ಶರಣಬಸವೇಶ್ವರ ಜಾತ್ರೆಗೆ ಚಾಲನೆ
ವಿಕ ಸುದ್ದಿಲೋಕ ಹನುಮಸಾಗರ
ಸಮೀಪದ ಕಾಟಾಪುರ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಹಾಗೂ ಗ್ರಾಮದೇವತೆ ಜಾತ್ರೆ ನಿಮಿತ್ತ ಸೋಮವಾರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿಹೋಮ, ಹವನ, ಪಂಚಾಮೃತ, ರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ101 ಜೋಡೆತ್ತುಗಳ ಮೆರವಣಿಗೆ, 108 ಮುತ್ತೆತ್ರೖದೆಯರಿಂದ ಕುಂಭ ಮೆರವಣಿಗೆ ನಡೆಯಿತು. ನಂತರ 22 ಜೋಡಿಗಳ ಸಾಮೂಹಿಕ ಮದುವೆ ನಡೆದವು. ಸಂಜೆ ಭಕ್ತರ ಸಮ್ಮುಖದಲ್ಲಿರಥೋತ್ಸವ ನಡೆಯಿತು. ಶರಣಬಸವೇಶ್ವರ ಶಿಕ್ಷಣ ಹಾಗೂ ಗ್ರಾಮೀಣಾಭೀವೃದ್ಧಿ ಟ್ರಸ್ಟ್ ನ ಸದಸ್ಯರು, ಗ್ರಾಮದ ಮುಖಂಡರು, ನಾನಾ ಸಮುದಾಯದವರು ಇದ್ದರು.
---
ಕೆಪಿಎಲ್ 20ಎಚ್ ಎಸ್ ಆರ್ ಫೋಟೊ3:
ಹನುಮಸಾಗರ ಸಮೀಪದ ಕಾಟಾಪುರದಲ್ಲಿಶರಣಬಸವೇಶ್ವರ ಜಾತ್ರೆ
ನಿಮಿತ್ತ ಸಾಮೂಹಿಕ ಮದುವೆ ನಡೆದವು.

