ಬಸ್ ಗೆ ಡಿಕ್ಕಿ; ಓರ್ವ ಸಾವು

Contributed byk.suresh1258@gmail.com|Vijaya Karnataka

ಭಾಲ್ಕಿ ತಾಲೂಕಿನ ಮೈಲಾರ ಬಳಿ ಕೆಕೆಆರ್‌ಟಿಸಿ ಬಸ್‌ಗೆ ಗೂಡ್ಸ್‌ ವಾಹನ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಗೂಡ್ಸ್‌ ವಾಹನ ಚಾಲಕ ಪ್ರಕಾಶ ವೈಜನಾಥ ಮೃತಪಟ್ಟಿದ್ದಾರೆ. ಇನ್ನೊಬ್ಬ ಶಿವಕುಮಾರ ಅಶೋಕ ಗಾಯಗೊಂಡಿದ್ದು, ಬೀದರ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಹಿಂಭಾಗ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bus collision results in one death

ಬಸ್ ಗೆ ಡಿಕ್ಕಿ; ಓರ್ವ ಸಾವು

ಭಾಲ್ಕಿ: ತಾಲೂಕಿನ ಮೈಲಾರ ಸಮೀಪ ಬೀದರ್ ನಿಂದ ಭಾಲ್ಕಿ ಕಡೆಗೆ ಹೊರಟಿದ್ದ ಕೆಕೆಆರ್ ಟಿಸಿ ಬಸ್ ಗೆ ಹಿಂದಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಪ್ರಕಾಶ ವೈಜನಾಥ (30) ಮೃತ ಚಾಲಕ. ಇನ್ನೋರ್ವ ಶಿವಕುಮಾರ ಅಶೋಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೀದರ್ ನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ಹೊಡೆತಕ್ಕೆ ಗೂಡ್ಸ್ ವಾಹನದ ಮುಂಭಾಗ ಬಸ್ ಹಿಂಭಾಗದ ಒಳಗಡೆ ಸಿಲುಕಿಕೊಂಡಿದೆ. ಬಸ್ ಹಿಂಭಾಗ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಧನ್ನೂರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.