ಕೆಇಎ ನೇಮಕಾತಿ ಅಧಿಸೂಚನೆ
ರಾಜ್ಯ ಕೃಷಿ ಇಲಾಖೆಯ ಗ್ರೂಪ್ ಬಿ ಹುದ್ದೆಗಳಿಗೆ ನೇಮಕಾತಿ | ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳಾಗಲು ಅವಕಾಶ
ಒಟ್ಟು ಹುದ್ದೆಗಳು
890
ಕ್ವಿಕ್ ಲುಕ್
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 10, 2026
ಶುಲ್ಕ ಪಾವತಿಗೆ ಕೊನೆಯ ದಿನ: ಮೇ 12, 2026
ಹೆಚ್ಚಿನ ಮಾಹಿತಿಗೆ ದೂರವಾಣಿ: 080ಧಿ23460460
ಅರ್ಜಿ ಸಲ್ಲಿಸಲು ವೆಬ್ ಸೈಟ್ : hಠಿಠಿps://್ಚಛಿಠಿಟ್ಞ್ಝಜ್ಞಿಛಿ.ka್ಟ್ಞaಠಿaka.ಜಟv.ಜ್ಞಿ/kಛಿa/
ಕರ್ನಾಟಕ ರಾಜ್ಯದ ಕೃಷಿ ಇಲಾಖೆಯ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿಖಾಲಿಯಿರುವ ಗ್ರೂಪ್ -ಬಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 890 ಹುದ್ದೆಗಳಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಮೇ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
ಕೃಷಿ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ81 ಕೃಷಿ ಅಧಿಕಾರಿ, 551 ಸಹಾಯಕ ಕೃಷಿ ಅಧಿಕಾರಿ ಸೇರಿದಂತೆ ಒಟ್ಟು 632 ಹುದ್ದೆಗಳು ಖಾಲಿ ಇವೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿ40 ಕೃಷಿ ಅಧಿಕಾರಿ ಹಾಗೂ 218 ಸಹಾಯಕ ಕೃಷಿ ಅಧಿಕಾರಿ ಸೇರಿದಂತೆ 258 ಹುದ್ದೆಗಳಿಗೆ ನೇಮಕ ನಡೆಯಲಿದೆ.
ವಿದ್ಯಾರ್ಹತೆ: ಶೇ.85 ರಷ್ಟು ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿಎಸ್ ಸ್ಸಿ/ಬಿಎಸ್ಸಿ(ಆನರ್ಸ್ ) ಕೃಷಿ, ಶೇ.15 ರಷ್ಟು ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) /ಬಿ.ಟೆಕ್ (ಆಹಾರ ತಂತ್ರಜ್ಞಾನ) / ಬಿಎಸ್ ಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) / ಬಿಎಸ್ ಸ್ಸಿ (ಆನರ್ಸ್ ) ಕೃಷಿ ಮಾರಾಟ ಮತ್ತು ಸಹಕಾರ / ಬಿಎಸ್ಸಿ (ಆನರ್ಸ್ ) ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್ /ಬಿಎಸ್ ಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) /ಬಿ.ಟೆಕ್ (ಜೈವಿಕ ತಂತ್ರಜ್ಞಾನ) / ಬಿಎಸ್ಸಿ (ಅಗ್ರಿಕಲ್ಚರಲ… ಎಂಜಿನಿಯರಿಂಗ್ /ಬಿ.ಟೆಕ್ (ಅಗ್ರಿಕಲ್ಚರಲ… ಎಂಜಿನಿಯರಿಂಗ್ ) ವಿದ್ಯಾರ್ಹತೆಯನ್ನು ಅಪೇಕ್ಷಿಸಲಾಗಿದೆ.
ಶೇ.85ರಷ್ಟು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿಎಸ್ ಸ್ಸಿ (ಕೃಷಿ) / ಬಿಎಸ್ಸಿ (ಆನರ್ಸ್ ) ಕೃಷಿ ಹಾಗೂ ಶೇ.15ರಷ್ಟು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) /ಬಿ.ಟೆಕ್ (ಆಹಾರ ತಂತ್ರಜ್ಞಾನ) / ಬಿಎಸ್ ಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) / ಬಿಎಸ್ ಸ್ಸಿ (ಆನರ್ಸ್ ) ಕೃಷಿ ಮಾರಾಟ ಮತ್ತು ಸಹಕಾರ / ಬಿಎಸ್ಸಿ (ಆನರ್ಸ್ ) ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂರ್ಟ್ /ಬಿಎಸ್ ಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) /ಬಿ.ಟೆಕ್ (ಜೈವಿಕ ತಂತ್ರಜ್ಞಾನ) / ಬಿಎಸ್ಸಿ (ಅಗ್ರಿಕಲ್ಬರಲ… ಎಂಜಿನಿಯರಿಂಗ್ /ಬಿ.ಟೆಕ್ (ಅಗ್ರಿಕಲ್ಚರಲ್ ಎಂಜಿನಿಯರಿಂಗ್ ) ವಿದ್ಯಾರ್ಹತೆ ಇರಬೇಕು.
ವೇತನ: ಕೃಷಿ ಅಧಿಕಾರ ಹುದ್ದೆಗೆ 69,250-1,34,200 ರೂ. ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ 65,950ಧಿ-1,24,900 ರೂ. ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 750, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 1, ಮಾಜಿ ಸೈನಿಕ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 500 ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕವಿದೆ.
ಪರೀಕ್ಷಾ ವಿಧಾನ: ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ ಲೈನ್ ಒಎಂಆರ್ ಮಾದರಿಯಲ್ಲಿನಡೆಸಲಾಗುವುದು. ಅರ್ಹತೆಗಾಗಿ ಕನಿಷ್ಠ ಶೇ. 35 ಅಂಕ ಗಳಿಸುವುದು ಕಡ್ಡಾಯ. ಬೆಂಗಳೂರು ನಗರ ಹಾಗೂ ಧಾರವಾಡ ಕೇಂದ್ರಗಳಲ್ಲಿಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಲು ಅವಕಾಶವಿಲ್ಲ.
ಪರೀಕ್ಷಾ ದಿನಾಂಕ: ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ಜೂನ್ 6ರಂದು ನಡೆಯಲಿದೆ. ಪತ್ರಿ 1 ಜೂನ್ 14ರ ಬೆಳಗ್ಗೆ ಹಾಗೂ ಪತ್ರಿಕೆ 2 ದೇ ದಿನ ಮಧ್ಯಾಹ್ನ ನಡೆಯಲಿದೆ.
ಉಳಿಕೆ ಮೂಲ ವೃಂದ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಜೂನ್ 6ರಂದು ನಡೆದರೆ, ಪತ್ರಿಕೆ 1 ಜೂನ್ 7ರ ಬೆಳಗ್ಗೆ ಹಾಗೂ ಪತ್ರಿಕೆ 2 ಅದೇ ದಿನ ಮಧ್ಯಾಹ್ನ ನಡೆಯಲಿದೆ.
ಬಾಕ್ಸ್
ಇತ್ತ ಗಮನಿಸಿ
ಅರ್ಜಿ ಸಲಿಸುವ ಮುನ್ನ ಕೆಇಎ ವೆಬ್ ಸೈಟ್ ನಲ್ಲಿಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ಅದರ ಒಂದು ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಹಾಗೂ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಕಾಯ್ದಿಟ್ಟುಕೊಳ್ಳಬೇಕು.
ಈಗಾಗಲೇ ಸೇವೆಯಲ್ಲಿರುವ / ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಆಯ್ಕೆಯಾದಲ್ಲಿಅವರ ನೇಮಕಾತಿ ಪ್ರಾಧಿಕಾರಗಳಿಂದ ನಿಗದಿತ ನಮೂನೆಯಲ್ಲಿನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಸೇವಾ ವಿವರಗಳನ್ನು ಅರ್ಜಿಯಲ್ಲಿನಮೂದಿಸಬೇಕು. ಸುಳ್ಳು ಮಾಹಿತಿಯನ್ನು ನಮೂದಿಸಿದ್ದಲ್ಲಿಅನರ್ಹಗೊಳಿಸಲಾಗುವುದು.
ಪ್ರಾಧಿಕಾರವು ಅಭ್ಯಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸುವುದಿಲ್ಲ.
ಶುಲ್ಕ ಪಾವತಿಸಲು ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಕೊನೆಯ ದಿನಾಂಕವಾಗುವುದು.
ಅಭ್ಯರ್ಥಿಯು ಅರ್ಜಿಯಲ್ಲಿನೀಡುವ ಮೊಬೈಲ… ಸಂಖ್ಯೆ/ಇ-ಮೇಲ… ಅಂತಿಮವಾಗಿದ್ದು, ಎಲ್ಲಾ ಮಾಹಿತಿಗಳನ್ನು ಅದೇ ಮೊಬೈಲ… ಸಂಖ್ಯೆ/ಇ-ಮೇಲ…ಗಳಿಗೆ ಕಳುಹಿಸಿಕೊಡಲಾಗುತ್ತದೆ. ನಂತರದಲ್ಲಿಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.

