ಹದಿಹರೆಯದ ಪೋಷಕರಿಗೆ ‘ಬೆಂಗಳೂರು ಇನ್ ’ ಸಂದೇಶ

Contributed bybabitha.salian@timesgroup.com|Vijaya Karnataka

ಇಂದು ರಾಜ್ಯಾದ್ಯಂತ 'ಬೆಂಗಳೂರು ಇನ್‌' ಸಿನಿಮಾ ಬಿಡುಗಡೆಯಾಗಲಿದೆ. ಹದಿಹರೆಯದ ಮಕ್ಕಳಿರುವ ಪೋಷಕರು ಮತ್ತು ಕಾಲೇಜು ಯುವಕ, ಯುವತಿಯರು ನೋಡಲೇಬೇಕಾದ ಈ ಚಿತ್ರ ನೈಜ ಅಪರಾಧ ಸುದ್ದಿಗಳ ಆಧಾರಿತವಾಗಿದೆ. ಬೆಂಗಳೂರಿನ ಹೋಟೆಲ್‌ನಲ್ಲಿ ನಡೆಯುವ ಕೊಲೆಯ ಸುತ್ತ ಕಥೆ ಸಾಗುತ್ತದೆ. ಅಪರಾಧ ಚಕ್ರವ್ಯೂಹದಲ್ಲಿ ಸಿಲುಕುವ ಡೆಲಿವರಿ ಬಾಯ್‌ನನ್ನು ಕ್ರೈಂ ರಿಪೋರ್ಟರ್‌ ಹೇಗೆ ನಿರಪರಾಧಿ ಎಂದು ಸಾಬೀತುಪಡಿಸುತ್ತಾಳೆ ಎಂಬುದೇ ಚಿತ್ರದ ತಿರುಳು. ಇದು ಯುವಜನತೆಗೆ ಸಂದೇಶ ನೀಡಲಿದೆ.

bengaluru in movie conveys a real message to young parents

ಹದಿಹರೆಯದ ಪೋಷಕರಿಗೆ ‘ಬೆಂಗಳೂರು ಇನ್ ’ ಸಂದೇಶ

-ಇಂದು ತೆರೆಗೆ

ಇಂಟ್ರೊ

ಟೀನೇಜ್ ಮಕ್ಕಳಿರುವ ಪೋಷಕರು, ಕಾಲೇಜು ಯುವಕ, ಯುವತಿಯರು ನೋಡಲೇಬೇಕಾದ ‘ಬೆಂಗಳೂರು ಇನ್ ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ನೈಜ ಅಪರಾಧ ಸುದ್ದಿಗಳನ್ನೇ ಆಧರಿಸಿ ಹೆಣೆದಿರುವ ಈ ಚಿತ್ರದ ಬಗ್ಗೆ ನಿರ್ದೇಶಕ ಕಾರ್ತಿಕ್ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.

ಕಿರಣ್

ಕಾರ್ತಿಕ್ ನಿರ್ದೇಶನದಲ್ಲಿಧರ್ಮ ಕೀರ್ತಿರಾಜ್ , ಅನುಶಾ ರೈ, ರಿಶಾ ಗೌಡ, ಶಶಿಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿರುವ ವಿಭಿನ್ನ ಕ್ರೈಂ ಥ್ರಿಲ್ಲರ್ ಎಮೋಷನಲ್ ಡ್ರಾಮಾ ಸಿನಿಮಾ ‘ಬೆಂಗಳೂರು ಇನ್ ’ ಇಂದು ಬಿಡುಗಡೆಯಾಗಲಿದೆ. ಇದರ ಟೈಟಲ್ ಹೋಟೆಲೊಂದರ ಹೆಸರಾಗಿದ್ದು, ಅದರಲ್ಲಿನಡೆಯುವ ಒಂದು ಕೊಲೆಯ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಈ ಚಿತ್ರ ಈಗಿನ ಯುವಜನತೆ ತಿಳಿದುಕೊಳ್ಳಲೇಬೇಕಾದ ಸಂದೇಶ ನೀಡಲಿದೆ.

