ಬಸವೇಶ್ವರ ದೇವಾಲಯದಲ್ಲಿಬಸವ ಜಯಂತಿ ಪ್ರಯುಕ್ತ ಪಾನಕ ಸೇವೆ

Contributed bydevimanjum@gmail.com|Vijaya Karnataka

ಗೌರಿಬಿದನೂರಿನ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಬಸವಣ್ಣನಿಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನೆರವೇರಿತು. ಭಕ್ತಾದಿಗಳಿಗೆ ಪಾನಕ, ಹೆಸರುಬೇಳೆ ಸೇವೆ ನೀಡಲಾಯಿತು. ನಗರದ ಸಾರ್ವಜನಿಕರು, ಹಿರಿಯರು ದೇವಾಲಯಕ್ಕೆ ಆಗಮಿಸಿ ಬಸವಣ್ಣನಿಗೆ ನಮನ ಸಲ್ಲಿಸಿದರು. ಗೌರಿಬಿದನೂರಿನಲ್ಲಿ ಇದು ಏಕೈಕ ಬಸವ ದೇವಾಲಯವಾಗಿದ್ದು, ಬಸವ ಜಯಂತಿಗೆ ವಿಶೇಷ ಪೂಜೆ ನಡೆಯುತ್ತದೆ.

basava jayanti special mahamangalarati and panaka service at basaveshwara temple

ಗೌರಿಬಿದನೂರು : ನಗರದ ಬಜಾರ್ ರಸ್ತೆಯ ಪುರಾತನ ಬಸವೇಶ್ವರ ದೇವಾಲಯದಲ್ಲಿಬಸವ ಜಯಂತಿ ಪ್ರಯುಕ್ತ ಬಸವಣ್ಣನಿಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ ಮಹಾಮಂಗಳಾರತಿ ನೆರವೇರಿಸಲಾಯಿತು. ನಗರದ ಮರಿಗಮ್ಮ ಸಲ್ಲಾಪುರಮ್ಮ ಸೇರಿದಂತೆ ವಿವಿಧ ಗ್ರಾಮ ದೇವತೆಗಳ ಸಂಪರ್ಕ ಈ ದೇವಾಲಯಕ್ಕೆ ಇದೆ ಎಂದು ಹಿರಿಯರು ಹೇಳುತ್ತಾರೆ. ಈ ನಿಟ್ಟಿನಲ್ಲಿವಷÜರ್ ಕ್ಕೊಂದು ಬಾರಿ ಗ್ರಾಮ ದೇವತೆಗಳಿಗೆ ಅನ್ನ ಶಾಂತಿ, ಕಾಯಿ ಶಾಂತಿ ಕಾರ್ಯಕ್ರಮಗಳನ್ನು ಈ ದೇವಾಲಯದ ಮುಂದೆ ಇಂದಿಗೂ ಹಮ್ಮಿಕೊಳ್ಳುತ್ತಾರೆ. ಪಾನಕ ಸೇವೆ : ಬಸವೇಶ್ವರ ಮೂರ್ತಿಗೆ ವಿಶೇ?Ü ಪೂಜೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ನೆರೆವೇರಿ ಸಲಾಯಿತು . ಭಕ್ತಾದಿಗಳಿಗೆ ಪಾನಕ ಹೆಸರುಬೇಳೆ ಸೇವೆ ಹಮ್ಮಿಕೊಳ್ಳಲಾಗಿತ್ತು. ನಗರದ ಸಾರ್ವಜನಿಕರು ಹಾಗೂ ಹಿರಿಯರು ದೇವಾಲಯಕ್ಕೆ ಆಗಮಿಸಿ ಪುಷ್ಪನಮನ ಸಲ್ಲಿಸಿ ಬಸವಣ್ಣ ಮೂರ್ತಿಗೆ ನಮಿಸಿದರು. ಗೌರಿಬಿದನೂರಿನಲ್ಲಿಪ್ರತ್ಯೇಕ ಏಕೈಕ ಬಸವ ದೇವಾಲಯ ಇದಾಗಿದ್ದು ಬಸವ ಜಯಂತಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ.