ಕೆ ಯಾವುದೇ ತೊಂದರೆ ಇಲ್ಲ. ಸ್ನೇಹಪರ ಮನೋಭಾವದಿಂದ ಸ್ಥಾನಮಾನಗಳು ಲಭಿಸಲಿವೆ. ಶ್ರೀಮಹಾ ಗಣಪತಿ ಆರಾಧನೆಯಿಂದ ಮನೋಕಾಮನೆಗಳು ಈಡೇರಲಿವೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಿತ್ತಳೆ)
--------
ಸಿಂಹ :ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಗಾತಿಯಲ್ಲಿಒಪ್ಪಿಗೆ ಪಡೆಯಿರಿ. ಶುಭ ಕಾರ್ಯಗಳಿಗೆ ಅಥವಾ ಕ್ಷೇತ್ರ ದರ್ಶನಕ್ಕಾಗಿ ಖರ್ಚಿನ ಸಂಭವವಿರುವುದು. ಹಿರಿಯರ ಮಾರ್ಗದರ್ಶನ ಪಡೆಯುವುದು ಉತ್ತಮ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕಂದು)
----------
ಕನ್ಯಾ : ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಿರಿ. ನಿತ್ಯದ ಸಿಬ್ಬಂದಿ ವರ್ಗದವರಿಂದ ಸಹಕಾರ ನಿರೀಕ್ಷಿತಬೇಡಿ. ಸರಕಾರಿ ಗುತ್ತಿಗೆ ಕೆಲಸಗಳು ನಿಮ್ಮದಾಗಲಿವೆ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ನೀಲಿ
----------
ತುಲಾ : ನಡೆಯುವ ಕೆಲವು ಸೂಕ್ಷ್ಮವಾದ ಸನ್ನಿವೇಶಗಳು ಸಂಕುಚಿತ ಮನೋಭಾವನೆಯನ್ನು ದೂರ ಮಾಡುತ್ತದೆ. ಇದರಿಂದ ಎಲ್ಲವನ್ನು ಮತ್ತು ಎಲ್ಲರನ್ನೂ ಎದುರಿಸುವ ಮನೋಸ್ಥೆ ೖರ್ಯವನ್ನು ತಂದು ಕೊಡುತ್ತದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಹಸಿರು)
--------
ವೃಶ್ಚಿಕ : ಗೊತ್ತಿಲ್ಲದ ವಿಷಯವನ್ನು ಹಿರಿಯರ ಬಳಿ ಕೇಳಿ ತಿಳಿಯುವುದು ಅಗೌರವವೆಂದು ಭಾವಿಸಬೇಡಿ. ಯಾವುದೇ ಟೀಕೆಗಳಿಗೆ ಕಿವಿಯೊಡ್ಡ ಬೇಡಿ. ಪ್ರಾಮಾಣಿಕತೆಯಿಂದ ಕಾರ್ಯ ಮುಂದುವರಿಸಿ.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಬಿಳಿ)
--------------
ಧನು : ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವವರಿಗೆ ಹೆಮ್ಮೆಯ ಸಂದರ್ಭ ಬರಲಿದೆ. ಪತ್ನಿಯ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯಲಿವೆ. ಸಂತೃಪ್ತಿಯ ಜೀವನವನ್ನು ಮುನ್ನಡೆಸಿ.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಪಚ್ಚೆ)
-------------
ಮಕರ : ವೃತ್ತಿಯಲ್ಲಿಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಕಾರ್ಯದ ಒತ್ತಡದಿಂದ ಭೋಜನದ ಸಮಯದಲ್ಲಿವ್ಯತ್ಯಯಗಳು ಸಂಭವಿಸಬಹುದು. ಬಂಧನದ ಭೀತಿಯಿಂದ ಹೊರ ಬರುವಿರಿ.
(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಹಳದಿ.)
-------------
ಕುಂಭ : ವೃತ್ತಿಯಲ್ಲಿಅನುಭವ ಮತ್ತು ಪರಿಶ್ರಮ ಸೂಕ್ತ ಸಮಯದಲ್ಲಿಬೆಳಕಿಗೆ ಬಂದು ಉಪಯೋಗವಾಗುವುದು. ಕಾರ್ಮಿಕರ ಬೇಡಿಕೆಗಳನ್ನು ಅಲ್ಲಗಳೆಯದೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಿ.
(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ಕೆಂಪು)
-------------
ಮೀನ : ಸಮೀಪವರ್ತಿಗಳ ದುರ್ಬುದ್ಧಿಯಿಂದ ವ್ಯಾಪಾರ ವಹಿವಾಟುಗಳಲ್ಲಿವಂಚನೆ ಕಾರ್ಯ ನಡೆದಾವು. ಅತಿಯಾಗಿ ನಂಬಲು ಆಗದೆ ಇರುವುದು ಒಳ್ಳೆಯದು. ತಂಡವನ್ನು ನಿಭಾಯಿಸುವಲ್ಲಿಯಶಸ್ವಿಯಗುವಿರಿ.
(ಶುಭ ಸಂಖ್ಯೆ 8, ಅದೃಷ್ಟ ಬಣ್ಣ : ಗುಲಾಬಿ)

