ಬಸವಣ್ಣನವರು ಸಾಮಾಜಿಕ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿ

Contributed byhkhejmadybs@gmail.com|Vijaya Karnataka

ಮೂಲ್ಕಿ ತಾಲೂಕು ಪ್ರಜಾಸೌಧ ಆಡಳಿತ ಕೇಂದ್ರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು. ಉಪತಹಸೀಲ್ದಾರ್ ದಿಲೀಪ್ ರೋಡ್ಕರ್ ಅವರು ಬಸವಣ್ಣನವರ ಆದರ್ಶಗಳು ಕಾಲಕಾಲಕ್ಕೂ ಪ್ರಸ್ತುತ ಎಂದರು. 12ನೇ ಶತಮಾನದ ಸಮಾಜ ಸುಧಾರಕರಾದ ಬಸವಣ್ಣನವರು ಸಮಾನತೆ ಮತ್ತು ಸಹಬಾಳ್ವೆಯನ್ನು ಬೋಧಿಸಿದ್ದರು. ಅನುಭವ ಮಂಟಪದ ಕಲ್ಪನೆಯನ್ನು ಜಗತ್ತಿಗೆ ನೀಡಿದ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ.

basadravaranavare social reformer basavanna jayanti

ವಿಕ ಸುದ್ದಿಲೋಕ ಮೂಲ್ಕಿ

ವಿಶ್ವಗುರು ಬಸವಣ್ಣನವರು 12ನೇ ಶತಮಾನದ ಸಮಾಜ ಸುಧಾರಕ , ದಾರ್ಶನಿಕ ಹಾಗೂ ವಚನಕಾರರಾಗಿ ದಯವೇ ಧರ್ಮದ ಮೂಲವಯ್ಯ ಎಂಬ ತತ್ವದಡಿ ಸಮಾಜದಲ್ಲಿಸಮಾನತೆ ಮತ್ತು ಸಹಬಾಳ್ವೆಯನ್ನು ಬೋಧಿಸಿದ್ದರು. ಪ್ರಜಾಪ್ರಭುತ್ವದ ಮೂಲತತ್ವವಾದ ಅನುಭವ ಮಂಟಪದ ಕಲ್ಪನೆಯನ್ನು ಜಗತ್ತಿಗೆ ನೀಡಿದ ಬಸವಣ್ಣನವರ ಆದರ್ಶಗಳು ಕಾಲಕಾಲಕ್ಕೂ ಪ್ರಸ್ತುತ ಎಂದು ಮೂಲ್ಕಿ ತಾಲೂಕು ಉಪತಹಸೀಲ್ದಾರ್ ದಿಲೀಪ್ ರೋಡ್ಕರ್ ಹೇಳಿದರು.

ಮೂಲ್ಕಿ ತಾಲೂಕು ಪ್ರಜಾಸೌಧ ಆಡಳಿತ ಕೇಂದ್ರದಲ್ಲಿಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆಗೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ತಾಲೂಕು ಕಂದಾಯ ಇಲಾಖೆ ಅಧಿಕಾರಿ ಮೋಹನ್ , ವಿಎ ಸುಜಿತ್ ಹಾಗೂ ತಾಲೂಕು ಪ್ರಜಾಸೌಧ ಆಡಳಿತ ಕೇಂದ್ರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಫೋಟೋ:20ಎಮ್ ಎಲ್ ಕೆ1

ಕ್ಯಾ: ಮೂಲ್ಕಿ ತಾಲೂಕು ಪ್ರಜಾಸೌಧ ಆಡಳಿತ ಕೇಂದ್ರದಲ್ಲಿಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.