ಅಪರಾಧ ಚಕ್ರವ್ಯೂಹದಲ್ಲಿನಾಯಕ

ಬೆಂಗಳೂರಿನಂಥ ಮಹಾನಗರಗಳ ಸಣ್ಣ ಹೋಟೆಲ್ ಗಳಲ್ಲಿನಡೆಯುವ ಅತ್ಯಾಚಾರ, ಅನಾಚಾರಗಳ ಹಿಂದಿರುವ ಗ್ಯಾಂಗ್ ಹಾಗೂ ಮಾಫಿಯಾ ಕುರಿತ ಕಥೆಯನ್ನು ಹೆಣೆದು ‘ಬೆಂಗಳೂರು ಇನ್ ’ ಸಿನಿಮಾ ಮಾಡಿರುವುದಾಗಿ ನಿರ್ದೇಶಕ ಕಾರ್ತಿಕ್ ಹೇಳಿದ್ದಾರೆ. ‘ಈ ಚಿತ್ರದಲ್ಲಿನಾಯಕ ಸಿನಿಮಾ ಹೀರೊ ಆಗಬೇಕೆಂದು ಸಿಟಿಗೆ ಬಂದು ಅವಕಾಶಗಳಿಗೆ ಕಾಯುತ್ತಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಒಂದು ದಿನ ತನಗೆ ಅರಿವಿಲ್ಲದೇ ಒಂದು ಕೊಲೆ ಕೇಸ್ ನಲ್ಲಿಸಿಕ್ಕಿಬೀಳುತ್ತಾನೆ. ಪೊಲೀಸ್ ವ್ಯವಸ್ಥೆ ಸೇರಿದಂತೆ ಕೆಲವು ಪ್ರತಿಷ್ಠಿತರು ಆತನನ್ನೇ ಅಪರಾಧಿ ಮಾಡುವ ಹುನ್ನಾರ ನಡೆಸುತ್ತಾರೆ. ಆಗ ಕ್ರೈಂ ರಿಪೋರ್ಟರ್ ಆಗಿರುವ ನಾಯಕಿಯು ಡೆಲಿವರಿ ಬಾಯ್ ನನ್ನು ಈ ಕೇಸ್ ನಲ್ಲಿಹೇಗೆ ನಿರಪರಾಧಿ ಎಂದು ಸಾಬೀತುಪಡಿಸುತ್ತಾಳೆ, ಈ ಸಮಯದಲ್ಲಿಅವರಿಬ್ಬರ ನಡುವೆ ಅರಳುವ ಪ್ರೇಮ, ಅಪರಾಧದ ಚಕ್ರವ್ಯೂಹದಿಂದ ನಾಯಕ ಹೇಗೆ ಹೊರಬರುತ್ತಾರೆ ಎನ್ನುವುದೇ ಈ ಸಿನಿಮಾ’ ಎಂದು ಅವರು ತಿಳಿಸಿದ್ದಾರೆ.

ಗೆಳೆಯನ ಕಥೆಯೇ ಸ್ಫೂರ್ತಿ

ಈ ಸಿನಿಮಾ ಕಥೆಗಾಗಿ ರಿಸರ್ಚ್ ಮಾಡುತ್ತಿದ್ದ ನಿರ್ದೇಶಕ ಕಾರ್ತಿಕ್ ರಿಗೆ ತನ್ನ ಆಪ್ತ ಸ್ನೇಹಿತನೇ ಇಂಥ ಹಗರಣದಲ್ಲಿಸಿಕ್ಕಿಬಿದ್ದ ಸತ್ಯ ಗೊತ್ತಾಯಿತು. ಗೆಳೆಯ ಎದುರಿಸಿದ ಕಷ್ಟಗಳೇ ಈ ಕಥೆ ಮಾಡಲು ಅವರಿಗೆ ಸ್ಫೂರ್ತಿಯಾಗಿದೆ. ಈ ಬಗ್ಗೆ ಹೇಳಿರುವ ಅವರು, ‘ಕೆಲವು ಪೇಪರ್ ಆರ್ಟಿಕಲ್ ಗಳು, ಅವುಗಳ ಫಾಲೋಅಪ್ ಬರಹಗಳು ನನ್ನ ಸಿನಿಮಾ ಕಥೆಗೆ ಸಹಾಯ ಮಾಡಿದವು. ಮಲಯಾಳಂ ಸಿನಿಮಾವನ್ನು ಕಂಟೆಂಟ್ ಸಿನಿಮಾ ಎನ್ನುತ್ತಾರೆ. ಕನ್ನಡದಲ್ಲೂಆ ಥರದ ಚಿತ್ರ ಮಾಡಬಹುದು ಎನ್ನುವುದಕ್ಕೆ ‘ಬೆಂಗಳೂರು ಇನ್ ’ ಒಂದು ಉದಾಹರಣೆ. ಇದರಲ್ಲಿನಾಲ್ಕು ಹಾಡುಗಳಿದ್ದು, ಎರಡು ಪ್ರೇಮಗೀತೆ, ಇನ್ನೊಂದು ಡೆಲಿವರಿ ಬಾಯ್ ್ಸನ ಕಷ್ಟನಷ್ಟದ ಕುರಿತ, ಮತ್ತೊಂದು ತಂದೆ ಸೆಂಟಿಮೆಂಟ್ ನ ಹಾಡುಗಳಿವೆ’ ಎಂದಿದ್ದಾರೆ.

