ಪ್ರಜಾಪ್ರಭುತ್ವದಿಂದ ದೇಶಕ್ಕೆ ವಿಶೇಷ ಸ್ಥಾನಮಾನ

Contributed bykakanakotekhedda@gmail.com|Vijaya Karnataka

ಭಾರತದ ಪ್ರಜಾಪ್ರಭುತ್ವ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ತಂದಿದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನದಿಂದ ದೇಶ ಸುಭದ್ರವಾಗಿದೆ. ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಮತದಾನದ ಹಕ್ಕು ಸೇರಿದಂತೆ ಹಲವು ಹಕ್ಕುಗಳು ದೊರೆತಿವೆ. ಶಾಸಕ ಅನಿಲ್‌ ಚಿಕ್ಕಮಾದು ಅವರು ಈ ವಿಚಾರಗಳನ್ನು ತಿಳಿಸಿದರು. ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ.

democracy of india and its economic progress

ಪ್ರಜಾಪ್ರಭುತ್ವದಿಂದ ದೇಶಕ್ಕೆ ವಿಶೇಷ ಸ್ಥಾನಮಾನ

* ಶಾಸಕ ಅನಿಲ್ ಚಿಕ್ಕಮಾದು ಅಭಿಮತ

ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರಿಂದ ದೇಶಕ್ಕೆ ಜಗತ್ತಿನಲ್ಲಿವಿಶೇಷ ಸ್ಥಾನಮಾನ ದೊರೆತಿದೆ. ಅದಕ್ಕೆ ಡಾ.ಬಿ.ಆರ್ . ಅಂಬೇಡ್ಕರ್ ಕಾರಣರಾಗಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಡಾ.ಬಿ.ಆರ್ .ಅಂಬೇಡ್ಕರ್ ಭವನದಲ್ಲಿನಡೆದ ಡಾ.ಬಿ.ಆರ್ .ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿ, ‘‘ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿಅಲ್ಲಿನ ಆಡಳಿತ ವ್ಯವಸ್ಥೆಯ ಅರಾಜಕತೆಯಿಂದ ಅಲ್ಲಿನ ಆರ್ಥಿಕ ಪರಿಸ್ಥಿತಿಗೆ ಹಿನ್ನೆಡೆ ಆಗಿದ್ದು, ದೇಶ ದಿವಾಳಿಯತ್ತ ಹೊರಳಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಭಾರತದಲ್ಲಿಸುಭದ್ರ ಸಂವಿಧಾನ ಇರುವುದರಿಂದ ಭಾರತ ದೇಶದಲ್ಲಿಅರಾಜಕತೆ ಉಂಟಾಗಿಲ್ಲ. ದೇಶ ಸುಭದ್ರವಾಗಿದೆ. ಸ್ವಾತಂತ್ರ್ಯ ನಂತರದಲ್ಲಿದೇಶದ ಮಹಿಳೆಯರಿಗೆ ಮತದಾನದ ಹಕ್ಕು ಸೇರಿದಂತೆ ಅನೇಕ ಸ್ಥಾನಮಾನ ನೀಡಲಾಗಿದೆ. ಹಾಗಾಗಿ ಮಹಿಳೆಯರ ಅಂಬೇಡ್ಕರ್ ಕುರಿತು ಹೆಚ್ಚು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು,’’ ಎಂದರು.

‘‘ತಾಲೂಕಿನ ಜನತೆ ತಮ್ಮ ಕುಟುಂಬಕ್ಕೆ ಮೂರು ಬಾರಿ ಶಾಸಕರಾಗುವ ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಇಡೀ ಕುಟುಂಬ ಚಿರಋುಣಿಯಾಗಿದೆ. ತಾಲೂಕಿನಲ್ಲಿಕೂಡ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದೆ. ಹಂತ ಹಂತವಾಗಿ ಎಲ್ಲಾಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ತಮ್ಮ ಅವಧಿಯಲ್ಲಿತಾಲೂಕಿನಲ್ಲಿಇದುವರೆಗೂ ಒಂದೇ ಒಂದು ಕೋಮು ಗಲಭೆ ಆಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇನೆ. ಅಧಿವೇಶನದಲ್ಲಿತಾಲೂಕಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಿದ್ದೇನೆ,’’ ಎಂದು ತಿಳಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ್ ಮಾತನಾಡಿದರು. ತಹಸೀಲ್ದಾರ್ ಶ್ರೀನಿವಾಸ್ , ತಾಪಂ ಇಒ ಧರಣೇಶ್ , ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್ . ರಾಜು, ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜು, ಭೀಮನಹಳ್ಳಿ ಸೋಮೇಶ್ , ನಂಜಪ್ಪ, ಜಿ.ಪಂ. ಮಾಜಿ ಸದಸ್ಯ ಎಚ್ .ಸಿ. ಮಂಜುನಾಥ್ , ಪುರಸಭಾ ಮಾಜಿ ಸದಸ್ಯ ಎಚ್ .ಸಿ. ನರಸಿಂಹಮೂರ್ತಿ, ಚಿಕ್ಕನಾಯಕ, ಪರಶಿವಮೂರ್ತಿ, ಎಂ.ಡಿ. ಮಂಚಯ್ಯ ಹಾಜರಿದ್ದರು.

ಪೋಟೋ ಇದೆ;ಋ್ಗಖ16ಏಈಓ2ಇ

ಎಚ್ .ಡಿ.ಕೋಟೆ ಪಟ್ಟಣದ ಡಾ.ಬಿ.ಆರ್ . ಅಂಬೇಡ್ಕರ್ ಭವನದಲ್ಲಿನಡೆದ ಕಾರ್ಯಕ್ರಮದಲ್ಲಿಡಾ.ಬಿ.ಆರ್ . ಅಂಬೇಡ್ಕರ್ ಭಾವಚಿತ್ರಕ್ಕೆ ಶಾಸಕ ಅನಿಲ್ ಚಿಕ್ಕಮಾದು ಪುಷ್ಪಾರ್ಚನೆ ಮಾಡಿದರು.