ಸೀರಿಯಲ್ ‘ನಿಶಾ’ ಸಿನಿ ಕನಸು

Contributed bybabitha.salian@timesgroup.com|Vijaya Karnataka

ಜನಪ್ರಿಯ ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಈಗ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅವರು 'ದರ್ಶನ' ಎಂಬ ಡಾರ್ಕ್ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಸ್ವಸ್ತಿಕ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ನಿಶಾ ರವಿಕೃಷ್ಣನ್ ಅವರು ಸಿನಿಮಾಗಳಲ್ಲಿ ನಟಿಸಲು ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ. ಉತ್ತಮ ಪಾತ್ರಗಳಿಗಾಗಿ ಅವರು ಕಾಯುತ್ತಿದ್ದಾರೆ.

nishas silver screen dream acting adventures

ಸೀರಿಯಲ್ ‘ನಿಶಾ’ ಸಿನಿ ಕನಸು

ಇಂಟ್ರೊ

ಕನ್ನಡ ಸೀರಿಯಲ್ ಜಗತ್ತಿನ ಜನಪ್ರಿಯ ನಟಿ ನಿಶಾ ರವಿಕೃಷ್ಣನ್ ಸಿನಿಮಾದಲ್ಲಿಅಭಿನಯಿಸಲು ಬಿಡುವಿಲ್ಲದಷ್ಟೂ ಬಿಝಿ ಆಗಿರುತ್ತಾರೆ. ಈಗ ಅವರು ಬೆಳ್ಳಿತೆರೆಯಲ್ಲಿಯೂ ಜನರನ್ನು ರಂಜಿಸಿ ಮಿಂಚಬೇಕೆಂದು ಬಯಸಿದ್ದಾರೆ. ಈ ಬಗ್ಗೆ ಅವರು ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.

ಕಿರಣ್

ಜನಪ್ರಿಯ ‘ಗಟ್ಟಿಮೇಳ’ ಧಾರಾವಾಹಿಯಿಂದ ಮನೆಮಾತಾಗಿರುವ ನಿಶಾ ರವಿಕೃಷ್ಣನ್ ಕನ್ನಡ ಹಾಗೂ ತೆಲುಗು ಕಿರುತೆರೆಯ ಟಾಪ್ ಸೀರಿಯಲ್ ಗಳ ನಾಯಕಿಯಾಗಿ ಜನಮನ ತಲುಪಿದವರು. ಈಗವರು ತೆಲುಗು ಧಾರಾವಾಹಿಗಳನ್ನು ಮುಗಿಸಿ ಕನ್ನಡದ ಜನಪ್ರಿಯ ಸೀರಿಯಲ್ ‘ಅಣ್ಣಯ್ಯ’ದಲ್ಲಿಹಿರೋಯಿನ್ ಆಗಿದ್ದಾರೆ. ಒಂದೇ ಧಾರಾವಾಹಿಯಲ್ಲಿನಟಿಸುವ ಮೂಲಕ ಅವರು ಸಿನಿಮಾಗಳಲ್ಲಿಅಭಿನಯಿಸಲು ಸಮಯ ಹೊಂದಿಸುತ್ತಿದ್ದಾರೆ.

