ಶ್ರಮಿಕರ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ

Contributed bys.aparaj7978@gmail.com|Vijaya Karnataka

ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ಶ್ರಮಿಕರ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. 36 ಕೋಟಿ ರೂ. ವೆಚ್ಚದಲ್ಲಿ 8 ಎಕರೆ ಪ್ರದೇಶದಲ್ಲಿ ಈ ಶಾಲೆ ನಿರ್ಮಾಣವಾಗಲಿದೆ. ನೋಂದಾಯಿತ ಕಾರ್ಮಿಕರ 6 ರಿಂದ 12ನೇ ತರಗತಿಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಆಧುನಿಕ ತರಗತಿ ಕೊಠಡಿ, ವಸತಿ, ಶುದ್ಧ ಕುಡಿಯುವ ನೀರು, ಉತ್ತಮ ಆಹಾರ, ಆಟದ ಮೈದಾನ ಸೇರಿದಂತೆ ಎಲ್ಲ ಸೌಲಭ್ಯಗಳು ಇರಲಿವೆ. 350 ಮಕ್ಕಳಿಗೆ ಅವಕಾಶವಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

new education based hostel for laborers groundbreaking ceremony conducted

ವಿಕ ಸುದ್ದಿಲೋಕ ಅಥಣಿ

ತಾಲೂಕಿನ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ36 ಕೋಟಿ ರೂ. ವೆಚ್ಚದಲ್ಲಿಶ್ರಮಿಕರ ವಸತಿ ಶಾಲೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ತಾಲೂಕಿನ ಚಿಕ್ಕಟ್ಟಿ ಗ್ರಾಮದ ಸರಕಾರಿ ಜಾಗದಲ್ಲಿಕಾರ್ಮಿಕ ಇಲಾಖೆಯ ಶ್ರಮಿಕರ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘‘ ತಾಲೂಕಿನಲ್ಲಿನೋಂದಾಯಿತ ಏಳು ಸಾವಿರ ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯಿಂದ ಅವರಿಗೆ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಅವರ ಮಕ್ಕಳಿಗೆ 6 ರಿಂದ 12ನೇ ತರಗತಿಯವರಿಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರಸ್ತುತ 8 ಎಕರೆ ಪ್ರದೇಶದಲ್ಲಿನಿರ್ಮಾಣಗೊಳ್ಳಲಿರುವ ಶ್ರಮಿಕರ ವಸತಿ ಶಾಲೆಯಲ್ಲಿಆಧುನಿಕ ತರಗತಿ ಕೊಠಡಿಗಳು, ವಸತಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಉತ್ತಮ ಆಹಾರ ವ್ಯವಸ್ಥೆ, ಆಟದ ಮೈದಾನ ಸೇರಿದಂತೆ ಎಲ್ಲಮೂಲ ಸೌಕರ್ಯಗಳು ಇರಲಿವೆ. 350 ಮಕ್ಕಳಿಗೆ ಇಲ್ಲಿಶಿಕ್ಷಣ ಪಡೆಯಲು ಅವಕಾಶವಿದೆ. 18 ತಿಂಗಳಲ್ಲಿಈ ಕಾಮಗಾರಿ ಮುಗಿಯಲಿದೆ,’’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ , ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಕಾರ್ಮಿಕ ಕಲ್ಯಾಣ ಮಂಡಳಿಯ ಉಪ ಆಯುಕ್ತ ಪಿ.ಜಿ.ನಾಗೇಶ, ಜಿಲ್ಲಾಕಾರ್ಮಿಕ ನಿರೀಕ್ಷಕ ಮಲ್ಲಿಕಾರ್ಜುನ ಜೋಗೇರಿ, ಅಥಣಿ ತಾಲೂಕು ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಢಾಲೆ, ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ರಾಜು ಗುಡೋಡಗಿ, ಸಯ್ಯದ್ ಅಮೀನ್ ಗದ್ಯಾಳ, ರಿಯಾಜ್ ಸನದಿ, ಮಲ್ಲಿಕಾರ್ಜುನ ಬುಟಾಳಿ, ಮುಖಂಡರಾದ ಮಲ್ಲುಕುಳ್ಳೊಳ್ಳಿ, ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ, ಆಸಿಫ್ ತಾಂಬೋಳಿ, ಗುತ್ತಿಗೆದಾರ ಪಿ. ಗಿರೀಶ, ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ನಿಕ್ಕಂ, ಸುರೇಶ ಮೋಪಗಾರ, ಕುಮಾರ ಬಡಿಗೇರ, ಅಪ್ಪಾಸಾಬ ಬೊಮ್ಮನಾಳ, ಕುಮಾರ ಮಾಳಿ, ಚಂದ್ರಶೇಖರ ಐಗಳಿ ಮತ್ತಿತರರಿದ್ದರು.

- 20ಅಥಣಿ 1

ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿಕಾರ್ಮಿಕ ಇಲಾಖೆಯ ಶ್ರಮಿಕರ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ ನೆರವೇರಿಸಿದರು.