ಸಮಸ್ಯೆಗೆ ಪರಿಹಾರ

ತಾನು ಇದರ ಕಥೆ ಮಾಡಲು ಶುರುವಾಗಿ ಮೂರು ವರ್ಷಗಳಾಗಿವೆ. ಆದರೆ ಇವತ್ತಿಗೂ ಇಂಥ ಹಗರಣಗಳು ನಡೆಯುತ್ತವೇ ಇವೆ. ಇದರಿಂದ ಜನರು ಮನೆ ಮಠ ಹಾಳು ಮಾಡಿಕೊಳ್ಳುತ್ತಲೇ ಇದ್ದಾರೆ ಎಂದಿರುವ ನಿರ್ದೇಶಕರು, ‘ಪ್ರತಿ ಸಿನಿಮಾದಲ್ಲಿಯೂ ಒಂದು ಸಮಸ್ಯೆ ಕುರಿತಾಗಿ ಚರ್ಚೆ ನಡೆದರೆ, ‘ಬೆಂಗಳೂರು ಇನ್ ’ ಚಿತ್ರದಲ್ಲಿಸಮಸ್ಯೆಗೊಂದು ಪರಿಹಾರದ ಬಗ್ಗೆ ಚರ್ಚೆ ಮಾಡಲಾಗಿದೆ’ ಎಂದು ವಿವರಿಸಿದ್ದಾರೆ. ಈ ಸಿನಿಮಾದಲ್ಲಿಡೆಲಿವರಿ ಬಾಯ್ ಪಾತ್ರದಲ್ಲಿಧರ್ಮ ಕೀರ್ತಿರಾಜ್ , ರಿಪೋರ್ಟರ್ ಆಗಿ ಅನುಶಾ ರೈ ಹಾಗೂ ರಿಶಾ ಗೌಡ ಒಂದು ವಿಶೇಷ ಪಾತ್ರದಲ್ಲಿನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್ ಹಿಂದೆಂದಿಗಿಂತಲೂ ವಿಭಿನ್ನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.

ಕೋಟ್

‘ಬೆಂಗಳೂರು ಇನ್ ’ ಸಿನಿಮಾದ ಚಿತ್ರಕಥೆಯಲ್ಲಿಅನೇಕ ಇಂಟರ್ ಕಟ್ ಗಳಿವೆ. ಪ್ರಿ ಕ್ಲೈಮ್ಯಾಕ್ಸ್ ವರೆಗೂ ಇದು ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುತ್ತದೆ. ಚಿತ್ರಮಂದಿರದಲ್ಲಿಈ ಸಿನಿಮಾ ನೋಡುವವರಿಗೆ ಸಿಗುವ ಸಿನಿಮ್ಯಾಟಿಕ್ ಅನುಭವ ಸಂಪೂರ್ಣ ಹೊಸದಾಗಿರುತ್ತದೆ. ಈ ಚಿತ್ರದ ಕಥೆ ಎಲ್ಲರ ಬದುಕಿನಲ್ಲಿನಡೆದೇ ಇರುತ್ತದೆ.

-ಕಾರ್ತಿಕ್ ಕೆ. ಮೂರ್ತಿ | ನಿರ್ದೇಶಕ