ನಾಮಫಲಕ ನಿರ್ಮಾಣಕ್ಕೆ ಭೂಮಿಪೂಜೆ

Contributed byvijendraprabhubr@gmail.com|Vijaya Karnataka

ಬನ್ನೂರುಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಮಾನು ನಾಮಫಲಕ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು. ಮೈಮುಲ್‌ ಮಾಜಿ ಅಧ್ಯಕ್ಷ ಆರ್‌.ಚಲುವರಾಜು ಅವರು ಭೂಮಿಪೂಜೆ ನೆರವೇರಿಸಿದರು. ಹಳೆ ವಿದ್ಯಾರ್ಥಿಯಾಗಿ ಕಾಲೇಜಿಗೆ ಸೇವಾಕಾರ್ಯ ಮಾಡುವ ಆಸೆ ಈಡೇರಿದೆ ಎಂದು ಅವರು ತಿಳಿಸಿದರು. ಮಾಜಿ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಶೀಘ್ರ ಕಾಮಗಾರಿ ನಡೆಯಲಿದೆ. ಕಾಲೇಜಿನ ಶೋಭೆ ಹೆಚ್ಚಿಸುವ ಈ ಕಾರ್ಯಕ್ಕೆ ಎಲ್ಲರ ಸಹಕಾರವಿದೆ.

groundbreaking ceremony for kamanu nameplate in bannuru

ನಾಮಫಲಕ ನಿರ್ಮಾಣಕ್ಕೆ ಭೂಮಿಪೂಜೆ

ವಿಕ ಸುದ್ದಿಲೋಕ ಬನ್ನೂರು

ಪಟ್ಟಣದ ಸಂತೆಮಾಳದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಮಾನು ನಾಮಫಲಕಕ್ಕೆ ಮೈಮುಲ್ ಮಾಜಿ ಅಧ್ಯಕ್ಷ ಆರ್ .ಚಲುವರಾಜು ಭೂಮಿಪೂಜೆ ನೆರವೇರಿಸಿದರು.

ಬಧಿಳಿಕ ಮಾತನಾಡಿದ ಅವರು, ‘‘ನಾನು ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಹಲವಾರು ವರ್ಷಗಳಿಂದ ನಾನು ಓದಿದಂತಹ ಕಾಲೇಜಿಗೆ ಏನಾದರೂ ಸೇವಾಕಾರ್ಯ ಮಾಡಬೇಕು ಎನ್ನುವಂತಹ ಆಸೆ ಇತ್ತು. ಆದರೆ, ಈಗ ಈ ಆಸೆಗೆ ಕಾಲ ಕೂಡಿ ಬಂದಿದ್ದು, ಮಾಜಿ ಪ್ರಾಂಶುಪಾಲ ಗೂಳೇಗೌಡರ ಮಾರ್ಗದರ್ಶನದಂತೆ ಕಮಾನು ನಾಮಫಲಕಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಶೀಘ್ರ ಕೆಲಸ ನಡೆಯಲಿದೆ,’’ ಎಂದು ತಿಳಿಸಿದರು.

ನಂತರ ಮಾಜಿ ಪ್ರಾಂಶುಪಾಲ ಗೂಳೇಗೌಡ ಮಾತನಾಡಿ,‘‘ನನ್ನ ಸೇವಾ ಅವಧಿಯಲ್ಲಿಸಾಕಷ್ಟು ಬಾರಿ ಕಮಾನು ವಿಚಾರವನ್ನು ಅವರಿಗೆ ತಿಳಿಸಿದ್ದು, ಅವರ ಕೆಲಸದ ಒತ್ತಡದಿಂದ ಕಾರ್ಯ ಸ್ಥಗಿತವಾಗಿತ್ತು. ಆದರೆ, ಇಂದು ತಮ್ಮ ಸ್ವಂತ ಖರ್ಚಿನಲ್ಲಿಈ ಕಮಾನು ನಿರ್ಮಾಣಕ್ಕೆ ಮುಂದಾಗಿದ್ದು, ಕಾಲೇಜಿನ ಶೋಭೆ ಹೆಚ್ಚಿಸಿದಂತಾಗಿದೆ,’’ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ನಂಜುಂಡಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಂದೀಶ್ ಮಾತನಾಡಿದರು. ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಮರೀಗೌಡ, ಗುತ್ತಿಗೆದಾರ ಉಮೇಶ್ , ರಾಮಲಿಂಗೇಗೌಡ, ನಾಗೇಶ, ಕೃಷ್ಣೇಗೌಡ, ಮೂರ್ತಿ, ಅಶೋಕ್ , ಲೋಕೇಶ್ , ಕೆಂಪಲಿಂಗ, ಸಂತೋಷ್ , ರಂಜಿತ್ , ಸುಬ್ರಹ್ಮಣ್ಯ, ದೇವರಾಜು, ದಿಲೀಪ್ ಸೇರಿದಂತೆ ಹಲವರು ಇದ್ದರು.

17ಬನ್ನೂರು1

ಬನ್ನೂರಿನ ಸಂತೆಮಳದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಶುಕ್ರವಾರ ಮೈಮುಲ್ ಮಾಜಿ ಅಧ್ಯಕ್ಷ ಆರ್ . ಚಲುವರಾಜು ಕಮಾನು ನಾಮಫಲಕಕ್ಕೆ ಭೂಮಿಪೂಜೆ ನೆರವೇರಿಸಿದರು. ಮೈಮುಲ್ ಮಾಜಿ ಅಧ್ಯಕ್ಷ ಆರ್ .ಚಲುವರಾಜು, ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ, ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಂದೀಶ್ , ನಿವೃತ್ತ ಪ್ರಾಂಶುಪಾಲ ಗೂಳೇಗೌಡ, ಮರೀಗೌಡ, ಗುತ್ತಿಗೆದಾರ ಉಮೇಶ್ ಇದ್ದರು.