ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಏ.18 ಮತ್ತು 19ರಂದು ಎರಡು ದಿನ ತಿತಿಮತಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ತಿಳಿಸಿದ್ದಾರೆ.
ನಗರದಲ್ಲಿಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು, ‘‘ಜಿಲ್ಲಾರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ , ಲೂರ್ದು ಮಾತೆ ದೇವಾಲಯ ಪಾಲಿಬೆಟ್ಟ ಮತ್ತು ಫಾತಿಮಾ ಮಾತೆ ದೇವಾಲಯ ತಿತಿಮತಿ ಸಂಯುಕ್ತಾಶ್ರಯದಲ್ಲಿ15ನೇ ವರ್ಷದ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ. ಏ.18ರಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಡಾ.ಫ್ರಾನ್ಸಿಸ್ ಸೆರಾವೋ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಸಕ ಎ.ಎಸ್ .ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಧರ್ಮಗುರು ರೆ.ಫಾ ಮರಿಯಾ ರಾಜ್ ಜಾಜ್ ರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮುದಾಯದ 7 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ,’’ ಎಂದು ತಿಳಿಸಿದರು.
‘‘ಕ್ರಿಕೆಟ್ ಪಂದ್ಯಾವಳಿಯನ್ನು ರಾರ ಯಲಿಪಟು ಸಿಬಿ ಪೌಲ್ ಹಾಗೂ ಖ್ಯಾತ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿಸಂತ ಅನ್ನಮ್ಮ ದೇವಾಲಯದ ಗುರು ಫಾ.ಜೇಮ್ಸ್ ಡೊಮೊನಿಕ್ , ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ಫಾ.ಗಿಲ್ಬರ್ಟ್ ಡಿಸಿಲ್ವಾ, ಅಮ್ಮತ್ತಿ ಸಂಥೋನಿಯವರ ದೇವಾಲಯದ ಗುರು ಫಾ.ಮಾದಲೈ ಮುತ್ತು, ಕರ್ನಾಟಕ ರಾಜ್ಯ ಕ್ರೀಡಾ ಪ್ರಾದೀಕಾರ ಸಂಸ್ಥೆ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾಗ್ಯಾರೆಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಇತರರು ಪಾಲ್ಗೊಳಲಿದ್ದಾರೆ,’’ ಎಂದು ತಿಳಿಸಿದರು.
‘‘ಏ.19ರಂದು ರೋಮನ್ ಕ್ಯಾಥೋಲಿಕ್ ಅಸೋಶಿಯೇಷನ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸುಭಾಶ್ ಮ್ಯಾಥ್ಯೂ ಅಧ್ಯಕ್ಷತೆಯಲ್ಲಿಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಗುರು ರೆ.ಫಾ ಜೇಮ್ಸ್ ಡೊಮಿನಿಕ್ , ಮಡಿಕೇರಿ ಸಂತ ಮೈಕಲರ ದೇವಾಲಯದ ಗುರು ರೆ.ಫಾ.ದೀಪಕ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಡಿಕೇರಿ ಶಾಸಕ ಮಂತರ್ ಗೌಡ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾಕ್ರೈಸ್ತ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ,’’ ಎಂದು ಮಾಹಿತಿ ನೀಡಿದರು.
‘‘ಏ.18 ಮತ್ತು 19ರಂದು ಟೆನಿಸ್ ಬಾಲ್ ಕ್ರಿಕೆಟ್ , ಏ.19ರಂದು ಮಹಿಳೆಯರಿಗೆ ಥ್ರೋಬಾಲ್ , ಮಹಿಳೆಯರು ಮತ್ತು ಪುರುಷರಿಗೆ ಹಗ್ಗಜಗ್ಗಾಟ ಏರ್ಪಡಿಸಲಾಗಿದೆ. ಕ್ರಿಕೆಟ್ ಪಂದ್ಯಾಟದ ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ 30 ಸಾವಿರ ರೂ., ತೃತೀಯ 10 ಸಾವಿರ ರೂ., ಚತುರ್ಥ 5 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಥ್ರೋಬಾಲ್ ವಿಜೇತರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ., ಮಹಿಳೆಯರು ಮತ್ತು ಪುರುಷರಿಗೆ ಹಗ್ಗಜಗ್ಗಾಟದ ವಿಜೇತರಿಗೆ ಪ್ರತ್ಯೇಕವಾಗಿ ಪ್ರಥಮ 15 ಸಾವಿರ ರೂ., ದ್ವಿತೀಯ 8 ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು,’’ ಎಂದು ಜಾನ್ಸನ್ ಪಿಂಟೋ ವಿವರಿಸಿದರು.
ಅಸೋಸಿಯೇಷನ್ ಗೌರವಾಧ್ಯಕ್ಷ ಜೋಕಿಂ ವಾಸ್ , ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್ , ಜಿಲ್ಲಾಉಪಾಧ್ಯಕ್ಷ ಜೋಕಿಂ ರೋಡ್ರಿಗಸ್ , ಯುವ ಘಟಕದ ಜಿಲ್ಲಾಧ್ಯಕ್ಷ ಶಾಲಮ್ , ಸೋ.ಪೇಟೆ ಘಟಕದ ಅಧ್ಯಕ್ಷ ಡೆನ್ಸಿಲ್ ವರ್ಗೀಸ್ ಹಾಜರಿದ್ದರು.
ಫೋಟೊ: ಒಆಏ16ಓ- ಖಔಒಂಓ ಅಂಖಿಊಔಐಋಏ PಖಇTT ಒಇಇಖಿ
ಕ್ಯಾಪ್ಷನ್ : ಕ್ರೀಡಾಕೂಟದ ಬಗ್ಗೆ ಅಸೋಸಿಯೇಷನ್ ಪ್ರಮುಖರು ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.

