ನಟನೆಯಲ್ಲಿಕಲಿಕೆ ನಿರಂತರ
------
ಇಂಟ್ರೊ
ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಸದ್ಯ ‘ ಪವಿತ್ರ ಬಂಧನ ’ ಧಾರಾವಾಹಿಯ ದೇವ್ ಪಾತ್ರದ ಮೂಲಕ ಈಗ ಕಿರುತೆರೆಯ ಹಾಟ್ ಫೇವರಿಟ್ . ಯುವ ಮನಸ್ಸುಗಳ ಹೃದಯ ಗೆದ್ದಿರುವ ಸ್ಫುರದ್ರೂಪಿ ನಟ ತಮ್ಮ ನಟನಾ ಪಯಣದ ಬಗ್ಗೆ ಮಾತನಾಡಿದ್ದಾರೆ.
----
ನೇತ್ರಾವತಿ ಕೃಷ್ಣಮೂರ್ತಿ
ಈಗಷ್ಟೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಯುವ ನಟ ಸೂರಜ್ ಸಿಂಗ್ ಅವಕಾಶ ಸಿಕ್ಕ ಮೊದಲ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮನ ತಲುಪಿದ್ದಾರೆ. ನಟನಾ ವೃತ್ತಿ ಜೀವನಕ್ಕೆ ಅಡಿಪಾಯವಾಗಿರುವ ಧಾರಾವಾಹಿ ಹೊಸ ಅನುಭವ ನೀಡುತ್ತಿದ್ದೆ ಎಂದಿದ್ದಾರೆ ಸೂರಜ್ .
ಕಿರುತೆರೆ ಪ್ರೇಕ್ಷಕರ ಪ್ರೀತಿಯ ಅಣ್ಣಯ್ಯ ಆಗಿದ್ದೀರಿ ಪಾತ್ರ ಎಷ್ಟು ಖುಷಿ ನೀಡಿದೆ?
ಬಿಗ್ ಬಾಸ್ ನಂತರ ಸಿಕ್ಕ ದೊಡ್ಡ ಅವಕಾಶ ‘ಪವಿತ್ರ ಬಂಧನ’ ಧಾರಾವಾಹಿಯ ದೇವ್ ದೇಶ್ ಮುಖ್ (ಅಣ್ಣಯ್ಯ) ಪಾತ್ರ. ನಟನೆ ತೀರಾ ಹೊಸದು. ಈ ಬಗ್ಗೆ ತಿಳಿವಳಿಕೆ ಇರಲಿಲ್ಲ. ಒಪ್ಪಿಗೆ ಸೂಚಿಸಲು ಹಿಂಜರಿದೆ. ಆದರೆ ಪಾತ್ರದ ಬಗ್ಗೆ ಸಂಪೂರ್ಣ ವಿವರಣೆ ಕೇಳಿದಾಗ ವೈಯಕ್ತಿಕ ಜೀವನಕ್ಕೆ ಹತ್ತಿರವೆನಿಸಿತು. ದೇವ್ ಪಾತ್ರ ಹೇಗೆಂದರೆ ಹೆಚ್ಚು ಮಾತಿಲ್ಲ. ಗಂಭೀರ ಸ್ವಭಾವ. ಈ ಪಾತ್ರ ನನಗೆ ಒಪ್ಪಬಹುದೆಂದು ನಟನೆ ಮಾಡಲು ನಿರ್ಧರಿಸಿದೆ. ಆರಂಭದಲ್ಲಿಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ‘ಬಿಗ್ ಬಾಸ್ ’ ನಂತರ ಸೂರಜ್ ಎಂಬ ಜನಪ್ರಿಯತೆ ಈಗ ಧಾರಾವಾಹಿಯ ಪ್ರೀತಿಯ ಅಣ್ಣಯ್ಯ ಆಗಿ ಬದಲಾಗಿದೆ. ಹೊರಗೆ ಪ್ರೇಕ್ಷಕರಿಂದ ಅಣ್ಣಯ್ಯ ಎಂದು ಕರೆಸಿಕೊಳ್ಳುವಾಗ ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಿದ್ದೇನೆ ಎಂಬ ಹೆಮ್ಮೆ ಮತ್ತು ಖುಷಿ ಹೆಚ್ಚಾಗಿದೆ.
ಅಭಿನಯಕ್ಕೆ ಪ್ರೇಕ್ಷಕರಿಂದ ಬಂದ ಮಿಶ್ರ ಅಭಿಪ್ರಾಯಗಳನ್ನು ಹೇಗೆ ಬ್ಯಾಲೆನ್ಸ್ ಮಾಡಿದಿರಿ?
ಪ್ರಾರಂಭದಲ್ಲಿನಟನೆ ಕಷ್ಟ ಎನಿಸುತ್ತಿತ್ತು. ಏಕೆಂದರೆ ಕ್ಯಾಮೆರಾ ಹಾಗೂ ಲೈಟಿಂಗ್ ಆ್ಯಂಗಲ್ ಎಲ್ಲಾಹೊಸದು. ಮುಖದ ಹಾವಭಾವ ಹೇಗಿರಬೇಕು ಎಂಬುದೂ ನನಗೆ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಪ್ರೇಕ್ಷಕರಿಂದ ನಟನೆಯಲ್ಲಿಇನ್ನಷ್ಟು ಪಳಗಬೇಕು ಎಂಬಂತಹ ಕಮೆಂಟ್ ಗಳನ್ನು ಬರುತ್ತಿದ್ದವು. ಬಿಗ್ ಬಾಸ್ ಜನಪ್ರಿಯತೆ ನನ್ನ ನಟನೆಯಿಂದ ಕಳೆದುಕೊಂಡು ಬಿಡುತ್ತೇನೆ ಎಂಬ ಭಯ ಕೂಡ ಇತ್ತು. ಆದರೆ ಸಾಧಿಸುವ ಆತ್ಮವಿಶ್ವಾಸ ನನ್ನಲ್ಲಿತ್ತು. ಕಮೆಂಟ್ ಗಳನ್ನು ಪಾಸಿಟಿವ್ ಆಗಿ ಸ್ವೀಕರಿಸಿದೆ. ಸೂರಜ್ ಬದಲಾಗಿ ದೇವ್ ಆಗಿಯೇ ಜೀವಿಸಲು ಪ್ರಾರಂಭಿಸಿದೆ. ನಟನೆಯಲ್ಲಿಏನೆಲ್ಲಾತಪ್ಪುಗಳಾಗುತ್ತಿವೆ ಎಂದು ಒಬ್ಬ ಪ್ರೇಕ್ಷಕನಾಗಿ ಗುರುತಿಸಲು ಪ್ರಾರಂಭಿಸಿ, ಪ್ರತಿದಿನ ತಪ್ಪುಗಳನ್ನು ತಿದ್ದಿ, ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳುತ್ತಿದ್ದೇನೆ. ಈಗ ಪ್ರೇಕ್ಷರಿಂದ ಬರುತ್ತಿರುವ ನಟನೆಯಲ್ಲಿನ ಸುಧಾರಣೆಯ ಬಗೆಗಿನ ಕಾಮೆಂಟ್ ಗಳು ಖುಷಿ ನೀಡುತ್ತಿವೆ. ಮುಂದೆ ಇನ್ನಷ್ಟು ಕಲಿಯುವ ಆಸಕ್ತಿ ಹೆಚ್ಚಿದೆ. ಪರಭಾಷಾ ಧಾರಾವಾಹಿಗಳಿಂದಲೂ ಅವಕಾಶ ಬರುತ್ತಿವೆ. ಆದರೆ ಕನ್ನಡ ಕ್ಷೇತ್ರದಲ್ಲಿಸಾಧಿಸುವುದು ಸಾಕಷ್ಟಿದೆ. ಇಲ್ಲೇ ಬೆಳೆಯಬೇಕೆಂದುಕೊಂಡಿದ್ದೇನೆ.
ಸೂರಜ್ ಮತ್ತು ದೇವ್ ಇಬ್ಬರಿಗೂ ಇರುವ ವ್ಯತ್ಯಾಸವೇನು ?
ಸೂರಜ್ ತುಂಬಾ ಕಾಮ್ ಅಂಡ್ ಕಂಪೋಸ್ , ಹಾಸ್ಯ ಪ್ರಜ್ಞೆ ಕೂಡ ಇದೆ. ಸೂರಜ್ ನೀರಿದ್ದ ಹಾಗೆ. ಎಲ್ಲರ, ಎಲ್ಲದರ ಜತೆ ಬೆರೆತು ಹೋಗುತ್ತಾನೆ. ಆದರೆ ದೇವ್ ತುಂಬಾ ಗಂಭೀರ, ವರ್ಕೋಹಾಲಿಕ್ , ಮಿತ ಭಾಷಿ.
ಕೋಟ್ಸ್
ಬಿಗ್ ಬಾಸ್ ನಂತರ ತುಂಬಾ ಸಿನಿಮಾಗಳ ಅವಕಾಶ ಬಂತು. ಆದರೆ ಕಥೆ, ಪಾತ್ರ ನನಗೆ ಕನೆಕ್ಟ್ ಆಗಲಿಲ್ಲ. ನಟನೆ ಹೊಸದಾಗಿರುವುದರಿಂದ ಸಿನಿಮಾದಲ್ಲಿಹೀರೊ ಆಗಿಯೇ ಕಾಣಿಸಿಕೊಳ್ಳಬೇಕೆಂಬ ಆಸೆ ಇಲ್ಲ. ನಟನೆಯಲ್ಲಿಕಲಿಯುವುದು ಹೆಚ್ಚಿದೆ. ಚಿಕ್ಕ ಪಾತ್ರವಾದರೂ ಪ್ರೇಕ್ಷಕರ ಹೃದಯ ತಟ್ಟುವಂತಿರಬೇಕು. ನನ್ನ ಮೊದಲ ಸಿನಿಮಾ ನನ್ನ ಅಭಿಮಾನಿಗಳಿಗೆ ಇಷ್ಟವಾಗುವ ರೀತಿ ಇರಬೇಕು. ನೃತ್ಯ, ಮಾರ್ಷಲ್ ಆಟ್ಸ್ ನಂತಹ ತರಬೇತಿ ಪಡೆಯುತ್ತಿದ್ದೇನೆ. ಉತ್ತಮ ಬ್ಯಾನರ್ , ನಿರ್ದೇಶಕ, ಕಥೆ, ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ.
ಸೂರಜ್ ಸಿಂಗ್ | ನಟ, ಮಾಡಲ್

