ವಿಕ ಸುದ್ದಿಲೋಕ ಮಂಗಳೂರು
ಲಯನ್ಸ್ ಜಿಲ್ಲೆ317ಡಿ ಯ ಸುಮಂಗಲ ಜಿಲ್ಲಾ ಕನ್ವೆಂಷನ್ ಸಮ್ಮೇಳನ ಏ.19ರಂದು ಅಡ್ಯಾರ್ ಗಾರ್ಡನ್ ನಲ್ಲಿನಡೆಯಲಿರುವುದು ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಈ ಸಮ್ಮೇಳವವನ್ನು ಜಿಲ್ಲೆಯ ಪ್ರಥಮ ಮಹಿಳೆ ಮಮತಾ ಶೆಣೈ ಉದ್ಘಾಟಿಸಲಿದ್ದಾರೆ. ಜಿಲ್ಲಾಗವರ್ನರ್ ಕುಡ್ಪಿ ಅರವಿಂದ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ, ವಂಶಿದರ್ ಬಾಬು ಭಾಗವಹಿಸಲಿದ್ದಾರೆ. ವಿದ್ವಾನ್ ಸಿ.ಎಸ್ . ನಟೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ನಿಕಟಪೂರ್ವ ಜಿಲ್ಲಾಗವರ್ನರ್ ಭಾರತಿ ಬಿ.ಎಂ., ಉಪ ಜಿಲ್ಲಾಗವರ್ನರ್ ಗಳಾದ ತಾರಾನಾಥ್ ಎಚ್ .ಎಂ., ಗೋವರ್ಧನ್ ಕೆ.ಶೆಟ್ಟಿ ಅವರನ್ನು ಗೌರವಿಸಲಾಗುವುದು ಎಂದರು.
ಲಯನ್ಸ್ ಸೇವಾ ಯೋಜನೆಯಡಿಯಲ್ಲಿಸುಮಾರು 25 ಲಕ್ಷ ರೂ. ವೆಚ್ಚದಲ್ಲಿಮೊಬೈಲ್ ಕಿಚನ್ ವಾಹನವನ್ನು ಇಸ್ಕಾನ್ ಬಿಸಿಯೂಟ ಯೋಜನೆಗೆ ಹಸ್ತಾಂತರಿಸಲಾಗುವುದು. ಲಯನ್ಸ್ ವೃಕ್ಷಾ ಬೀಜಾಂಕುರ ಯೋಜನೆಯಡಿಯಲ್ಲಿಗುರುಪುರ ಕೈಕಂಬ ಪ್ರದೇಶದ ಹೆದ್ದಾರಿ ಬದಿಯಲ್ಲಿ1 ಸಾವಿರ ಗಿಡ ನೆಡುವ ಕಾರ್ಯಕ್ರಮವಾಗಿದ್ದು, ಲಯನ್ಸ್ ಜಿಲ್ಲೆಯಲ್ಲಿಕನಿಷ್ಠ 10 ಸಾವಿರಕ್ಕಿಂತ ಮಿಕ್ಕಿ ದಾನಿಗಳ ಹಾಗೂ ಜಿಲ್ಲೆಯ ಸದಸ್ಯರ ಸಹಕಾರದಿಂದ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿಕಾರ್ಯದರ್ಶಿ ಸುಕಲತಾ ಭಂಡಾರಿ, ಚೀಫ್ ಅಡ್ವೈಸರ್ ದೇವದಾಸ್ ಭಂಡಾರಿ, ಕೋಶಾಧಿಕಾರಿ ಉಮಾ ಹೆಗಡೆ, ಜಿಲ್ಲಾಸಂಪರ್ಕ ಅಧಿಕಾರಿ ಸುದರ್ಶನ ಪಡಿಯಾರ್ ವಿಟ್ಲ, ಚಂದ್ರಹಾಸ ರೈ, ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.

