ವೀರಭದ್ರೇಶ್ವರಸ್ವಾಮಿ ಭಕ್ತಿಯ ಕೆಂಡದಾರ್ಚನೆ
ನ್ಯಾಮತಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ಮಂಗಳವಾರ ದೇಗುಲದ ಆವರಣದಲ್ಲಿನೂರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.
ಸಕಲವಾದ್ಯ ಮೇಳದೊಂದಿಗೆ ಸ್ವಾಮಿಯ ಉತ್ಸವಮೂರ್ತಿ ಪಲಕ್ಕಿಯಲ್ಲಿಹೊತ್ತು ವೀರಗಾಸೆ ಒಡಪುಗಳನ್ನು ಹಾಡುತ್ತ ಪಟ್ಟಣದ ರಾಜಬೀದಿಗಳಲ್ಲಿಸಂಚರಿಸಿ, ದೇಗುಲದ ಆವರಣಕ್ಕೆ ಬಂದಿತು. ಸಿದ್ಧ ಪಡಿಸಲಾಗಿದ್ದ ಅಗ್ನಿ ಕುಂಡದಲ್ಲಿವೀರಭದ್ರಸ್ವಾಮಿ ದೇವರು ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿಯನ್ನು ಹಾಯ್ದರು. ನಂತರ ಭಕ್ತರು ಕೆಂಡ ಹಾಯ್ದರು.
ಬಾಯಿಬೀಗ ಹರಕೆ ಹೊತ್ತ ಭಕ್ತರು ಪೂಜೆ ಸಲ್ಲಿಸಿದರು, ಬಂಧುಗಳು ಉಡಿಯನ್ನು ತುಂಬಿದರು. ಅರ್ಚಕರು ದೇವಾಯಲದ ಭಸ್ಮವನ್ನು ಲೇಪಿಸಿ ಬಾಯಿಬೀಗ ವಿಸರ್ಜನೆ ಮಾಡಿದರು. ದೇಗುಲ ಸಮಿತಿ ಪದಾಧಿಕಾರಿಗಳು ಸೇರಿದಂತೆ ಭಕ್ತರು ಭಾಗವಹಿಸಿದ್ದರು.
----
21ಎನ್ ಎಂಟಿ2
ನ್ಯಾಮತಿಯಲ್ಲಿಮಂಗಳವಾರ ಶ್ರೀ ವೀರಭದ್ರೇಶ್ವರಸ್ವಾಮಿ ಕೆಂಡದಾರ್ಚನೆ ಂಗವಾಗಿ ಭಕ್ತರು ಕೆಂಡದ ರಾಶಿಯನ್ನು ಹಾಯ್ದು ಭಕ್ತಿ ಸಮರ್ಪಿಸಿದರು.

