ಮನೆಗೊಂದು ಗ್ರಂಥಾಲಯ ಅನುಷ್ಠಾನ
ಕುಷ್ಟಗಿ: ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು ಹಾಗೂ ಮಾಜಿ ಶಾಸಕ ಶರಣಪ್ಪ ವಕೀಲರ ಮನೆಯಲ್ಲಿಏ.18 ರಂದು
ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಜರುಗಲಿದೆ.
ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ , ಜಿಲ್ಲಾಜಾಗೃತಿ ಸಮಿತಿಯಿಂದ ಸಮಾರಂಭ ನಡೆಯಲಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟನೆ. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಕಸಾಪ ಜಿಲ್ಲಾಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ್ , ಶರಣಬಸಪ್ಪ ಕೋಲ್ಕಾರ, ಜಿ.ಎಸ್ . ಗೋನಾಳ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಜಾಗೃತಿ ಸಮಿತಿ ಸದಸ್ಯ ರವಿಂದ್ರ ಬಾಕಳೆ ತಿಳಿಸಿದ್ದಾರೆ.

