ಅಸಮಾನತೆ , ತಾರತಮ್ಯ ಇಂದಿಗೂ ಜೀವಂತ
ಪ್ರಾಧ್ಯಾಪಕಿ ಡಾ.ಎಚ್ .ಆರ್ . ರೇಖಾ ಕಳವಳ
ವಿಕ ಸುದ್ದಿಲೋಕ ನಂಜನಗೂಡು
ದೇಶದಲ್ಲಿಸಾಮಾಜಿಕ, ಲಿಂಗ ಅಸಮಾನತೆ, ಜಾತಿ ತಾರತಮ್ಯಗಳಂತಹ ದುಷ್ಟ ಆಚರಣೆಗಳು ಇಂದಿಗೂ ಜೀವಂತವಾಗಿರುವುದು ದುರ್ದೈವದ ಸಂಗತಿ. ಇವುಗಳನ್ನು ಹೋಗಲಾಡಿಸಿ ಡಾ.ಬಿ.ಆರ್ . ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಯಲ್ಲಿಪ್ರಬುದ್ಧ ಭಾರತವನ್ನು ಕಟ್ಟುವಲ್ಲಿಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದೆ ಎಂದು ಪ್ರಾಧ್ಯಾಪಕಿ ಡಾ.ಎಚ್ .ಆರ್ . ರೇಖಾ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಆಯೋಜಿಸಿದ್ದ ಡಾ.ಬಿ.ಆರ್ . ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಡಾ.ಬಿ.ಆರ್ . ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಆಧಾರದ ಮೇಲೆ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಲು, ಶಿಕ್ಷಣ ಒಂದೇ ಪ್ರಮುಖ ಅಸ್ತ್ರ. ನಾವೆಲ್ಲರೂ ಶಿಕ್ಷಣವನ್ನು ಪಡೆದಾಗ ಮಾತ್ರ ಆಧುನಿಕ ಪ್ರಗತಿಪರರಾಗಿ ರೂಪುಗೊಂಡು ಜನರಲ್ಲಿಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಮತ್ತು ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಭವ್ಯ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ,’’ ಎಂದರು.
‘‘ಶಿಕ್ಷಣ ಎನ್ನುವುದು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಬಾಬಾ ಸಾಹೇಬರು ಹೇಳಿರುವಂತೆ ಸ್ವಾತಂತ್ರ್ಯಕ್ಕೆ, ಒಗ್ಗಟ್ಟಾಗುವುದಕ್ಕೆ ಹಾಗೂ ಜಾಗೃತಿ ಹೊಂದುವಂತಹ ಶಿಕ್ಷಣ ಅತಿ ಅವಶ್ಯಕ. ಬಾಬಾ ಸಾಹೇಬರ ತತ್ತ$್ವ ಚಿಂತನೆಯನ್ನು ಪೂರ್ಣಗೊಳಿಸಲು ನಾವೆಲ್ಲರೂ ಪಣತೊಟ್ಟು ನಮ್ಮ ಮುಂದಿರುವ ಅಡೆತಡೆಗಳನ್ನು ಮೆಟ್ಟಿ ನಿಂತು ಬಲಿಷ್ಠ ಭಾರತ ಕಟ್ಟಲು ಮುಂದಾಗಬೇಕಿದೆ,’’ ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ. ಕೆಂಪೇಗೌಡ, ಪ್ರಾಧ್ಯಾಪಕರಾದ ಡಾ.ಬಸವನಗೌಡ, ಡಾ.ಮಹದೇವ ಪ್ರಸಾದ್ , ಇತರರಿದ್ದರು.
ಎಂವೈಎಸ್ 16ಎನ್ ಜಿಡಿ1
ನಂಜನಗೂಡು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಡಾ.ಬಿ.ಆರ್ . ಅಂಬೇಡ್ಕರ್ ಅವರ 135ನೇ ಜಯಂತಿ ಆಚರಿಸಲಾಯಿತು.