ಡಾರ್ಕ್ ಕಾಮಿಡಿ

ನಿಶಾ ರವಿಕೃಷ್ಣನ್ ಈಗ ‘ದರ್ಶನ’ ಸಿನಿಮಾದಲ್ಲಿನಟಿಸುತ್ತಿದ್ದಾರೆ. ಈ ಬಗ್ಗೆ ವಿವರಿಸಿರುವ ಅವರು, ‘ಇದು ಡಾರ್ಕ್ ಕಾಮಿಡಿ ಸಿನಿಮಾವಾಗಿದ್ದು, ಇದರಲ್ಲಿಹಾಸ್ಯ ಕೂಡ ಸಹಜವಾಗಿರುತ್ತದೆ. ಎಲ್ಲಾಬಗೆಯ ಪ್ರೇಕ್ಷಕರನ್ನು ಹಿಡಿದು ಕೂರಿಸಿ ಮಗ್ನವಾಗಿಸುವ ಕಥೆ ಈ ಸಿನಿಮಾದಲ್ಲಿರಲಿದೆ. ನನ್ನ ನಟನೆಯ ‘ಅಂದೊಂದಿತ್ತು ಕಾಲ’ ಚಿತ್ರದ ಸಹನಿರ್ದೇಶಕ ಸ್ವಸ್ತಿಕ್ ಈಗ ‘ದರ್ಶನ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅವರಿಗೆ ಇದು ಚೊಚ್ಚಲ ನಿರ್ದೇಶನವಾಗಿದ್ದು, ನನ್ನ ನಟನೆಯ ಮೂರನೇ ಚಿತ್ರವಿದು. ಕಾಮಿಡಿ ಸಿನಿಮಾ ಅಂದರೆ ಇಲ್ಲಿಯಾವುದೇ ಬೌಂಡರಿಗಳು ಇರುವುದಿಲ್ಲ. ಆಗಲೇ ನಿಶ್ಚಿತವಾಗಿರುವ ಪಾತ್ರಗಳೇ ಒಂಥರ ಮತ್ತು ಕಾಮಿಡಿ ಪಾತ್ರಗಳೇ ಒಂಥರ. ಈ ಚಿತ್ರದಲ್ಲಿತಬಲಾ ನಾಣಿ ನಟಿಸುತ್ತಿದ್ದು, ನಟ ಪೃಥ್ವಿ ಅಂಬಾರ್ ಭರ್ಜರಿ ಕಾಮಿಡಿ ಮಾಡಲಿದ್ದಾರೆ. ಮೊದಲ ಬಾರಿಗೆ ಕಾಮಿಡಿ ಸಿನಿಮಾ ಮಾಡುತ್ತಿರುವುದರಿಂದ ನನಗೂ ಸಾಕಷ್ಟು ಎಕ್ಸೈಟ್ ಮೆಂಟ್ ಇದೆ’ ಎಂದಿದ್ದಾರೆ.

ಸಿನಿಮಾದಲ್ಲಿಬಿಝಿ

ಮುಂದಿನ ದಿನಗಳಲ್ಲಿಸಿನಿಮಾಗೆ ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿರುವ ನಿಶಾ ರವಿಕೃಷ್ಣನ್ , ‘ಇಷ್ಟು ದಿನ ಸೀರಿಯಲ್ ಗಳ ಕಮಿಟ್ಮೆಂಟ್ ಇದ್ದ ಕಾರಣ ನನಗೆ ಸಿನಿಮಾಗೆ ಸಮಯ ಕೊಡಲು ಆಗಿರಲಿಲ್ಲ. ಸದ್ಯಕ್ಕೆ ನಾನು ನಟಿಸುತ್ತಿರುವ ಧಾರಾವಾಹಿಯನ್ನು ಬಿಡಲು ಆಗಲ್ಲ. ‘ಅಣ್ಣಯ್ಯ’ ಸೀರಿಯಲ್ ಮಾಡುತ್ತಿರುವುದೇ ಸಿನಿಮಾ ಹಿನ್ನೆಲೆಯ ಪ್ರಮೋದ್ ಶೆಟ್ಟಿ ಮತ್ತು ಸುಪ್ರೀತಾ ಆಗಿರುವುದರಿಂದ ಅವರು ನನಗೆ ಎಲ್ಲಾರೀತಿಯಲ್ಲೂಬೆಂಬಲ ಕೊಡಲು ಸಿದ್ಧರಿದ್ದಾರೆ. ನಾನೀಗ ಪರಭಾಷಾ ಧಾರಾವಾಹಿಗಳನ್ನು ಮುಗಿಸಿದ್ದೇನೆ ಎಂದು ಗೊತ್ತಾದ ಬೆನ್ನಲ್ಲೇ ನನಗೆ ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿವೆ. ಈ ತಿಂಗಳು 15 ದಿನಗಳ ಸೀರಿಯಲ್ ಶೂಟಿಂಗ್ ಇದೆ. ಉಳಿದ ಸಮಯದಲ್ಲಿಬಿಡುವು ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಚಿತ್ರನಟಿಯಾಗುವ ಆಸೆ

‘ಅದು ಸಿನಿಮಾ ಅಥವಾ ಧಾರಾವಾಹಿಯಾಗಿರಲಿ, ಅದರಲ್ಲಿನಾನು ಒಟ್ಟು ನಟಿಸುತ್ತಲೇ ಇರಬೇಕು ಎನ್ನುವುದೇ ನನ್ನಾಸೆ. ನಾನು ಇಲ್ಲಿಗೆ ಬಂದಿರುವುದೇ ನಟಿಯಾಗಲು. ಎಲ್ಲರಿಗೂ ಇರುವಂತೆ ನನಗೂ ಬೆಳ್ಳಿತೆರೆಯಲ್ಲಿಮಿಂಚಬೇಕು ಎಂದಿದೆ. ಅದಕ್ಕಾಗಿ ನಾನು ಎಲ್ಲೇ ಅಂಥ ಅವಕಾಶ ಸಿಕ್ಕರೆ ಬೇಡ ಎನ್ನುವುದಿಲ್ಲ. ನಾನು ಸೀರಿಯಲ್ ನಲ್ಲೇ ಹೆಚ್ಚು ಜನಪ್ರಿಯಳಾಗಿರುವ ಕಾರಣ ನನಗೆ ಸಿನಿಮಾ ಅವಕಾಶ ನೀಡಲು ಹಿಂಜರಿಯುತ್ತಾರೆ. ಧಾರಾವಾಹಿಯಲ್ಲಿನನ್ನ ಪಾತ್ರಗಳನ್ನು ನೋಡಿದವರು ಬೆಳ್ಳಿತೆರೆಯಲ್ಲಿನನ್ನನ್ನು ಒಪ್ಪುತ್ತಾರೆಯೇ ಎನ್ನುವ ಭಯ ಅವರಿಗೆ ಇರುತ್ತದೆ. ನಮಗೂ ಈ ಪಲ್ಲಟ ಚಾಲೆಂಜಿಂಗ್ ಆಗಿರುತ್ತದೆ. ಎರಡ್ಮೂರು ವರ್ಷ ಒಂದೇ ಪಾತ್ರ ಮಾಡಿರುತ್ತೇವೆ. ಬಣ್ಣ ಹಚ್ಚಿದ ತಕ್ಷಣ ಅದೇ ಪಾತ್ರವಾಗುತ್ತೇವೆ. ಅದರಿಂದ ಹೊರಗೆ ನಮ್ಮ ಪ್ರತಿಭೆ ತೋರಿಸಲು ಸಿನಿಮಾ ಒಂದೊಳ್ಳೆಯ ಅವಕಾಶ. ಜನರೀಗ ಸ್ಮಾರ್ಟ್ ಆಗಿದ್ದಾರೆ. ಅವರೀಗ ಕಂಟೆಂಟ್ ನೋಡಿ ಯಾರನ್ನು ಬೆಂಬಲಿಸಬೇಕು ಎಂದು ತಿಳಿದುಕೊಂಡಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ ನಟಿ ನಿಶಾ ರವಿಕೃಷ್ಣನ್ .

ಕೋಟ್

ನನಗೆ ಬಾಲಿವುಡ್ ನ ‘ಮರ್ದಾನಿ’ ಸಿನಿಮಾದಲ್ಲಿರಾಣಿ ಮುಖರ್ಜಿ ನಟಿಸಿರುವ ಪವರ್ ಫುಲ್ ಮಹಿಳೆಯಂಥ ಪಾತ್ರಗಳನ್ನು ಮಾಡಲು ಇಷ್ಟ. ಅಂಥ ವೆಬ್ ಸಿರೀಸ್ ಬಂದರೂ ಅದರಲ್ಲಿನಟಿಸಲು ನಾನು ರೆಡಿ. ಸದ್ಯಕ್ಕೆ ಉತ್ತಮ ಪಾತ್ರಗಳಿಗೆ ಕಾಯುತ್ತಿದ್ದೇನೆ.

-ನಿಶಾ ರವಿಕೃಷ್ಣನ್ | ನಟಿ